ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯರ ವರ್ಧಂತಿಯಂದು ಸುವರ್ಣ ಕವಚ ಸಮರ್ಪಣೆ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಮಾರ್ಚ್ 15 : ಶಿಶಿರ ಋತು ಫಾಲ್ಗುಣ ಮಾಸದ ಸಪ್ತಮಿಯಂದು 'ಕಲಿಯುಗದ ಕಲ್ಪತರು' ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ (ಹುಟ್ಟುಹಬ್ಬದ) ಸಂಭ್ರಮ. ಕರ್ನಾಟಕದ ಎಲ್ಲ ರಾಯರ ಮಠಗಳಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ ಸಮರ್ಪಿಸಲಾಗಿದೆ.

ಈ ಸುಸಂದರ್ಭದಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರಹ್ಲಾದರಾಜರಿಗೆ ಭಕ್ತರೊಬ್ಬರು ಸುವರ್ಣ ಕವಚ ಸಮರ್ಪಿಸಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವ ಅಂಗವಾಗಿ ಶ್ರೀಮಠದಲ್ಲಿ ದಿನನಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. [ಸತತ 7 ಗಂಟೆಗಳ ಗಾಯನ, ದಾಖಲೆ ಬರೆದ ಮಂತ್ರಾಲಯ]

Golden kavach offered to Raghavendra math in Mantralaya

ಹೈದ್ರಾಬಾದ್ ಮೂಲದ ಭೂಮಪರ್ತಿ ವೆಂಕಟ ಶ್ರೀರಾಮ ಕುಮಾರರವರು ಪ್ರಹ್ಲಾದರಾಜರಿಗೆ ಸುವರ್ಣ ಕವಚ ಸಮರ್ಪಿಸಿದರು. ಬೆಳಿಗ್ಗೆ ಪೀಠಾಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸುವರ್ಣ ಕವಚಕ್ಕೆ ಮಂಗಳಾರತಿ ನೆರವೇರಿಸಿದ ನಂತರ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು.

ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧಂತಿಯ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಮಠದಲ್ಲಿ ನೆರವೇರಿಸಲಾದ ಮೆರವಣಿಗೆಯಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದರು. [ಯತಿಗಳ ವೃಂದಾವನದಲ್ಲಿ ಉತ್ತರಾದಿ, ರಾಯರ ಮಠದ ವೈಷಮ್ಯ!]

English summary
A devotee from Andhra Pradesh has offered golden kavach (plating) to Prahlad Rajaru of Raghavendra Swamy math in Mantralaya. Sri Subudhendra Teertha swamiji offered mangalarati to golden kavach and in was taken in a procession.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X