ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಗದುಗಿಗೆ ತುಂಗಭದ್ರಾ ನೀರು: ಎಚ್.ಕೆ.ಪಾಟೀಲ್

By Mahesh
|
Google Oneindia Kannada News

ಗದಗ, ಜ.15: ಗದುಗಿನ ಜನತೆಗೆ ಪ್ರತಿದಿನ ತಲಾ 135 ಲೀಟರ್ ಕುಡಿಯುವ ನೀರಿನ ಸರಬರಾಜು ಮಾಡುವ ಯೋಜನೆ ಆಗಸ್ಟ್ ತಿಂಗಳ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಈ ಯೋಜನೆ 2ನೇ ಹಂತದ ಸಿಂಗಟರಾಯನಕೆರೆ ಹಾಗೂ ಡಂಬಳ ಸಮೀಪದ ನೀರೆತ್ತುವ ಕೇಂದ್ರದ ಕಾಮಗಾರಿಗಳನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲ ಅವರು ವೀಕ್ಷಿಸಿ ನಂತರ ಮಾತನಾಡಿದರು.

ಏಷಿಯನ್ ಅಭಿವೃಧ್ಧಿ ಬ್ಯಾಂಕ್ ಹಾಗೂ ಉತ್ತರ ಕರ್ನಾಟಕ ನಗರ ವಲಯದ ಬಂಡವಾಳ ಹೂಡಿಕಾ ಕಾರ‍್ಯಕ್ರಮದಡಿ ಗದಗ ಬೆಟಗೇರಿ ಅವಳಿ ನಗರಗಳಿಗೆ ತುಂಗಭದ್ರಾ ನದಿ ಹಮ್ಮಿಗಿ ಬ್ಯಾರೇಜ್ ಯಿಂದ ಕುಡಿಯುವ ನೀರನ್ನು ಪೂರೈಸಲು 172 ಕೋಟಿ ರು.ಗಳ ಕಾಮಗಾರಿ ಜರುಗುತ್ತಿದೆ ಎಂದರು.

Gadag will get Tungabhadra river water by August 2015: Minister HK Patil,

ಸಿಂಗಟರಾಯನಕೆರೆ ಹತ್ತಿರದ ನೀರು ಶುದ್ಧೀಕರಣ ಘಟಕದ ಕಾಮಗಾರಿ 27 ಕೋಟಿ ರು. ವೆಚ್ಚದಲ್ಲಿ 42.67 ಎಂ.ಎಲ್.ಡಿ. ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ, 16 ಲಕ್ಷ ಲೀಟರ್ ಸಾಮರ್ಥ್ಯದ ಬ್ಯಾಲೆನ್ಸಿಂಗ್ ರಿಸರ್ವಾಯರ್, ನೆಲಮಟ್ಟದ ಜಲಸಂಗ್ರಹಗಾರ ಹಾಗೂ ಪಂಪಿಂಗ್ ಮಶಿನ್ ಅಳವಡಿಸಲಾಗುವುದು.

ಮಾರ್ಚ್ 15 ರೊಳಗೆ ಇವೆಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಾವಿಂದು ಕ್ರಿಯಾತ್ಮಕ ದರಪಟ್ಟಿಯನ್ನು ಸಿದ್ಧಪಡಿಸಿ ಕ್ರಿಯಾತ್ಮಕ ವೇಳಾಪಟ್ಟಿ ತಯಾರಿಸಿ ಅದರಂತೆ ಕಾಮಗಾರಿಗಳನ್ನು ತೀವ್ರವಾಗಿ ಪೂರ್ಣಗೊಳಿಸಲು ತಿಳಿಸಲಾಗಿದೆ.

ಈ ಕಾಮಗಾರಿಯು ಒಟ್ಟಾರೆಯಾಗಿ ಗದುಗಿಗೆ ನಿತ್ಯ ನೀರು ಸರಬರಾಜು ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕಾಮಗಾರಿ ನಿರ್ವಹಿಸುತ್ತಿರುವ ಅಹಮದಾಬಾದಿನ ದೋಶಿನ ಸಂಸ್ಥೆಯ ಯೋಜನಾ ನಿರ್ದೇಶಕ ಸಂದೀಪ್ ಕೇಕನ್ ಅವರಿಗೆ ಸೂಚಿಸಲಾಗಿದೆ.

ಅಲ್ಲದೇ ಕಾಲಕಾಲಕ್ಕೆ ತಾವು ಹಾಗೂ ಜಿಲ್ಲಾಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ಮಾಡುತ್ತಿದ್ದು ಎದುರಾಗುತ್ತಿರುವ ಅಡೆತಡೆಗಳ ಹಾಗೂ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ನಿವಾರಿಸಲು ಪ್ರಯತ್ನಿಸಲಾಗುತ್ತಿದೆ. ಗದುಗಿನಲ್ಲಿ ನಿರಂತರ ನೀರು ಯೋಜನೆಯಡಿ 6 ಪ್ರದೇಶಗಳಿಗೆ ಟೆಂಡರ್ ಕರೆಯಲಾಗಿದೆ. ಒಟ್ಟಾರೆಯಾಗಿ ಈ ಯೋಜನೆಗಳಿಗೆ ಹಣಕಾಸು ಅನುದಾನ ಕೊರೆತೆಯಾಗದಂತೆ ನಿಗದಿತ ಅವಧಿಯಲ್ಲಿ ಜನರಿಗೆ ನೀರು ಪೂರೈಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

English summary
Gadaga-Betageri twin cities will get Tunga Bhadra river water from Hammige Barrage latest by March-April 2015 said Karnataka Rural and Panchayatraj Minister HK Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X