ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಆಸ್ಪತ್ರೆ ವೈದ್ಯರ ಸಂಬಳ ಎಷ್ಟು ಹೆಚ್ಚಾಗಿದೆ ಗೊತ್ತೆ?

|
Google Oneindia Kannada News

ಬೆಳಗಾವಿ, ಜುಲೈ 07 : ಸರ್ಕಾರಿ ಆಸ್ಪತ್ರೆಗಳ ವೈದ್ಯರ ವೇತನವನ್ನು ಹೆಚ್ಚಳ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಜುಲೈ 6ರಿಂದಲೇ ನೂತನ ವೇತನ ಜಾರಿಗೆ ಬರಲಿದೆ. ಆದರೆ, ಆಯುರ್ವೇದ ವೈದ್ಯರ ವೇತನವನ್ನು ಸರ್ಕಾರ ಹೆಚ್ಚಳ ಮಾಡಿಲ್ಲ. ಇದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ 7ನೇ ದಿನದ ಕಲಾಪದಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು, ವೈದ್ಯರ ಸೇವೆ ಹೆಚ್ಚಳ ಮಾಡಿರುವ ಕುರಿತು ಮಾಹಿತಿ ನೀಡಿದರು. [ಮಂಗಳವಾರದ ಕಲಾಪದ ಮುಖ್ಯಾಂಶಗಳು]

ut khader

ಎಂಬಿಬಿಎಸ್/ಬಿಡಿಎಸ್ ಪದವಿ ಪಡೆದ ವೈದ್ಯರ ವೇತನವನ್ನು 5000, ಸೂಪರ್ ಸ್ಪೆಷಾಲಿಟಿ ವೈದ್ಯರ ವೇತನವನ್ನು 35,000, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಪದವಿ ಪಡೆದ ವೈದ್ಯರ ಪ್ರತಿ ತಿಂಗಳ ವೇತನವನ್ನು 25,000 ರೂ. ಹೆಚ್ಚಳ ಮಾಡಲಾಗಿದೆ ಎಂದು ಯು.ಟಿ.ಖಾದರ್ ಸದನಕ್ಕೆ ಮಾಹಿತಿ ನೀಡಿದರು. [ಮಗ,ಮಗಳು ವೈದ್ಯರಾಗಬೇಕಾ? ವಿಚಾರ ಮಾಡಿ]

ಹೆಚ್ಚಳ ಮಾಡಲಾದ ವೇತನ 2015ರ ಜುಲೈ 6ರಿಂದಲೇ ಜಾರಿಗೆ ಬರಲಿದೆ ಎಂದು ಸಚಿವರು ವಿವರಣೆ ನೀಡಿದರು. ಆಯುರ್ವೇದ ವೈದ್ಯರ, ನರ್ಸ್‌ಗಳ ವೇತನವನ್ನು ಹೆಚ್ಚಳ ಮಾಡಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.

ಯಾರ ವೇತನ ಎಷ್ಟು ಹೆಚ್ಚಾಗಿದೆ?
* ಎಂಬಿಬಿಎಸ್ ಪದವಿ ಪಡೆದ ವೈದ್ಯರು (0-6 ವರ್ಷ ಸೇವೆ) - 54,989 ದಿಂದ 59,989 ರೂ.ಗೆ ಹೆಚ್ಚಳ
* ಸ್ನಾತಕೋತ್ತರ ಪದವಿ ಪಡೆದ ವೈದ್ಯರು - 59,780 ದಿಂದ 84, 780ಕ್ಕೆ ಹೆಚ್ಚಳ
* ಸೂಪರ್ ಸ್ಪೆಷಾಲಿಟಿ ವೈದ್ಯರು (0-6 ವರ್ಷ ಸೇವೆ) - 62,000 ದಿಂದ 92,989 ರೂ.ಗೆ ಹೆಚ್ಚಳ

ಅಂದಹಾಗೆ 2014ರ ಅಕ್ಟೋಬರ್‌ನಲ್ಲಿ ಸುಮಾರು 2000 ಸರ್ಕಾರಿ ಆಸ್ಪತ್ರೆಗಳ ವೈದ್ಯರು ವೇತನ ಹೆಚ್ಚಳ ಮಾಡುವಂತೆ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ನಂತರ ವೈದ್ಯರ ಸಂಬಳವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

English summary
Karnataka Government on Tuesday hiked the salary of doctors and specialists working in government hospitals. Revised salary would come into effect from July 6, 2015 said, Minister for Health and Family Welfare U.T. Khader in Legislative Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X