ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಬೆಳೆಗಾರರ ಸಮಸ್ಯೆ, ಸಿದ್ದರಾಮಯ್ಯ ಕೊಟ್ಟ ಉತ್ತರ

|
Google Oneindia Kannada News

ಬೆಳಗಾವಿ, ಜು.01 : ಕಬ್ಬು ಬೆಳೆಗಾರರ ಬಾಕಿ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜುಲೈ ಅಂತ್ಯದೊಳಗೆ ಸರ್ಕಾರದಿಂದಲೇ ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಂಗಳವಾರ ಘೋಷಿಸಿದ್ದಾರೆ. ಒಟ್ಟು ಎರಡು ಕಂತುಗಳಲ್ಲಿ 923 ಕೋಟಿ ರೂ.ಗಳನ್ನು ಪಾವತಿ ಮಾಡಲಾಗುತ್ತದೆ.

ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತಂತೆ ನಿಯಮ 69ರ ಅಡಿ ನಡೆದ ಸುದೀರ್ಘ ಚರ್ಚೆಯ ನಂತರ ಉತ್ತರ ನೀಡಿದ ಮುಖ್ಯಮಂತ್ರಿಗಳು, ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ 200 ರೂ. ನಂತೆ 2013-14 ನೇ ಸಾಲಿನಲ್ಲಿ ಬಾಕಿ ನೀಡಬೇಕಿರುವ 923 ಕೋಟಿ ಹಣವನ್ನು ಜುಲೈ 10 ರೊಳಗಾಗಿ 100 ರೂ. ಹಾಗೂ ಜುಲೈ ಮಾಸಾಂತ್ಯಕ್ಕೆ 100 ರೂ. ನಂತೆ 2 ಕಂತುಗಳಲ್ಲಿ ಸರ್ಕಾರವೇ ಜಮಾ ಮಾಡಲಿದೆ ಎಂದರು. [ಸಾವಿನ ಮನೆಯಲ್ಲೂ ರಾಜಕೀಯ]

assembly session

ಸರ್ಕಾರ ಈಗಾಗಲೇ ಪ್ರಕಟಿಸಿದಂತೆ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ವಸೂಲಿ ಮಾಡಲು ಸಕ್ಕರೆಯನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 24 ಸಕ್ಕರೆ ಕಾರ್ಖಾನೆಗಳು ತಾತ್ಕಾಲಿಕ ತಡೆಯಾಜ್ಞೆ ತಂದಿವೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ ನುಡಿದಂತೆ ಜುಲೈ ಮಾಸಾಂತ್ಯಕ್ಕೆ ರೈತ ಸಮುದಾಯಕ್ಕೆ ಬಾಕಿ ನೀಡಬೇಕಾದ ಮೊತ್ತವನ್ನು ಅವರ ನೀಡಲಿದೆ ಎಂದು ಹೇಳಿದರು. [ರೈತರ ಆತ್ಮಹತ್ಯೆಗೆ ಕಾರಣಗಳೇನು?]

ಸರ್ಕಾರದ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಬ್ಬು ಬೆಳೆಗಾರರಿಗೆ ನೀಡಿರುವ ಭರವಸೆಯನ್ನು ನಿಶ್ಚಿತವಾಗಿಯೂ ಈಡೇರಿಸುತ್ತೇವೆ. ಕಾರ್ಖಾನೆಗಳು ಹಣ ಪಾವತಿಸದೇ ಹೋದರೂ, ಖಜಾನೆಯಿಂದ ರಾಜ್ಯ ಸರ್ಕಾರವೇ ಹಣ ಪಾವತಿಸಿ, ಸಕ್ಕರೆ ಮಾರಾಟದಿಂದ ಬಂದ ಹಣವನ್ನು ಸರ್ಕಾರ ಸರಿದೂಗಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಸದನಕ್ಕೆ ವಿವರಣೆ ನೀಡಿದರು. [ಮಂಗಳವಾರದ ಕಲಾಪದ ಮುಖ್ಯಾಂಶಗಳು]

ಕೇಂದ್ರದ ನೆರವು ಕೇಳಲಾಗಿದೆ : 2014-15ನೇ ಸಾಲಿನಲ್ಲಿ 2,120 ಕೋಟಿ ರೂ ಬಾಕಿ ಮೊತ್ತವನ್ನು ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸಿಲ್ಲ. ಕೇಂದ್ರ ಸರ್ಕಾರವು ಪ್ರತಿ ಟನ್‍ಗೆ ಕಬ್ಬಿಗೆ 2,200 ರೂ.ನಂತೆ ನ್ಯಾಯಯುತ ಹಾಗೂ ಲಾಭದಾಯಕ ದರ ನಿಗದಿಪಡಿಸಿದೆ.

ಈ ಕುರಿತಂತೆ ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಕಳೆದ ಡಿಸೆಂಬರ್‌ನಿಂದ ಈ ವರೆಗೆ ನಾಲ್ಕು ಬಾರಿ ಭೇಟಿ ಮಾಡಿ ಮಧ್ಯ ಪ್ರವೇಶಿಸಿ ನೆರವು ಒದಗಿಸುವಂತೆ ಮನವಿ ಮಾಡಲಾಗಿತ್ತು. ರಾಮ್ ವಿಲಾಸ್ ಪಾಸ್ವಾನ್ ಅವರು ಬೆಂಗಳೂರಿಗೆ ಆಗಮಿಸಿದಾಗ ಅವರೊಡನೆ ಈ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಲಾಗಿದೆ.

ಕೇಂದ್ರ ಸಚಿವ ಸಂಪುಟವು ಸಕ್ಕರೆ ಕಾರ್ಖಾನೆಗಳ ಮೂಲಕ ಕಬ್ಬು ಬೆಳೆಗಾರರ ನೆರವಿಗೆ ಬಡ್ಡಿ-ರಹಿತವಾಗಿ 6000 ಕೋಟಿ ರೂ. ನೆರವು ಪ್ರಕಟಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳು 5 ವರ್ಷಗಳ ಅವಧಿಯಲ್ಲಿ ಬಡ್ಡಿ-ರಹಿತವಾಗಿ 969 ಕೋಟಿ ರೂ. ಸಾಲ ಪಡೆದಿದ್ದವು. ಆದರೆ, ಈವರೆಗೂ ಹಣ ಮರುಪಾವತಿಸಿಲ್ಲ.

ಅಧಿವೇಶನ ಮುಗಿದ ಬಳಿಕ ಈ ಎಲ್ಲಾ ವಿಚಾರಗಳ ಕುರಿತು ಚರ್ಚಿಸಲು ರಾಜ್ಯದ ಸಂಸದರೂ, ಎಲ್ಲಾ ಪಕ್ಷಗಳ ಮುಖಂಡರ ನಿಯೋಗದೊಂದಿಗೆ ನವದೆಹಲಿಗೆ ಹೋಗಿ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

belagavi

21 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ : ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅಪಾರವಾದ ಕಾಳಜಿ ಇದೆ. ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಅನ್ನದಾತ ಸದಾ ಕಾಲ ಆತ್ಮಸ್ಥೆರ್ಯದಿಂದ ಇರಬೇಕು. ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

2015ರ ಏಪ್ರಿಲ್‍ನಿಂದ ಈವರೆಗೆ 7 ಮಂದಿ ಕಬ್ಬು ಬೆಳೆಗಾರರೂ ಸೇರಿದಂತೆ 21 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ನೆರವು ಕೊಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

English summary
In Legislative Assembly session on Tuesday in Belagavi Karnataka Chief Minister Siddaramaiah announced that, Rs 923 core will be paid to sugarcane farmers by the government in two installments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X