ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಗಡಿಯಲ್ಲಿ ಭಿನ್ನಮತ ಮರೆತ ಜೆಡಿಎಸ್ ನಾಯಕರು!

|
Google Oneindia Kannada News

ರಾಮನಗರ, ಡಿಸೆಂಬರ್ 01 : ವಿಧಾನಪರಿಷತ್ ಮೈತ್ರಿ ವಿಚಾರದಲ್ಲಿ ಉಂಟಾಗಿದ್ದ ಅಸಮಾಧಾನಗಳ ನಂತರ ಜೆಡಿಎಸ್ ನಾಯಕರು ಇಂದು ಒಗ್ಗಟ್ಟು ಪ್ರದರ್ಶಿಸಿದರು. ಕುಮಾರಸ್ವಾಮಿ, ಜಮೀರ್ ಅಹಮದ್, ಬಾಲಕೃಷ್ಣ, ಚೆಲುವರಾಯಸ್ವಾಮಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಮಂಗಳವಾರ ಮಾಗಡಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದರು. ಸುಮಾರು 15 ಸಾವಿರ ಕಾರ್ಯಕರ್ತರು ಆಗಮಿಸಿದ್ದ ಸಮಾವೇಶವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. [ಎಚ್ಡಿಕೆ ಹೇಳಿಕೆ ವಿರೋಧಿಸಿದ ಬಾಲಕೃಷ್ಣ]

magadi rally

ಸಮಾವೇಶ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, 'ಇದು ನನ್ನ ಮನೆ ಕಾರ್ಯಕ್ರಮ, ನಾನು ತಪ್ಪಿಸಿಕೊಳ್ಳುತ್ತೇನೆಯೇ?' ಎಂದು ಪ್ರಶ್ನಿಸಿದರು. 'ಬಾಲಕೃಷ್ಣ ಅವರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಪಾರವಾದ ಕಾಳಜಿ ಇದೆ' ಎಂದು ಹೇಳಿದರು. [ಐ ಯಾಮ್ ಸಾರಿ ಎಂದ ಜಮೀರ್ ಅಹಮದ್ ಖಾನ್!]

ಒಂದಾದ ನಾಯಕರು : ವಿಧಾನಪರಿಷತ್ ಚುನಾವಣೆ ಮೈತ್ರಿ ವಿಚಾರದಲ್ಲಿ ಶಾಸಕರ ನಡುವೆ ಅಸಮಾಧಾನ ಉಂಟಾಗಿತ್ತು. ಆದರೆ, ಇಂದು ಎಲ್ಲಾ ನಾಯಕರು ತಮ್ಮ ನಡುವಿನ ಭಿನ್ನಮತವನ್ನು ಮರೆತು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. [ಕುಮಾರಸ್ವಾಮಿ ರಾಜೀನಾಮೆ ಮಾತಾಡಿದ್ದು ಏಕೆ?]

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್, ನಾಗಮಂಗಲ ಶಾಸಕ ಎನ್.ಚೆಲುವರಾಯಸ್ವಾಮಿ, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸಮಾವೇಶದಲ್ಲಿ ಕುಮಾರಸ್ವಾಮಿ ಅವರ ಜೊತೆ ವೇದಿಕೆ ಹಂಚಿಕೊಂಡರು.

ಕುಮಾರಸ್ವಾಮಿ ಭಾಷಣದ ಮುಖ್ಯಾಂಶಗಳು [ಕುಮಾರಸ್ವಾಮಿಯನ್ನು ಚರ್ಚೆಗೆ ಆಹ್ವಾನಿಸಿದ ಜಮೀರ್!]

* ಜೆಡಿಎಸ್ ಪಕ್ಷ ರೈತರ ಪರವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಕಳೆಯಿತು. ರೈತರ ಸಮಸ್ಯೆಗಳನ್ನು ಪರಿಹಾರ ಮಾಡಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

* ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂಬ ಉದ್ದೇಶದಿಂದಲೇ ಅಧಿವೇಶನಕ್ಕೆ ಹೋಗಿದ್ದೆ. ಆದರೆ, ಚರ್ಚೆ ನಡೆಸಲು ಸರ್ಕಾರ ಅವಕಾಶ ನೀಡಲಿಲ್ಲ.

hd kumaraswamy

* ರಾಜ್ಯದ ತುಂಬಾ ಸಂಚಾರ ನಡೆಸಿದ್ದೇನೆ. 314ಕ್ಕೂ ಅಧಿಕ ರೈತ ಕುಟುಂಬಗಳ್ನು ಭೇಟಿ ಮಾಡಿದ್ದೇನೆ. ಸರ್ಕಾರಿ ಅಧಿಕಾರಿಗಳು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.

* ನಾನು ಅಧಿಕಾರದಲ್ಲಿದ್ದಾಗ ಜನರಿಗೆ ದ್ರೋಹ ಮಾಡಿಲ್ಲ. ಇಂದು ಪಕ್ಷದ ಎಲ್ಲಾ ನಾಯಕರು ಒಂದೇ ಕುಟುಂಬದಂತೆ ಕೆಲಸ ಮಾಡಬೇಕು.

English summary
Former Chief Minister and JDS state president H.D.Kumaraswamy addressed party rally in Magadi on Tuesday, December 1, 2015. JDS MLA H.C.Balakrishna organized rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X