ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿ ಪರೀಕ್ಷೆಯಲ್ಲಿ ಅಹ್ಮದ್ ಗೆ ಜಯ ಮತ್ತು ಇತರ ಸುದ್ದಿಗಳು

ಮಂಗಳವಾರ (ಆಗಸ್ಟ್ 8ರಂದು) ಸುದ್ದಿ ಸಾಮ್ರಾಜ್ಯವನ್ನಾಳಿದ ಮಹತ್ವದ ಸುದ್ದಿಗಳಲ್ಲಿ ಪ್ರಮುಖವಾದವನ್ನು ಇಲ್ಲಿ ನೀಡಲಾಗುತ್ತಿದೆ. ಮಂಗಳವಾರದ ಸುದ್ದಿಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಗುಜರಾತ್ ನ ರಾಜ್ಯಸಭಾ ಚುನಾವಣೆ.

|
Google Oneindia Kannada News

ಬೆಂಗಳೂರು, ಆಗಸ್ಟ್ 9: ಮಂಗಳವಾರ (ಆಗಸ್ಟ್ 8ರಂದು) ಸುದ್ದಿ ಸಾಮ್ರಾಜ್ಯವನ್ನಾಳಿದ ಮಹತ್ವದ ಸುದ್ದಿಗಳಲ್ಲಿ ಪ್ರಮುಖವಾದವನ್ನು ಇಲ್ಲಿ ನೀಡಲಾಗುತ್ತಿದೆ. ಮಂಗಳವಾರದ ಸುದ್ದಿಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಗುಜರಾತ್ ನ ರಾಜ್ಯಸಭಾ ಚುನಾವಣೆ.

ಮಂಗಳವಾರ ಮಧ್ಯರಾತ್ರಿ ಇದರ ಫಲಿತಾಂಶ ಬಂದಿತ್ತಾದರೂ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಣಿಯಲು ಬಿಜೆಪಿ ಮಾಡಿದ ರಣತಂತ್ರಗಳಿಂದಾಗಿ ಇಡೀ ದೇಶದ ಗಮನ ಸೆಳೆದಿತ್ತು ಈ ಚುನಾವಣೆ.

ಇನ್ನು, ಮಧ್ಯಾಹ್ನದ ಹೊತ್ತಿಗೆ ಸ್ಫೋಟಗೊಂಡ ಭೀಮಾ ತೀರದ ಕುಖ್ಯಾತ ಹಂತಕರ ಪಟ್ಟಿಯ ಬಾಗಪ್ಪ ಹರಿಜನ ಮೇಲೆ ವಿಜಯಪುರದ ನ್ಯಾಯಾಲಯದ ಆವರಣದಲ್ಲಿ ಗುಂಡಿನ ದಾಳಿ ಸುದ್ದಿ.

ಇನ್ನು, ಸೋಮವಾರ ಪ್ರಕಟಗೊಂಡಿದ್ದ ಸುದ್ದಿಗೆ ಮಂಗಳವಾರ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತ್ತು. ಎಸ್ಸಿ, ಎಸ್ಟಿ ನೌಕರರಿಗೆ ಯಾವುದೇ ವಿಶೇಷ ಬಡ್ತಿ ನೀಡಬಾರದೆಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಿಂದ ತಪ್ಪಿಸಿಕೊಳ್ಳಲು ಸುಗ್ರೀವಾಜ್ಞೆ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವ ವಿಚಾರ ಸದ್ದು ಮಾಡಿತು.

ಇನ್ನು, ಹುಡುಗಿಯೊಬ್ಬಳಿಗೆ ಮಾನಸಿಕ ಕಿರುಕುಳ ನೀಡಿದ ಹರ್ಯಾಣ ಬಿಜೆಪಿ ಮುಖ್ಯಸ್ಥನ ಮಗನ ಪುಂಡಾಡಿಕೆ ವಿಚಾರವೂ ಸದ್ದು ಮಾಡಿತು.

ಸಂಜೆ ವೇಳೆಗೆ ನೋಟಿನ ಕಂತೆ ಮೇಲೆ ವರಮಹಾಲಕ್ಷ್ಮಿ ವ್ರತ ಮಾಡಿದ ಬಿಜೆಪಿ ಬ್ರೋಕರ್ ಅವರ ಪೂಜೆಯ ಸುದ್ದಿ ಹೆಚ್ಚು ಸದ್ದು ಮಾಡಿತು.

ಸ್ಮೃತಿ, ಶಾ ಗೆಲುವು ಬಹುತೇಕ ಖಚಿತ

ಸ್ಮೃತಿ, ಶಾ ಗೆಲುವು ಬಹುತೇಕ ಖಚಿತ

ಗುಜರಾತಿನ ಬಹುನಿರೀಕ್ಷಿತ ರಾಜ್ಯಸಭಾ ಚುನಾವಣೆ ಇಂದು (ಆಗಸ್ಟ್ 8) ನಡೆಯಲಿದ್ದು, ಈ ಚುನಾವಣೆ ದೇಶದಾದ್ಯಂತ ಕುತೂಹಲ ಕೆರಳಿಸಿದೆ. ಬಿಜೆಪಿಯ ಆಪರೇಶನ್ ಕಮಲಕ್ಕೆ ಹೆದರಿ ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್ ನ 44 ಶಾಸಕರಿಂದಾಗಿ ಈ ಚುನಾವಣೆ ಮತ್ತಷ್ಟು ಕಾವುಪಡೆದಿತ್ತು.

ಇಂದು ಗುಜರಾತ್ ರಾಜ್ಯಸಭಾ ಚುನಾವಣೆ: ಸ್ಮೃತಿ, ಶಾ ಗೆಲುವು ಬಹುತೇಕ ಖಚಿತಇಂದು ಗುಜರಾತ್ ರಾಜ್ಯಸಭಾ ಚುನಾವಣೆ: ಸ್ಮೃತಿ, ಶಾ ಗೆಲುವು ಬಹುತೇಕ ಖಚಿತ

ಗುಜರಾತ್ ರಾಜ್ಯಸಭೆ ಚುನಾವಣೆ,ಕಾಂಗ್ರೆಸ್ ನ ಅಹ್ಮದ್ ಪಟೇಲ್ ಗೆ ಗೆಲುವುಗುಜರಾತ್ ರಾಜ್ಯಸಭೆ ಚುನಾವಣೆ,ಕಾಂಗ್ರೆಸ್ ನ ಅಹ್ಮದ್ ಪಟೇಲ್ ಗೆ ಗೆಲುವು

ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ

ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ

ಭೀಮಾ ತೀರದಲ್ಲಿ ಮತ್ತೆ ನೆತ್ತರು; ಚಂದಪ್ಪ ಹರಿಜನನ ಬಂಟ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿಭೀಮಾ ತೀರದಲ್ಲಿ ಮತ್ತೆ ನೆತ್ತರು; ಚಂದಪ್ಪ ಹರಿಜನನ ಬಂಟ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ

ವಿಜಯಪುರ ನ್ಯಾಯಾಲಯದ ಆವರಣದಲ್ಲಿ ಇಂದು ಬೆಳಿಗ್ಗೆ (ಆಗಸ್ಟ್ 8) ಅಪರಿಚಿತ ವ್ಯಕ್ತಿಯೊಬ್ಬನಿಂದ ಭೀಮಾತೀರದ ಹಂತಕ ಎಂಬ ಕುಖ್ಯಾತಿ ಪಡೆದಿದ್ದ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ ನಡೆದಿದೆ.

ರಾಜ್ಯಸರ್ಕಾರದ ನಿರ್ಧಾರ

ರಾಜ್ಯಸರ್ಕಾರದ ನಿರ್ಧಾರ

ಹಿಂಬಡ್ತಿ ಭೀತಿಯಲ್ಲಿರುವ ನೌಕರರಿಗಾಗಿ ಸುಗ್ರೀವಾಜ್ಞೆಹಿಂಬಡ್ತಿ ಭೀತಿಯಲ್ಲಿರುವ ನೌಕರರಿಗಾಗಿ ಸುಗ್ರೀವಾಜ್ಞೆ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಹಿತಕಾಯಲು ಸರ್ಕಾರ ಮುಂದಾಗಿದೆ. ಹಿಂಬಡ್ತಿ ಭೀತಿಯಲ್ಲಿರುವ ನೌಕರರಿಗಾಗಿ ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನ ಕೈಗೊಂಡಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆ ಬಳಿಕ ಈ ಕುರಿತು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾಹಿತಿ ನೀಡಿದರು.

ಬಿಜೆಪಿ ನಾಯಕನ ಪುತ್ರನ ಆಟಾಠೋಪ

ಬಿಜೆಪಿ ನಾಯಕನ ಪುತ್ರನ ಆಟಾಠೋಪ

ಹರಿಯಾಣ ಬಿಜೆಪಿ ಅಧ್ಯಕ್ಷರ ಪುತ್ರನ ಆಟಾಟೋಪದ ಸಿಸಿಟಿವಿ ದೃಶ್ಯ ಪತ್ತೆಹರಿಯಾಣ ಬಿಜೆಪಿ ಅಧ್ಯಕ್ಷರ ಪುತ್ರನ ಆಟಾಟೋಪದ ಸಿಸಿಟಿವಿ ದೃಶ್ಯ ಪತ್ತೆ

ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷ ಸುಭಾಷ್‌ ಬರಲಾ ಪುತ್ರ ವಿಕಾಸ್‌ ಬರಲಾ ಯುವತಿಯೊಬ್ಬಳನ್ನು ಹಿಂಬಾಲಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾರಿನಲ್ಲಿ ಯುವತಿಯನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ.

ವೈರಲ್ ಆದ ವೈಭವದ ಪೂಜೆ

ವೈರಲ್ ಆದ ವೈಭವದ ಪೂಜೆ

'ಕಾರ್ನರ್ ಸೂರಿ' ಸಂಪತ್ತು ನೋಡಿ ಬೆಚ್ಚಿದ ಜನ ಸಾಮಾನ್ಯರು'ಕಾರ್ನರ್ ಸೂರಿ' ಸಂಪತ್ತು ನೋಡಿ ಬೆಚ್ಚಿದ ಜನ ಸಾಮಾನ್ಯರು

ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿರುವ ನಗದು ಹಣ, ನಗ, ನಾಣ್ಯ, ಆಭರಣಗಳನ್ನು ದೇವರ ಮುಂದಿಟ್ಟು ಪೂಜಿಸುವುದು ವಾಡಿಕೆ. ಅದರಂತೆ, ಗಳಿಸಿದ ಮೊತ್ತವನ್ನೆಲ್ಲ ದೇವರ ಮುಂದಿಟ್ಟು ಕೈ ಮುಗಿದ ಬಿಡಿಎ ಬ್ರೋಕರ್ ಸೂರ್ಯನಾರಾಯಣ್ ಅಲಿಯಾಸ್ ಕಾರ್ನರ್ ಸೂರಿ ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅವರ ಮನೆಯಲ್ಲಿನ ಪೂಜೆ ಚಿತ್ರಗಳು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯತೆ ಗಳಿಸಿವೆ.

English summary
On Tuesday (August 8), Gujarat Rajya Sabha Election news attracted most of the online readers. Apart from that, Shootout on Bhagappa Harijan at Vijayapura Court premises, Harnaya Stalking, BDA broker who performed Vara Mahalakshmi pooja on budles of currency made huge sound.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X