ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎ ಪರೀಕ್ಷೆ ಬರೆದ್ರು ಸಚಿವ ಯು.ಟಿ.ಖಾದರ್

|
Google Oneindia Kannada News

ಬೆಂಗಳೂರು, ಮೇ 20 : ಗ್ರಾಮ ಪಂಚಾಯಿತಿ ಚುನಾವಣೆ, ಆರೋಗ್ಯ ಇಲಾಖೆಯ ಕೆಲಸಗಳ ನಡುವೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯ.ಟಿ.ಖಾದರ್ ಪ್ರಥಮ ವರ್ಷದ ಎಂ.ಎ ಪರೀಕ್ಷೆ ಬರೆದಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಸಚಿವರು ಪರೀಕ್ಷೆ ಬರೆದರು.

ಈಗಾಗಲೇ ಬಿ.ಎ., ಎಲ್‌ಎಲ್‌ಬಿ ಪದವಿ ಪಡೆದಿರುವ ಸಚಿವ ಖಾದರ್ ಅವರು, ಸ್ನಾತಕೋತ್ತರ ಪದವಿ ಪಡೆಯಲು ಆಸಕ್ತಿ ತೋರಿಸಿದ್ದಾರೆ. 'ಸಾರ್ವಜನಿಕ ಆಡಳಿತ' ವಿಷಯವನ್ನು ಅವರು ಸ್ನಾತಕೋತ್ತರ ಪದವಿವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

UT Khader

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕ ಎಂ.ಎ ಪದವಿ ಪಡೆಯಲು ಬಯಸಿರುವ ಸಚಿವರು ಮಂಗಳವಾರ ಎಂ.ಎ ಪ್ರಥಮ ವರ್ಷದ ಪರೀಕ್ಷೆ ಬರೆದಿದ್ದಾರೆ. ಗುರುವಾರ ಮತ್ತೊಂದು ಪರೀಕ್ಷೆ ನಡೆಯಲಿದೆ.[ಸಚಿವ ಯು.ಟಿ.ಖಾದರ್ ಮಾನವೀಯತೆಗೆ ಸಲಾಂ]

ಚಾಮರಾಜಪೇಟೆಯ ಆಸ್ಟಿನ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಖಾಸಗಿ ವಾಹನದಲ್ಲಿ ಆಗಮಿಸಿದ ಯು.ಟಿ.ಖಾದರ್ ಅವರು, ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ಕೊಠಡಿ ಸಂಖ್ಯೆ 7ರಲ್ಲಿ ಸಾಮಾನ್ಯ ವಿದ್ಯಾರ್ಥಿಯಂತೆ ಕುಳಿತು ಪರೀಕ್ಷೆ ಬರೆದರು.

ಪ್ರಥಮ ವರ್ಷದಲ್ಲಿ ಐದು ವಿಷಯಗಳಿವೆ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಸಚಿವರು ಈ ಬಾರಿ ಕೇವಲ 2 ವಿಷಯಗಳ ಪರೀಕ್ಷೆಯನ್ನು ಮಾತ್ರ ಬರೆಯಲಿದ್ದಾರೆ.

UT Khader writes MA exam

ನನ್ನ ಬರಹ ಅರ್ಥಮಾಡಿಕೊಂಡರೆ ಸಾಕು : ಪರೀಕ್ಷೆ ಬರೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, 'ಶಾಸಕ, ಸಚಿವನಾಗಿ ಆಡಳಿತದಲ್ಲಿ ಪಾಲ್ಗೊಂಡು ಅನುಭವ ಪಡೆದಿದ್ದೇನೆ. ಜ್ಞಾನ ಹೆಚ್ಚಿಸಿಕೊಳ್ಳಲು ಎಂ.ಎ ಪದವಿಗೆ ಪ್ರವೇಶ ಪಡೆದಿದ್ದೇನೆ. ಮೌಲ್ಯಮಾಪಕರು ನನ್ನ ಬರಹ ಅರ್ಥ ಮಾಡಿಕೊಂಡರೆ ಅದೇ ದೊಡ್ಡ ವಿಷಯ' ಎಂದು ಪ್ರತಿಕ್ರಿಯೆ ನೀಡಿದರು.

English summary
Karnataka Health and Family Welfare Minister U.T.Khader wrote the first year MA examination conducted by Karnataka state open university (KSOU) on Tuesday. Khader has chosen public administration as his subject.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X