ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರದಲ್ಲಿ ಹಸಿರು ಕ್ರಾಂತಿಗೆ ಕೈ ಜೋಡಿಸಿದ ಯುವಕರು

|
Google Oneindia Kannada News

ಕೋಲಾರ, ಜೂ.15 : ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವಂತೆ ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೋರಾಟ ನಡೆಸುತ್ತಿದೆ. ಇದಕ್ಕೆ ಬೆನ್ನೆಲುಬಾಗಿ ಬೆಂಗಳೂರಿನಲ್ಲಿ ಬಯಲು ಸೀಮೆ ರೈತರ ಮಕ್ಕಳ ಹೆಸರಿನಲ್ಲಿ ಹೋರಾಟ ನಡೆಸಿದ ಯುವ ಶಕ್ತಿ ಸಂಘಟನೆ ಇದೀಗ ಬರಡು ಜಿಲ್ಲೆಯಲ್ಲಿ ಹಸಿರು ಕ್ರಾಂತಿ ಮಾಡಲು ಸಜ್ಜಾಗುತ್ತಿದೆ.

ಯುವ ಶಕ್ತಿ ಸಂಘಟನೆ ಪದಾಧಿಕಾರಿಗಳು ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರ, ಗಿಡಗಳನ್ನು ಬೆಳೆಸುವ ಮೂಲಕ ಅರಣ್ಯೀಕರಣಕ್ಕೆ ಒತ್ತು ನೀಡಲು ಮುಂದಾಗಿದ್ದಾರೆ. ಮನೆಗೊಂದು ಮರ ಹೆಸರಿನಲ್ಲಿ ಸಸಿಗಳನ್ನು ನೀಡಲು ಮುಂದಾಗಿದ್ದಾರೆ. [ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ]

kolar

ಹಸಿರೇ ಉಸಿರು : ಸದಾ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಮಳೆ ಆಗದಿರಲು ಮರ, ಗಿಡಗಳು ಇಲ್ಲದಿರುವುದು ಪ್ರಮುಖ ಕಾರಣ ಎಂದು ಅರಿತುಕೊಂಡಿರವ ಸಂಘಟನೆ, ಜಿಲ್ಲೆಯಲ್ಲಿ ಪರಿಸರವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮವನ್ನು ರೂಪಿಸುತ್ತಿದೆ. [ಜಾಗೃತಿಗೆ ಮೊದಲು ಪರಿಸರ ಬಗ್ಗೆ ತಿಳಿದುಕೊಳ್ಳಿ]

ಬೆಂಗಳೂರಿನಲ್ಲಿ ನೆಲೆಸಿರುವ ಕೋಲಾರ-ಚಿಕ್ಕಬಳ್ಳಾಪುರದ ಐಟಿ-ಬಿಟಿ ಉದ್ಯೋಗಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಹಿಂದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಾರ್ವಜನಿಕರಿಗಾಗಿ ಆರೋಗ್ಯ ಶಿಬಿರ, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ ಬುಕ್‌, ಲೇಖನ ಸಾಮಗ್ರಿಗಳನ್ನು ವಿತರಿಸಿದ್ದ ಸಂಘಟನೆ ಈಗ ಹಸಿರು ಕ್ರಾಂತಿ ಮಾಡಲು ಸಜ್ಜಾಗಿದೆ. [ಫೇಸ್ ಬುಕ್ ಪುಟ ನೋಡಿ]

ಜಿಲ್ಲೆಯ ಜನರಿಗೆ ಪರಿಸರ ಪ್ರಜ್ಞೆ ಮೂಡಿಸಲು ಹಾಗೂ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲು ಯುವ ಶಕ್ತಿ ಸಂಘಟನೆ ವಿಶೇಷ ಪರಿಸರ ಆಂದೋಲನ ನಡೆಸಿ ಮರ, ಗಿಡಗಳನ್ನು ಯಥೇಚ್ಚವಾಗಿ ಬೆಳೆಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧರಿಸಿದೆ. ಇದಕ್ಕೆ ಚುನಾಯಿತ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಸಹಕಾರ ಅಗತ್ಯ ಎಂದು ಸಂಘಟನೆಯ ಮುಖಂಡ ವಿಜಯ ಬಾವರೆಡ್ಡಿ ಹೇಳಿದ್ದಾರೆ.

English summary
Software engineers, doctors from the Bayaluseeme(Kolar, Chikkaballapur) region working in Bengaluru have come together for Green revolution campaign in Kolar, Chikkaballapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X