ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಸಿ: ಸಿಲಿಂಡರ್ ಸ್ಫೋಟಿಸಿ ಹೊತ್ತಿ ಉರಿದ ಓಮ್ನಿ

|
Google Oneindia Kannada News

ಶಿರಸಿ, ಜು. 29: ಗ್ಯಾಸ್ ಸಿಲಿಂಡರ್ ಅಳವಡಿಕೆ ಮಾಡಿಕೊಂಡು ಓಮ್ನಿ ಚಲಾಯಿಸುವವರೇ ಎಚ್ಚರಿಕೆ. ಶಿರಸಿ ಪಟ್ಟಣದಲ್ಲಿ ಗ್ಯಾಸ್ ಅಳವಡಿಕೆ ಮಾಡಿದ್ದ ಓಮ್ನಿ ಏಕಾಏಕಿ ಸ್ಪೋಟಗೊಂಡು ಹೊತ್ತಿ ಉರಿದಿದೆ.

ಶಿರಸಿ ನಗರದ ಹೃದಯ ಭಾಗದ ಮಧುವನ ಹೋಟೆಲ್ ಸಮೀಪ ನಿಲ್ಲಿಸಿದ್ದ ಓಮ್ನಿಯೊಂದು ಮಂಗಳವಾರ ರಾತ್ರಿ ಇದ್ದಕ್ಕಿದಂತೆ ಸ್ಫೋಟಗೊಂಡಿದೆ. ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.[ಮಾರುತಿ ಓಮ್ನಿ ಕೆಫೆ; ನಿಮ್ಮ ಫಾಸ್ಟ್ ಫುಡ್ ಎಂಜಾಯ್ ಮಾಡಿ!]

ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಶಿರಸಿ-ಯಲ್ಲಾಪುರ ರಸ್ತೆಯ ಪಕ್ಕದಲ್ಲಿಯೇ ಓಮ್ನಿಯನ್ನು ನಿಲ್ಲಿಸಲಾಗಿತ್ತು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡರು. ಈ ಒಮ್ನಿ ಸ್ಫೋಟ ಕೆಲ ಕಾಲ ಸ್ಥಳೀಯರಲ್ಲಿ ಆತಂಕ ಉಂಟುಮಾಡಿತ್ತು. ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ ಸುತ್ತಮುತ್ತ ಭಾಗದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡಿಕೊಂಡು ಓಮ್ನಿ ಚಲಾಯಿಸುವವರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಗೃಹಬಳಕೆ ಸಿಲಿಂಡರ್ ನ್ನು ಓಮ್ನಿ ಬಳಕೆ ಮಾಡಿಕೊಳ್ಳುತ್ತಿರುವುದು ನಡೆಯುತ್ತಿದೆ.

ಸಂಪೂರ್ಣ ಭಸ್ಮ

ಸಂಪೂರ್ಣ ಭಸ್ಮ

ಶಿರಸಿಯಲ್ಲಿ ಮಂಗಳವಾರ ಮಧ್ಯರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಓಮ್ನಿ ಹೊತ್ತಿ ಉರಿದಿದ್ದು ಕೇವಲ ಅವಶೇಷ ಮಾತ್ರ ಉಳಿದುಕೊಂಡಿದೆ.

ಆಳೆತ್ತರಕ್ಕೆ ಬೆಂಕಿ

ಆಳೆತ್ತರಕ್ಕೆ ಬೆಂಕಿ

ಸ್ಫೋಟಗೊಂಡ ತಕ್ಷಣ ಆಳೆತ್ತರಕ್ಕೆ ಬೆಂಕಿ ವ್ಯಾಪಿಸಿತ್ತು. ಸ್ಫೋಟದ ಸಂದರ್ಭ ಹತ್ತಿರದಲ್ಲಿ ಯಾರೂ ಇಲ್ಲವಾದ್ದರಿಂದ ಪ್ರಾಣಹಾನಿಯಾಗುವುದು ತಪ್ಪಿದೆ.

ಬೆಂಕಿ ನಂದಿಸಿದ ಸಿಬ್ಬಂದಿ

ಬೆಂಕಿ ನಂದಿಸಿದ ಸಿಬ್ಬಂದಿ

ಸ್ಫೋಟದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಪರಿಹಾರ ಕಾರ್ಯ ಕೈಗೊಂಡರು. ವ್ಯಾಪಿಸುತ್ತಿದ್ದ ಬೆಂಕಿಯನ್ನು ಹತೋಟಿಗೆ ತಂದರು.

ರಸ್ತೆ ಸಂಚಾರ ಬಂದ್

ರಸ್ತೆ ಸಂಚಾರ ಬಂದ್

ಬೆಂಕಿ ಹೊತ್ತಿ ಉರಿದ ಪರಿಣಾಮ ಕೆಲ ಕಾಲ ಶಿರಸಿ-ಯಲ್ಲಾಪುರ ರಸ್ತೆ ಸಂಚಾರ ಬಂದ್ ಆಗಿತ್ತು. ರಾತ್ರಿ ಘಟನೆ ಸಂಭವಿಸಿದ್ದರಿಂದ ಜನ ಸಂಚಾರ ವಿರಳವಾಗಿತ್ತು.

English summary
Omni van completely burned after gas cylinder blast in Sirsi, Uttara kannada district on Tuesday night 11.30 pm. The van which is parked near Hotel Madhuvana, Srisi-yallapur main road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X