ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಸಂಸ್ಕರಣೆ ಇಲಾಖೆಗೆ ರಶ್ಮಿ ಮಹೇಶ್ ವರ್ಗ

By Mahesh
|
Google Oneindia Kannada News

ಬೆಂಗಳೂರು, ಏ.30: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕಿಯಾಗಿದ್ದ ರಶ್ಮಿ ವಿ. ಮಹೇಶ್‌ ಸೇರಿದಂತೆ ಒಟ್ಟು ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಬುಧವಾರ ಸಂಜೆ ಆದೇಶ ಹೊರಡಿಸಲಾಗಿದೆ.

ರಶ್ಮಿ ವಿ. ಮಹೇಶ್‌ ಅವರನ್ನು ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಅವರನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗ ಮಾಡಲಾಗಿದೆ.

Five IAS officers transferred including Rashmi V. Mahesh

ಬಿಬಿಎಂಪಿ ಆಯುಕ್ತರಾಗಿದ್ದ ಎಂ. ಲಕ್ಷ್ಮಿನಾರಾಯಣ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ವರ್ಗ ಮಾಡಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ರಶ್ಮಿ ಅವರು ನಿರ್ವಹಿಸುತ್ತಿದ್ದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಗೆ ಮಹಾ ನಿರ್ದೇಶಕರಾಗಿ ಲಕ್ಷ್ಮಿ ನಾರಾಯಣ ಹೆಚ್ಚುವತಿ ಹೊಣೆ ಹೊರಲಿದ್ದಾರೆ. [ರಶ್ಮಿ ಮಹೇಶ್ ಮೇಲಿನ ಹಲ್ಲೆ ಪೂರ್ವನಿಯೋಜಿತ]

ವರ್ಗಾವಣೆಗೊಂಡ ಅಧಿಕಾರಿಗಳು:
* ರಶ್ಮಿ ಮಹೇಶ್: ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನ ಇಲಾಖೆ, ಕಾರ್ಯದರ್ಶಿ
* ಎಂ. ಲಕ್ಷ್ಮಿನಾರಾಯಣ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಗೆ ಮಹಾ ನಿರ್ದೇಶಕ.
* ಅರವಿಂದ ಜಾಧವ್‌ : ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷ
* ಡಾ. ಜಿ. ಕಲ್ಪನಾ : ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ
* ಪ್ರದೀಪ್‌ ಸಿಂಗ್‌ ಖರೋಲಾ : ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ. (ಒನ್ ಇಂಡಿಯಾ ಸುದ್ದಿ)

English summary
The Karnataka government transferred five IAS officers on Wednesday (Apr.29). The officers names follows Rashmi V. Mahesh, M. Lakshminarayana, Arvind Jadhav, Pradeep Singh Kharola and G. Kalpana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X