ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಚಂದ್ರ ವಿಚಾರಣೆಗೆ ರಾಜ್ಯಸರ್ಕಾರ ಅಸ್ತು

2008ರಲ್ಲಿ ಲೋಕಾಯುಕ್ತ ದಾಳಿ ನಡೆದಾಗ ಜಯಚಂದ್ರ ವಿಚಾರಣೆಗಾಗಿ ಲೋಕಾಯುಕ್ತಕ್ಕೆ ಅಧಿಕಾರ ನೀಡದಿದ್ದ ರಾಜ್ಯ ಸರ್ಕಾರ; ಈ ಬಾರಿಯ ಐಟಿ ದಾಳಿಯ ನಂತರ ವಿಚಾರಣೆಗೆ ಅನುಮತಿ

|
Google Oneindia Kannada News

ಬೆಂಗಳೂರು: ಅಕ್ರಮ ಆಸ್ತಿ ಆರೋಪ ಹೊತ್ತಿರುವ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯಾಗಿದ್ದ ಎಸ್.ಸಿ. ಜಯಚಂದ್ರ ವಿರುದ್ಧ ವಿಚಾರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಅಕ್ರಮ ಹಾಗೂ ಬೇನಾಮಿ ಆಸ್ತಿಯನ್ನು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅದರ ಪರಿಣಾಮವಾಗಿ ಜಯಚಂದ್ರ ಅವರ ಬಂಧನವಾಗಿತ್ತಲ್ಲದೆ, ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು.

Government permits for prosecution of Jayachandra

ಈಗ 2008ರಲ್ಲಿ ಆಗ ಮುಖ್ಯ ಇಂಜಿನಿಯರ್ ಆಗಿದ್ದ ಜಯಚಂದ್ರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಆಗ ಲೋಕಾಯುಕ್ತ ಅಧಿಕಾರಿಗಳು ಜಯಚಂದ್ರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತಾದರೂ, ಇದಕ್ಕೆ ರಾಜ್ಯ ಸರ್ಕಾರ ದಿವ್ಯ ಮೌನ ವಹಿಸಿತ್ತು.

ಆದರೆ, ಈ ಬಾರಿ ಜಯಚಂದ್ರ ವಿರುದ್ಧ ಈಗ ವಿಚಾರಣೆಗೆ ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

English summary
Government has given green signal for prosecution of State Highway Authority's suspended Officer S.C. Jayachandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X