ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ ಜಿಲ್ಲೆ ರೈತರಿಗಾಗಿ ಸಹಾಯವಾಣಿ ಆರಂಭ

By Mahesh
|
Google Oneindia Kannada News

ಹಾಸನ, ಜುಲೈ 17: ಮಿತಿಮೀರಿದ ಬಡ್ಡಿ ಕಟ್ಟಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಡ್ಡಿ ವಿಧಿಸುವ ಸಂಸ್ಥೆಗಳ ಮೇಲೆ ನಿಯಂತ್ರಣ ಹಾಗೂ ಆತ್ಮಹತ್ಯೆ ತಡೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಉಮೇಶ್ ಎಚ್ ಕೆ ಹೇಳಿದ್ದಾರೆ.

ಮಿತಿಮೀರಿದ ಬಡ್ಡಿ ವಿಧಿಸಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ The Karnataka Money lenders Act 19621, The Karnataka Pawnbrokers act 1961, The Chit Funds Act 1982 and The Karnataka Prohibition of Charging Exorbitant Interest Act 2004 ಕಾಯ್ದೆ ಹಾಗೂ ನಿಯಮಗಳನ್ನು ಮೀರಿ ಮಿತಿ ಮೀರಿದ ಬಡ್ಡಿಯನ್ನು ವಿಧಿಸುತ್ತಿರುವ ಪರವಾನಗಿ ಪಡೆದ ಲೇವಾದೇವಿ / ಗಿರವಿ / ಹಣಕಾಸು ಸಂಸ್ಥೆಗಳು / ಚಿಟ್ಸ್ ಸಂಸ್ಥೆಗಳ ವಿರುದ್ದ ಅಗತ್ಯ ಕ್ರಮಕ್ಕಾಗಿ ಸರ್ಕಾರದ ವತಿಯಿಂದ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.[ರೈತರ ಸಾವಿಗೆ ನಿಜವಾದ ಕಾರಣವೇನು?]

Hassan District administration

ಪರವಾನಗಿ ಪಡೆದ ಸಂಸ್ಥೆಗಳು ಮಿತಿ ಮೀರಿದ ಬಡ್ಡಿಯನ್ನು ವಿಧಿಸುತ್ತಿದ್ದಲ್ಲಿ ಅಥವಾ ಅನಧಿಕೃತವಾಗಿ ಪರವಾನಗಿ ಪಡೆಯದೇ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಪ್ರಕರಣಗಳು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಸಂಬಂಧಪಟ್ಟ ಸಹಕಾರ ಇಲಾಖೆಯ ಕಛೇರಿಗೆ ದೂರು ದಾಖಲಿಸಲು ತಿಳಿಸಲಾಗಿದೆ. [ರೈತರೇ ನಿಮ್ಮ ಜಮೀನು ಕೊಡಿಸ್ತೀನಿ, ಕರೆ ಮಾಡಿ: ಎಚ್ಡಿಕೆ]

ದೂರುಗಳನ್ನು ದಾಖಲಿಸಿಕೊಳ್ಳಲು ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಸಹಾಯವಾಣಿಯನ್ನು ತೆರೆಯಲಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಬಹುದು. [ತುಮಕೂರು : ಮೀಟರ್ ಬಡ್ಡಿ ದಂಧೆ ತಡೆಯಲು ಸಹಾಯವಾಣಿ]

* ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಹಾಸನ:- 08172-278455,
* ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಹಾಸನ - 08172-262718
* ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಸಕಲೇಶಪುರ - 08173-244105

ಲೇವಾದೇವಿ ಸಂಸ್ಥೆಗಳ ಮೇಲೆ ಕಣ್ಣು : ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಲೇವಾದೇವಿ ವ್ಯವಹಾರ ಸಂಪೂರ್ಣವಾಗಿ ತಡೆಗಟ್ಟಬೇಕು. ನೋಂದಾಯಿಸಿದ ಹಣ ವಹಿವಾಟು ಸಂಸ್ಥೆಗಳು ನಿಗಧಿಗಿಂತ ಹೆಚ್ಚಿನ ದರದ ಬಡ್ಡಿ ವಸೂಲು ಮಾಡುತ್ತಿದ್ದಲ್ಲಿ ಅಂತಹವರ ವಿರುದ್ದ ನಿಯಮಾನುಸಾರ ಕಠಿಣ ಕ್ರಮ ಜರುಗಿಸಬೇಕು. ಅದಕ್ಕಾಗಿ ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ವ್ಯಾಪಕ ತಪಾಸಣೆ ನಡೆಸುವಂತೆ ಜಿಲಾಧಿಕಾರಿ ಉಮೇಶ್ ಎಚ್. ಕುಸಗಲ್ ಅವರು ಸಹಕಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. [ರೈತರ ಮನೆಗೆ ಹೊರಟ ಎಸ್ಸೆಂ ಕೃಷ್ಣ]

ಮಿತಿಮೀರಿದ ಬಡ್ಡಿ ನಿಷೇಧಕ್ಕೆ ಅಧಿನಿಯಮ 2009ರನ್ವಯ ಮಿತಿಮೀರಿದ ಬಡ್ಡಿ ವಿಧಿಸುವುದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಜಿಲ್ಲಾ ಹಾಗೂ ಉಪವಿಭಾಗ ಮಟ್ಟದಲ್ಲಿ ನಿಯಂತ್ರಣ ಸಮಿತಿಯನ್ನು ರಚಿಸಿದೆ. ಸಾರ್ವಜನಿಕರು ತಮಗೆ ಆಗುತ್ತಿರುವ ಕಿರುಕುಳದ ಬಗ್ಗೆ ಸಹಕಾರ ಇಲಾಖೆ ಉಪನಿಬಂಧಕರು ಅಥವಾ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದಾಗಿದೆ ಎಂದ ಜಿಲ್ಲಾಧಿಕಾರಿ ಉಮೇಶ್ ಎಚ್ ಕುಸಗಲ್ ಅವರು ತಕ್ಷಣವೇ ಇದಕ್ಕಾಗಿ ಸಹಾಯವಾಣಿ ಕೇಂದ್ರ ಪ್ರಾರಂಭಿಸುವಂತೆ ಸಹಕಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. (ಒನ್ ಇಂಡಿಯಾ ಸುದ್ದಿ)

English summary
Hassan district administration has launched helpline for farmers. DC Umesh HK has urged to his team to curb the menace of meter interest rate scam. A district level committee has been set up to monitor the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X