ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಚಂದ್ರಾಪುರ ಮಠದ ಯಶಸ್ವೀ 'ಗೋಯಾತ್ರೆ'ಗೆ ಮತ್ತೊಂದು ಗರಿ

ಹೊಸನಗರ ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ಗೋಯಾತ್ರೆಗೆ ಪ್ರತಿಷ್ಟಿತ 'ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವಾರ್ಡ್ಸ್ ಫಾರ್ ಇನ್ನೋವೇಶನ್' ಪ್ರಶಸ್ತಿ ಲಭಿಸಿದೆ.

|
Google Oneindia Kannada News

ನವದೆಹಲಿ, ಮೇ 12: ಹೊಸನಗರ ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ಗೋಯಾತ್ರೆಗೆ ಪ್ರತಿಷ್ಟಿತ 'ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವಾರ್ಡ್ಸ್ ಫಾರ್ ಇನ್ನೋವೇಶನ್' ಪ್ರಶಸ್ತಿ ಲಭಿಸಿದೆ.

ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಗುರುವಾರ, ಮೇ ಹನ್ನೊಂದರಂದು ನಡೆದ ಸಮಾರಂಭದಲ್ಲಿ ಮಠದ ಪರವಾಗಿ, ರಾಮಚಂದ್ರಾಪುರ ಮಠದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಕೆ ಜಿ ಭಟ್ ಪ್ರಶಸ್ತಿ ಸ್ವೀಕರಿಸಿದರು. [ನಾವೂ ಹೃದಯ ಕಳ್ಕೊಂಡರೆ ಗೋವು ಬದ್ಕೋದು ಹೇಗೆ]

Gov Yatra headed by Ramachandrapura Math got vajpayee innovation award

ರಾಮಚಂದ್ರಾಪುರ ಮಠದ ಶ್ರೀಗಳಾದ ರಾಘವೇಶ್ವರಭಾರತೀ ಶ್ರೀಗಳರವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದ ಮಂಗಲ ಗೋಯಾತ್ರೆ ಅದ್ಭುತ ಯಶಸ್ಸು ಗಳಿಸಿ ರಾಷ್ಟ್ರಾದ್ಯಂತ ಮನೆಮಾತಾಗಿತ್ತು.

ಈ ಸಂದರ್ಭದಲ್ಲಿ ಇಂಡಿಯನ್ ಆರ್ಮಿ, ಉತ್ತರಪ್ರದೇಶ ಪೋಲಿಸ್, ಏರ್ ಇಂಡಿಯಾ, ಕಾನ್ಪುರದ ರಾಮ ಯುನಿವರ್ಸಿಟಿ ಸಂಸ್ಥೆಗಳಿಗೆ ರಿಥಿಂಕ್ ಇಂಡಿಯಾ ಸಂಸ್ಥೆಯು ಅಟಲ್ ಬಿಹಾರಿ ವಾಜಪೇಯಿ ಅವಾರ್ಡ್ಸ್ ಫಾರ್ ಇನ್ನೊವೇಶನ್ ಪ್ರಶಸ್ತಿಯನ್ನೂ ಪ್ರಧಾನ ಮಾಡಿದೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಡಾ. ಸುರಭಿ ವೈಶ್ ಮಿತ್ತಲ್, ರಾಘವ್ ಮಿತ್ತಲ್ ಮುಂತಾದವರು ಉಪಸ್ಥಿತರಿದ್ದರು.

ಗೋವುಗಳನ್ನು ಸಂರಕ್ಷಿಸುವ ಮತ್ತು ಗೋರಕ್ಷಣೆಗೆ ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು ಎಂದು ಜಾಗೃತಿ ಮೂಡಿಸುವ 'ಗೋಯಾತ್ರೆ'ಯನ್ನು ರಾಮಚಂದ್ರಾಪುರ ಮಠ ಹಮ್ಮಿಕೊಂಡಿತ್ತು. ಮಠದ ವತಿಯಿಂದ ಆಯೋಜಿಸಲಾಗಿದ್ದ ಈ ಗೋಯಾತ್ರೆ ವ್ಯಾಪಕ ಪ್ರಶಂಸೆಗೊಳಗಾಗಿತ್ತು.

English summary
Gov Yatra headed by Raghaveshwara Seer of Ramachandrapura Math, got Atal Bihari vajpayee award for innovation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X