ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ತಿರುಗೇಟು

|
Google Oneindia Kannada News

ಬೆಂಗಳೂರು, ಜ. 23: ನಮ್ಮ ಪಕ್ಷದಲ್ಲಿಯೇ ಬೆಳೆದು ದೊಡ್ಡವರಾದವರು ಇಂದು ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡ, ನ್ಯಾಯಾಲಯದ ಆದೇಶದಂತೆ ನಾವು ಪಕ್ಷದ ಕಚೇರಿ ಖಾಲಿ ಮಾಡಲು ನಿರ್ಧರಿಸಿದ್ದೇವೆ. ಆದರೆ ಯಾವ ಶೆಡ್ ಹಾಕುವುದಿಲ್ಲ. ವಿರೋಧಿಗಳ ಮಾತಿಗೆ ಪ್ರತಿಕ್ರಿಯೆ ನೀಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.['ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಗಾಗಿ ಶೆಡ್‌ ನಿರ್ಮಾಣ']

jds

ನನಗೆ ಕಚೇರಿಯ ವ್ಯಾಮೋಹ ವಾಗಲಿ, ಕುರ್ಚಿಯ ವ್ಯಾಮೋಹವಾಗಲಿ ಇಲ್ಲ. 5 ತಿಂಗಳ ಹಿಂದೆ ನಮಗೆ ಜಾಗ ಕೊಡುವಂತೆ ಬಿಡಿಎಗೆ ಅರ್ಜಿ ಹಾಕಿದ್ದೆವು. ಕಚೇರಿಯನ್ನು ಉಳಿಸಿಕೊಳ್ಳಲೇಬೇಕು ಎಂಬ ಯಾವುದೇ ಆಸೆ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.['ದೇವೇಗೌಡ ಕುಟುಂಬದ ಬಳಿ ಬಿಪಿಎಲ್ ಕಾರ್ಡ್ ಇದೆಯೇ?']

ಸಿದ್ದರಾಮಯ್ಯ ಏನು ಹೇಳಿದ್ದರು?
ವಿವಾದಿತ ಜಾಗದಲ್ಲಿ ಜೆಡಿಎಸ್ ನವರು ತಾತ್ಕಾಲಿಕ ಶೆಡ್ ಹಾಕಲು ಮುಂದಾಗಿದ್ದಾರೆ. ಇದು ಯಾವ ಕಾರಣಕ್ಕೂ ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.

'ದೇವೇಗೌಡ ಕುಟುಂಬದವರು ಬಿಪಿಎಲ್ ಕಾರ್ಡ್ ಹೊಂದಿರುವವರಂತೆ ಆಡುತ್ತಿದ್ದಾರೆ, ಅವರಿಗೆ ಕಚೇರಿ ಕಟ್ಟಿಸಿಕೊಳ್ಳಲು ಆಗುವುದಿಲ್ಲವೇ?'ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸಹ ವ್ಯಂಗ್ಯವಾಡಿದ್ದರು.

English summary
Bengaluru: The former Prime Minister and JDS leader H.D. Deve Gowda reacted CM Siddaramayahh talk. We are not trying to save our party office place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X