ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯಾಚಿನ್ ಹೀರೋ ಹಾಸನದ ನಾಗೇಶ್‌ಗೆ ದುಃಖತಪ್ತ ವಿದಾಯ

|
Google Oneindia Kannada News

ಹಾಸನ, ಫೆಬ್ರವರಿ , 16: ಸಿಯಾಚಿನ್ ನಲ್ಲಿ ದೇಶಕ್ಕೆ ಪ್ರಾಣ ತ್ಯಾಗ ಮಾಡಿದ ವೀರಯೋಧನಿಗೆ ಜೈಕಾರ. ಅಗಲಿದ ಜಿಲ್ಲೆಯ ಪುತ್ರನಿಗೆ ಸಹಸ್ರಾರು ಜನರಿಂದ ಗೌರವ ಅರ್ಪಣೆ. ಹಾಸನದ ವೀರ ಸುಬೇದಾರ್ ನಾಗೇಶ್ ಭಾರತದ ಪತಾಕೆಯಡಿ ಮಲಗಿ ಮಣ್ಣು ಸೇರಿದ್ದಾರೆ.

ಜಿಲ್ಲೆ ಮತ್ತು ಪಕ್ಕದ ಜಿಲ್ಲೆಯಿಂದ ಆಗಮಿಸಿದ ಜನರು ನಾಗೇಶ್ ಅವರಿಗೆ ಅಂತಿಮ ನಮನ ಸಲ್ಲಿಕೆ ಮಾಡಿದರು. ಮಂಗಳವಾರ ಸಾವಿರಾರು ಜನರು ಸಿಯಾಚಿನ್ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಜಿಲ್ಲೆಯ ಪುತ್ರ ಟಿ.ಟಿ. ನಾಗೇಶ್ ಅವರ ಅಂತಿಯ ಯಾತ್ರೆಯಲ್ಲಿ ಪಾಲ್ಗೊಂಡು ಗೌರವ ಸಲ್ಲಿಕೆ ಮಾಡಿದ್ದಾರೆ. ತಮ್ಮ ಕುಟುಂಬದ ವ್ಯಕ್ತಿಯನ್ನು ಕಳೆದುಕೊಂಡಿರುವಂತೆ ಜನರು ಸಂತಾಪ ವ್ಯಕ್ತಪಡಿಸಿದರು.[ಹಿಮದಡಿ ಸಿಲುಕಿ ಎದ್ದುಬಂದ ಹನುಮಂತಪ್ಪ ಕೊಪ್ಪದ್]

ಹಾಸನ ತಾಲೂಕಿನ ತೇಜೂರು ಗ್ರಾಮದ ಯೋಧ ಟಿ.ಟಿ. ನಾಗೇಶ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಿಗ್ಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.

ಮಾಜಿ ಪ್ರಧಾನಿ ನಮನ

ಮಾಜಿ ಪ್ರಧಾನಿ ನಮನ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೈನಿಕ ನಾಗೇಶ್ ಗೆ ಅಂತಿಮ ನಮನ ಸಲ್ಲಿಕೆ ಮಾಡಿದರು.

ಉಸ್ತುವಾರಿ ಸಚಿವ ಎ ಮಂಜು

ಉಸ್ತುವಾರಿ ಸಚಿವ ಎ ಮಂಜು

ಹಾಸನ ಜಿಲ್ಲಾ ಉಸ್ಸುವಾರಿ ಸಚಿವ ಎ ಮಂಜು ಸಿಯಾಚಿನ್ ನಲ್ಲಿ ಹುತಾತ್ಮರಾದ ಯೋಧ ನಾಗೇಶ್ ಅವರಿಗೆ ಅಂತಿಮ ಗೌರವ ಸಲ್ಲಿಕೆ ಮಾಡಿದರು.

ಅಂತಿಮ ನಮನ

ಅಂತಿಮ ನಮನ

ವೀರ ಯೋಧನ ಹೂಟ್ಟೂರಿನ ಯೋಧನಿಗೆ ಗ್ರಾಮಸ್ಥರು ಕಂಬನಿ ಮಿಡಿದರು. ತಮ್ಮ ಮನೆಯ ಮಗನನ್ನೇ ಕಳೆದುಕೊಂಡಂತೆ ರೋಧಿಸಿದರು.

ಕಣ್ಣೀರ ರಂಗೋಲಿ

ಕಣ್ಣೀರ ರಂಗೋಲಿ

ಯೋಧನ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲು ಮಹಿಳೆಯೊಬ್ಬರು ರಸ್ತೆಯ ಮೇಲೆ ಬರೆದ ಅಕ್ಷರಗಳು ಬದುಕಿನ ಕರಾಳತೆಯನ್ನು ಎತ್ತಿ ಹೇಳುತ್ತಿದ್ದವು

ಸ್ವಗ್ರಾಮಕ್ಕೆ ಪಾರ್ಥೀವ ಶರೀರ

ಸ್ವಗ್ರಾಮಕ್ಕೆ ಪಾರ್ಥೀವ ಶರೀರ

ಯೋಧ ನಾಗೇಶ ಪಾರ್ಥಿವ ಶರೀರವನ್ನು ಹೊತ್ತು ತಂದಸೈನಿಕರು ಸಕಲ ಸರ್ಕಾರಿ ಗೌರವಗಳ ಮೂಲಕ ಅಂತಿಮ ನಮನ ಸಲ್ಲಿಕೆ ಮಾಡಿದರು.

English summary
Hassan bids emotional farewell to Siachen hero T T Nagesh. The last rites of the departed soldier was done on a piece of land in his native village Tejuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X