ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ನಿರ್ಮಾಣಗೊಳ್ಳಲಿವೆ 4 ಫುಡ್ ಪಾರ್ಕ್

|
Google Oneindia Kannada News

ಬೆಂಗಳೂರು, ಜುಲೈ 27 : ತುಮಕೂರು ನಗರದ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶ­ದಲ್ಲಿನ ಫುಡ್‌ ಪಾರ್ಕ್‌ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ 2014ರಲ್ಲಿ ಉದ್ಘಾಟಿಸಿದ್ದಾರೆ. ಸದ್ಯ, ಕರ್ನಾಟಕದಲ್ಲಿ ಇನ್ನೂ ನಾಲ್ಕು ಫುಡ್‌ ಪಾರ್ಕ್‌ಗಳು ನಿರ್ಮಾಣಗೊಳ್ಳಲಿವೆ.

ಕರ್ನಾಟಕ ಆಹಾರ ನಿಯಮಿತದ ಉಸ್ತುವಾರಿಯಲ್ಲಿ ಈ ಫುಡ್‌ ಪಾರ್ಕ್‌ಗಳು ನಿರ್ಮಾಣಗೊಳ್ಳಲಿವೆ. ಈ 4 ಆಹಾರ ಪಾರ್ಕ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 13 ಕೋಟಿ ಮತ್ತು ರಾಜ್ಯ ಸರ್ಕಾರ 15 ಕೋಟಿ ಅನುದಾನವನ್ನು ನೀಡಿವೆ. [ಏನಿದು ತುಮಕೂರಿನ ಮೆಗಾ ಫುಡ್ ಪಾರ್ಕ್?]

food

ಎಲ್ಲೆಲ್ಲಿ ಫುಡ್‌ ಪಾರ್ಕ್? : ನಾಲ್ಕು ನೂತನ ಫುಡ್‌ ಪಾರ್ಕ್‌ಗಳ ಪೈಕಿ ಮಾಲೂರಿನಲ್ಲಿ 87 ಎಕರೆಯಲ್ಲಿ, ಹಿರಿಯೂರಿನಲ್ಲಿ 106 ಎಕರೆಯಲ್ಲಿ, ಬಾಗಲಕೋಟೆಯಲ್ಲಿ 100 ಎಕರೆಯಲ್ಲಿ ಹಾಗೂ ಜೇವರ್ಗಿಯಲ್ಲಿ 105 ಎಕರೆ ಪ್ರದೇಶದಲ್ಲಿ ಪಾರ್ಕ್‌ಗಳು ನಿರ್ಮಾಣವಾಗಲಿವೆ. [ಕರಾವಳಿ ತೀರ ಮಂಗಳೂರಿನಲ್ಲಿ ತಿನ್ನಲು ಮೀನು ಸಿಕ್ತಿಲ್ಲ!]

ಖಾಸಗಿ ಸಂಸ್ಥೆಗಳು ಫುಡ್‌ ಪಾರ್ಕ್‌ಗಳ ಸ್ಥಾಪನೆ ಮಾಡಲಿವೆ. ಈ ಪಾರ್ಕ್‌ಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಸಿದ್ಧಪಡಿಸಿದ ಆಹಾರ, ನಿರ್ಜಲೀಕರಣ ಮುಂತಾದ ಚಟುವಟಿಕೆಗಳು ನಡೆಯುತ್ತವೆ.

ಅಂದಹಾಗೆ ಸುಮಾರು 110 ಎಕರೆ ಪ್ರದೇಶದಲ್ಲಿ ತುಮಕೂರಿನಲ್ಲಿ ನಿರ್ಮಾಣಗೊಂಡಿದ್ದ ಫುಡ್ ಪಾರ್ಕ್‌ ಅನ್ನು ಪ್ರಧಾನಿ ನರೇಂದ್ರ ಮೋದಿ 2014ರ ಸೆಪ್ಟೆಂಬರ್‌ನಲ್ಲಿ ಉದ್ಘಾಟಿಸಿದ್ದರು. ಕೇಂದ್ರ ಆಹಾರ ಸಂಸ್ಕರಣಾ ಕೈಗಾ­ರಿಕಾ ಸಚಿವಾಲಯ ಈ ಪಾರ್ಕ್ ನಿರ್ಮಾಣಕ್ಕೆ ವಿವಿಧ ಹಂತಗಳಲ್ಲಿ ಸಹಾಯಧನವನ್ನು ನೀಡಿತ್ತು.

English summary
4 Food Parks will be established in Karnataka under Food Corporation limited. The locations identified for the food parks are Maluru, Hiriyuru, Bagalkote and Jewargi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X