ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳಸಿ ಬಿಸಾಡೋಕೆ ನಾನೇನು ಚಪ್ಲೀನಾ : ಶಾಲುಸುತ್ತಿ ಬಾರಿಸಿದ ಅಂಬಿ

|
Google Oneindia Kannada News

ಬೆಂಗಳೂರು, ಜೂನ್ 21 : 'ಅಸಮರ್ಥ ಎಂದ ಮೇಲೆ ಶಾಸಕ ಸ್ಥಾನದಲ್ಲಿಯೂ ಮುಂದುವರೆಯುವುದಿಲ್ಲ. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವುದಿಲ್ಲ' ಎಂದು ಮಾಜಿ ಸಚಿವ, ಮಂಡ್ಯ ಶಾಸಕ ಅಂಬರೀಶ್ ಸ್ಪಷ್ಟಪಡಿಸಿದರು.

ಮಂಗಳವಾರ ಬೆಳಗ್ಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಂಬರೀಶ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 'ಸೌಜನ್ಯದಿಂದ ಕರೆದು ಮಾತನಾಡಿದ್ದರೆ ನಾನೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೆ' ಎಂದು ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. [ಶಾಸಕ ಸ್ಥಾನಕ್ಕೆ ಅಂಬರೀಶ್ ರಾಜೀನಾಮೆ]

ambarish

'ನನ್ನ ರಾಜೀನಾಮೆ ವಿಚಾರದಲ್ಲಿ ರಮ್ಯಾ ಕುತಂತ್ರವಿಲ್ಲ. ಅವರ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆಕೆಯನ್ನು ಮಧ್ಯ ಎಳೆದು ತರಬೇಡಿ' ಎಂದು ರಮ್ಯಾ ಅವರಿಗೆ ಕ್ಲೀನ್ ಚಿಟ್ ಕೊಟ್ಟರು. [ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್]

ಅಂಬರೀಶ್ ಹೇಳಿದ್ದಿಷ್ಟು... [ಜೆಡಿಎಸ್ ಸೇರಲಿದ್ದಾರೆ ಅಂಬರೀಶ್]

* 'ಸಚಿವ ಸ್ಥಾನಕ್ಕಾಗಿ ನಾನು ಎಂದೂ ಲಾಬಿ ಮಾಡಿಲ್ಲ. ಸಮರ್ಥ ಎಂದು ಸಚಿವ ಸ್ಥಾನ ನೀಡಿದ್ದರು. ಆದರೆ, ಈಗ ಅಸಮರ್ಥ ಎಂದು ತೆಗೆದು ಹಾಕಿದ್ದಾರೆ. ಇದಕ್ಕೂ ಮೊದಲು ನನ್ನ ಜೊತೆ ಮಾತುಕತೆ ನಡೆಸಬಹುದಿತ್ತು'. [ಅಂಬಿ ವಿರುದ್ಧ ದಿಗ್ವಿಜಯ್ ಬಳಿ ಫಿಟ್ಟಿಂಗ್ ಇಟ್ಟಿದ್ದು ರಮ್ಯಾ!]

* 'ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ನಾನೇ ಖುದ್ದಾಗಿ ಹೋಗಿ ರಾಜೀನಾಮೆಯನ್ನು ಸಲ್ಲಿಸಿ ಬರುತ್ತೇನೆ'. [ಮೊದಲ ಬಾರಿ ಸಚಿವರಾದ 7 ಶಾಸಕರ ಪರಿಚಯ]

* 'ನನಗೆ ನನ್ನದೇ ಆದ ಘನತೆ ಇದೆ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದೇನೆ. ಮೂರು ವರ್ಷಗಳಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಹೋಗಿ ನಾನು ಎಂದೂ ನಿಲ್ಲಲಿಲ್ಲ. ಸುಮಾರು 5 ದಿನ ಅವರ ಮನೆಗೆ ಹೋಗಿರಬಹುದು ಅಷ್ಟೇ, ನಾನು ನನ್ನ ಇಲಾಖೆ ಎಂದು ಕೆಲಸ ಮಾಡಿಕೊಂಡಿದ್ದೆ'.

* 'ಯಾರು ಸಮರ್ಥರು?, ಯಾರು ಅಸಮರ್ಥರು? ಎಂದು ಮುಖ್ಯಮಂತ್ರಿಗಳು ಆಲೋಚಿಸಬೇಕು. ಹಿರಿಯರಾದ ಶ್ರೀನಿವಾಸ ಪ್ರಸಾದ್ ಅವರನ್ನೇ ಕೈ ಬಿಟ್ಟಿದ್ದಾರೆ. ಅವರಿಗಿಂತ ಸಜ್ಜನರು ಯಾರಿದ್ದಾರೆ?. ಏನಾದರೂ ಮಾಡಿಕೊಳ್ಳಲಿ ಒಟ್ಟು ರಾಜ್ಯದ ಅಭಿವೃದ್ಧಿ ಮಾಡಲಿ'.

* 'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮುಂದೆ ಯಾವ ಪಕ್ಷಕ್ಕೂ ಸೇರುವುದಿಲ್ಲ. ಹಾಗೆ ಸೇರುವುದಾದದರೆ ನನಗಿಂತ ಮೊದಲು ನಿಮಗೆ ಗೊತ್ತಾಗುತ್ತದೆ'.

* 'ಮೂರು ವರ್ಷಗಳಲ್ಲಿ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದೇನೆ? ಎಂಬುದು ಕಾಗದದಲ್ಲಿದೆ, ಹೋಗಿ ನೋಡಿ. ಏನು ಕೆಲಸ ಮಾಡಿದ್ದೇನೆ ಎಂಬುದನ್ನು ಅದೇ ಹೇಳುತ್ತದೆ.

* 'ಭಿನ್ನಮತೀಯ ಶಾಸಕರು ನನ್ನ ನೇತೃತ್ವದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್‌ಗೆ ಒತ್ತಾಯ ಮಾಡಲಿದ್ದಾರೆ ಎಂಬ ಬಗ್ಗೆ ನನಗೇನೂ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಏನೂ ಮಾತನಾಡಲ್ಲ'

* 'ನನ್ನ ಆರೋಗ್ಯ ಸರಿ ಇದೆ. ಫಸ್ಟ್‌ ಕ್ಲಾಸ್ ಆಗಿದ್ದೇನೆ. ದೇವೇಗೌಡರು ಕರೆ ಮಾಡಿದ್ದರು. ನಮ್ಮ ಸಮುದಾಯದ ಪ್ರತಿನಿಧಿ ಬೇಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ ಎಂದು ಹೇಳಿದರು'

English summary
Former minister and Mandya MLA Ambareesh addressed press conference on June 21, 2016. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X