ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡವಾಳ ಆಕರ್ಷಣೆಗೆ ಫಾರೀನ್ ನಲ್ಲಿ ಕರ್ನಾಟಕ ರೋಡ್ ಶೋ

By Mahesh
|
Google Oneindia Kannada News

ಬೆಂಗಳೂರು, ಜು. 30: ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ಭಾರತದ ಪ್ರಮುಖ ನಗರಗಳು ಸೇರಿದಂತೆ ವಿದೇಶಗಳಲ್ಲಿಯೂ ರೋಡ್ ಶೋ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವಿಧಾನಸೌಧದಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜನೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬುಧವಾರ ಸಭೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. [80 ಲಕ್ಷ ಉದ್ಯೋಗ ಅವಕಾಶ ಏರಿಕೆ ಗುರಿ : ಪಾಟೀಲ್]

ದೇಶದ ಪ್ರಮುಖ ನಗರಗಳ ಜೊತೆಗೆ ಫ್ರಾನ್ಸ್, ಸಿಟ್ಜರ್ಲೆಂಡ್ ಹಾಗೂ ಯುನೈಟೆಡ್ ಕಿಂಗ್‌ಡಂನಲ್ಲೂ ರೋಡ್ ಶೋ ನಡೆಸಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. [5 ಯೋಜನೆಗೆ ಸರ್ಕಾರದ ಒಪ್ಪಿಗೆ, 3 ಸಾವಿರ ಉದ್ಯೋಗ ಸೃಷ್ಟಿ]

ನವೆಂಬರ್ 23 ರಿಂದ 25ರ ತನಕ ನಡೆಯಲಿರುವ ಹೊಸ ರೂಪದ ಈ ಬಂಡವಾಳ ಹೂಡಿಕೆ ಸಮಾವೇಶ, ಮೋದಿ ಅವರ ಮೇಕ್ ಇನ್ ಇಂಡಿಯಾ ಮಂತ್ರದಂತೆ ಮೇಕ್ ಇನ್ ಕರ್ನಾಟಕ ಮಂತ್ರವನ್ನು ಜಪಿಸಲಿದೆ. [ಕರ್ನಾಟಕದ ನೂತನ ಕೈಗಾರಿಕಾ ನೀತಿಯ ಮುಖ್ಯಾಂಶ]

ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಹೇಳಿಕೆ

ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಹೇಳಿಕೆ

ಹೂಡಿಕೆದಾರರನ್ನು ಆಕರ್ಷಿಸಲು ದೇಶದ ಇತರೆ ಪ್ರಮುಖ ನಗರಗಳಲ್ಲಿ ರೋಡ್ ಶೋ ನಡೆಸಿ ಬಂಡವಾಳವನ್ನು ತರಲು ಯೋಜಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಹೇಳಿದ್ದಾರೆ.

ಈ ಸಭೆಯಲ್ಲಿ ಉಪಸ್ಥಿತರಿದ್ದವರು

ಈ ಸಭೆಯಲ್ಲಿ ಉಪಸ್ಥಿತರಿದ್ದವರು

ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಹಜ್ ಸಚಿವ ಆರ್.ರೋಷನ್ ಬೇಗ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಿ.ಎನ್. ನರಸಿಂಹರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯದಲ್ಲಿ ರೋಡ್ ಶೋಗಳು ಎಲ್ಲೆಲ್ಲಿ?

ರಾಜ್ಯದಲ್ಲಿ ರೋಡ್ ಶೋಗಳು ಎಲ್ಲೆಲ್ಲಿ?

ಮೈಸೂರು, ಹುಬ್ಬಳ್ಳಿ, ಕಲಬುರಗಿ, ಚೆನ್ನೈ, ಹೈದರಾಬಾದ್, ಪುಣೆ, ದೆಹಲಿ ಹಾಗೂ ಇನ್ನಿತರ ನಗರಗಳು.

ಬಂಡವಾಳ ಹೂಡಿಕೆ ಸಮಾವೇಶ

ಬಂಡವಾಳ ಹೂಡಿಕೆ ಸಮಾವೇಶ

ಆಟೋಮೊಬೈಲ್, ಏರೋಸ್ಪೇಸ್, ಮೆಷಿನ್ ಟೂಲ್ಸ್, ರಕ್ಷಣಾ ಖಾತೆ ಸಾಧನಗಳು, ಹೆವಿ ಇಂಜಿನಿಯರಿಂಗ್..ಇತ್ಯಾದಿ ಕ್ಷೇತ್ರಗಳಿಗೆ ನವೆಂಬರ್ 23 ರಿಂದ 25ರ ತನಕ ನಡೆಯಲಿರುವ ಹೊಸ ರೂಪದ ಈ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಜಪಾನ್, ತೈವಾನ್, ಮಧ್ಯಪ್ರಾಚ್ಯ ರಾಷ್ಟ್ರಗಳು, ಯುಎಸ್, ಜರ್ಮನಿ, ಫ್ರಾನ್ಸ್, ಸ್ವೀಡನ್ ಹಾಗೂ ಸಿಂಗಪುರದಿಂದ ಹೂಡಿಕೆ ನಿರೀಕ್ಷೆ.

ಇನ್ವೆಸ್ಟ್ ಕರ್ನಾಟಕ-2015

ಇನ್ವೆಸ್ಟ್ ಕರ್ನಾಟಕ-2015

ರಾಜಸ್ಥಾನ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ರಾಜ್ಪಾಲ್ ಸಿಂಗ್ ಶೇಕಾವತ್ ಅವರು ರಾಜಸ್ಥಾನದಲ್ಲಿನ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲು ಬೆಂಗಳೂರಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಯಶಸ್ವಿ ರೋಡ್ ಶೋ ನಡೆಸಿದ್ದರು.

English summary
Global Investors Meet: Karnataka Government has decided to organize road shows in foreign countries, beside major cities in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X