ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.25ರ ಶುಕ್ರವಾರದಂದು ಬಕ್ರೀದ್ ಸರ್ಕಾರಿ ರಜೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19 : ಕರ್ನಾಟಕ ಸರ್ಕಾರ ಸೆ.25ಕ್ಕೆ ಬಕ್ರೀದ್ ಸರ್ಕಾರಿ ರಜೆಯನ್ನು ಘೋಷಣೆ ಮಾಡಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಹೊರತು ಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಸೆ.25ರ ಶುಕ್ರವಾರ ಬಕ್ರೀದ್ ಆಚರಣೆ ಮಾಡಲಾಗುತ್ತದೆ.

ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್‌ಗೆ ಮೊದಲು ಸೆ.24ರ ಗುರುವಾರ ಸರ್ಕಾರಿ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಇಸ್ಲಾಮಿ ಕ್ಯಾಲೆಂಡರ್‌ನಂತೆ ದುಲ್ ಹಜ್ಜ್ ತಿಂಗಳ ಚಂದ್ರದರ್ಶನ ಆಧರಿಸಿ ಸೆ.25ರ ಶುಕ್ರವಾರ ಬಕ್ರೀದ್ ಆಚರಣೆ ಮಾಡಲು ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ. [2 ಮತ್ತು 4ನೇ ಶನಿವಾರ ದೊಡ್ಡ ಮೊತ್ತ ರವಾನೆ ಸಾಧ್ಯವಿಲ್ಲ]

Karnataka government

ಆದ್ದರಿಂದ, ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸೆ.25ರ ಶುಕ್ರವಾರ ಬಕ್ರೀದ್ ಆಚರಣೆ ಮಾಡುತ್ತಿದ್ದು, ಅಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. [2015ರ ರಜೆ ಪಟ್ಟಿ]

ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಸೆ.24ರ ಗುರುವಾರವೇ ಬಕ್ರೀದ್ ಆಚರಣೆ ಮಾಡಲಾಗುತ್ತದೆ. ಈ ಕುರಿತು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ.

ಸೆ.26 ಕರ್ನಾಟಕ ಬಂದ್ : ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಸೆ.26ರ ಶನಿವಾರ ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದ್ದರಿಂದ, ಬಸ್ ಮತ್ತು ಆಟೋ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಲಾರಿ ಮಾಲೀಕರು, ಸಾರಿಗೆ ಕಾರ್ಮಿಕರು, ಚಿತ್ರೋದ್ಯಮ ಸೇರಿದಂತೆ 800ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ.[ಸೆ.26ರಂದು ಕರ್ನಾಟಕ ಬಂದ್]

ಸೆ.26ರ ಶನಿವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಸಲಾಗುತ್ತದೆ' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

English summary
Karnataka government announced holiday for Bakrid on Friday 25th September, 2015. Holiday announced on September 24. But Bakrid will celebrate on Friday in Karnataka. So holiday announced on Sep 25th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X