ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಕೆಯ ಬದುಕಲ್ಲಿ 'ಚೈತ್ರ'ಮಾಸ ಮೂಡಿಸೋದು ನಿಮ್ಮ ಕೈಯಲ್ಲಿದೆ

|
Google Oneindia Kannada News

ಚೈತ್ರಾ, ಆಕೆಯ ಹೆಸರಿನಲ್ಲೇ ಹೊಸ ಚಿಗುರಿನ, ಭರವಸೆಯ ಅರ್ಥವಿದೆ. ಕಣ್ತುಂಬ ವಕೀಲೆಯಾಗಬೇಕನ್ನೋ ಕನಸು, ಬಾಯ್ತುಂಬ ಎಂದಿಗೂ ಮಾಸದ ಜೀವನಪ್ರೀತಿಯ ನಗು.

ಬಹುಶಃ ಆಕೆಯನ್ನು ನೋಡಿ ವಿಧಿಗೂ ಹೊಟ್ಟೆಕಿಚ್ಚಾಗಿರಬೇಕು. ಪುಟ್ಟ ಸುಂದರ ಕುಟುಂಬವೊಂದರಲ್ಲಿ ಬಿರುಗಾಳಿ ಶುರುವಾಯ್ತು. ತಾಯ್ತನದ ಮಧುರ ಅನುಭೂತಿ ಪಡೆಯುತ್ತಿದ್ದ ಗರ್ಭಿಣಿಯ ಹೊಟ್ಟೆಯ ಸಣ್ಣಕರುಳಿನಲ್ಲಿ ಗ್ಯಾಂಗ್ರೀನ್ ಎಂಬ ಭೂತ ಹೊಂಚುಹಾಕುತ್ತ ಕುಳಿತಿತ್ತು. ಭೂಮಿಗೆ ಬರುವ ಮೊದಲೇ ಭ್ರೂಣ ಅಸುನೀಗಿತ್ತು! ಈಗೇನಿದ್ದರೂ ತಾಯಿಯನ್ನು ಉಳಿಸಿಕೊಳ್ಳುವ ಪಣ.

4 ವರ್ಷದ ಮಗುವಿನ ಕ್ಯಾನ್ಸರ್ ಚಿಕಿತ್ಸೆಗೆ ನಿಮ್ಮ ನೆರವು ಬೇಕಿದೆ4 ವರ್ಷದ ಮಗುವಿನ ಕ್ಯಾನ್ಸರ್ ಚಿಕಿತ್ಸೆಗೆ ನಿಮ್ಮ ನೆರವು ಬೇಕಿದೆ

Heart meling story of a woman

ಸಾಮಾಜಿಕ ಜಾಲತಾಣಗಳಲ್ಲೂ ಮಾನವೀಯತೆಯ ಸಂಚಲನ ಮೂಡಿಸುತ್ತಿರುವ ಚೈತ್ರಾ ಕತೆ ಕೇಳಿದರೆ ಕಣ್ಣಾಲಿಗಳು ತುಂಬುತ್ತವೆ. ಪಿಯುಸಿ ಮುಗಿಯುತ್ತಿದ್ದಂತೆಯೇ ಮದುವೆ, ವಕೀಲೆಯಾಗಬೇಕೆಂಬ ಆಕೆಯ ಕನಸಿಗೆ ಪತಿ ನಾಗೇಶ ಹೆಗಲಾಗಿ ನಿಂತು, ಆಕೆಯನ್ನು ಮತ್ತೆ ಕಾಲೇಜಿಗೆ ಕಳಿಸಿದರೂ ಆ ಸಂತಸ ಹೆಚ್ಚು ದಿನ ಉಳಿಯಲಿಲ್ಲ. ಕುಟುಂಬದ ಒತ್ತಾಯಕ್ಕಾಗಿ ಮಗುವನ್ನು ಪಡೆಯುವುದು ಅನಿವಾರ್ಯವಾಗಿ ಕಾಲೇಜು, ಓದಿಗೆ ಅಲ್ಪವಿರಾಮ ಬಿತ್ತು.

ಕೆಲವೇ ದಿನಗಳಲ್ಲಿ ಗರ್ಭಿಣಿಯಾದ ಚೈತ್ರಾಗೆ ತಾಯ್ತನದ ಹೊಸ ಆಸೆ, ಸಂಭ್ರಮ ಹುಟ್ಟಿಕೊಂಡಿತ್ತು. ಕುಟುಂಬವೂ ಸಂತಸದ ಸಾಗರದಲ್ಲಿ ತೇಲುತ್ತಿತ್ತು. ಆದರೆ ಏಳು ತಿಂಗಳು ತುಂಬಿದ್ದ ಗರ್ಭಿಣಿಗೆ ಇದ್ದಕ್ಕಿದ್ದಂತೇ ವಿಪರೀತ ಬೆನ್ನುನೋವು ಶುರುವಾದಾಗ, ಗಾಬರಿಯಾದ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಗಲೇ ಎರಗಿದ್ದು ಬರಸಿಡಿಲು! ಆಕೆಯ ಸಣ್ಣ ಕರುಳಿನಲ್ಲಿ ಗ್ಯಾಂಗ್ರಿನ್ ಎಂಬ ಭೂತ ಹೊಂಚುಹಾಕುತ್ತ ಕೂತಿತ್ತು. ಭ್ರೂಣವೂ ಗರ್ಭದಲ್ಲೇ ಅಸುನೀಗಿತ್ತು.

ಚಿಕಿತ್ಸೆಗೆ 30 ಲಕ್ಷ ರೂ. ಬೇಕು! ಮಧ್ಯಮ ವರ್ಗದ ಕುಟುಂಬ ಅಷ್ಟೆಲ್ಲ ಹಣ ಹೊಂದಿಸೋದು ಹೇಗೆ? ಹಣ ಹೊಂದಿಸುವವರೆಗೂ ಆಕೆ ಬದುಕಿರಬೇಕು ಅಂದ್ರೆ ಆಕೆಗೆ ಪ್ರತಿ ದಿವಸ, Total parental Nutrion ಎಂಬ ಇಂಜೆಕ್ಸನ್ ಕೊಡಬೇಕು. ಆ ಒಂದು ಇಂಜಕ್ಷನ್ ಬೆಲೆ 4000 ರೂ.! ಈಗಾಗಲೇ ಕುಟುಂಬ 11 ಲಕ್ಷ ರೂ. ಸಾಲ ಮಾಡಿಕೊಂಡಿದೆ.

ಎಂತೆಂಥದೋ ಕಾರಣಕ್ಕೆ ಸುಮ್ಮನೆ ವ್ಯಯವಾಗುವ ನಮ್ಮ ಹಣ, ಚೈತ್ರಾಳ ಬದುಕಿನ, ಆಕೆಯ ಕುಟುಂಬದ ನಗುವನ್ನು ಮರಳಿ ಗಳಿಸಿಕೊಡಬಹುದು! ಒಂದು ತಿಂಗಳು ಸಿನೆಮಾ ನೋಡುವುದಕ್ಕೆಂದೋ, ಹೊಟೇಲ್ ಗೆಂದೋ, ಪ್ರವಾಸಕ್ಕೆಂದೋ ವ್ಯಯಮಾಡುವ ಹಣವನ್ನೇ ಆ ಕುಟುಂಬಕ್ಕೆ ನೀಡಿದರೆ ಒಂದು ಚೈತ್ರಾ ಬದುಕಿಯಾಳು! ಆಕೆಗೂ ಪ್ರತಿಕ್ಷಣ ಬದುಕುವ ಛಲ. ಯಾರೋ ಬಂದಾರು, ತನ್ನ ಬದುಕಿಸಿಯಾರು ಎಂಬ ದೃಢ ಭರವಸೆ. ಅದಕ್ಕೆಂದೇ ಮಿಣುಕುವ ಮೊಂಬತ್ತಿಯಂತಾಗಿರುವ ತನ್ನ ಜೀವವನ್ನೂ ಜೋಪಾನವಾಗಿ ಹಿಡಿದಿಟ್ಟುಕೊಂಡು ಕೂತಿದ್ದಾಳೆ.

ಗಟ್ಟಿ ಆಹಾರವನ್ನೇನನ್ನೂ ತಿನ್ನಲಾಗದ ಚೈತ್ರಾ, ದ್ರವಾಹಾರದಲ್ಲೇ ದಿನದೂಡುತ್ತಿದ್ದಾರೆ. ಒಂದು ಕಾಲದಲ್ಲಿ ಮೈಕೈ ತುಂಬಿಕೊಂಡು, ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನಿಸುತ್ತಿದ್ದವಳು, ಇದೀಗ ಒಣಕಲು ಕಡ್ಡಿಯಾಗಿದ್ದಾರೆ. ತಾನು ಬದುಕಿಯೇ ಬದುಕುತ್ತೇನೆ ಎಂಬ ಆಕೆಯ ಭರವಸೆ ನಿಜವಾಗಲಿ. ಆಕೆಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.

ಚೈತ್ರಾ ಅವರ ಬ್ಯಾಂಕ್ ಖಾತೆ ವಿವರ: ಚೈತ್ರ.ಎಸ್. ಸಂಖ್ಯೆ: 64197559239, IFSC:- SBIN0040050 ಶಾಖೆ: ಅರಕಲಗೂಡು. ಅವರ ಫೋನ್ ನಂಬರ್ : +918618308030, 9731536616

English summary
Here is a heart melting story of a woman who is suffering from gangrene in her Small intestines. She needs help of everyone. She needs more than 30 lakhs for her treatment. Her Bank account details are as follows: Chaitra S. A/c: 64197559239, IFSC:- SBIN0040050 Branch: Arakalgud. Pone Number: +918618308030, 9731536616
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X