ಹುಮ್ನಾಬಾದ್ ನಲ್ಲಿ ಸ್ಲೀಪರ್ ಕೋಚ್ ಬಸ್ ಗೆ ಬೆಂಕಿ: ಬಾಲಕಿ ಸಾವು

Posted By:
Subscribe to Oneindia Kannada

ಹುಮ್ನಾಬಾದ್, ಸೆಪ್ಟೆಂಬರ್ 15: ಸ್ಲೀಪರ್ ಕೋಚ್ ಬಸ್ ವೊಂದಕ್ಕೆ ಬೆಂಕಿ ಹೊತ್ತಿಕೊಂಡು ನಾಲ್ಕು ವರ್ಷದ ಬಾಲಕಿ ರೆಹಾನ್ ಮೃತಪಟ್ಟ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ಸಮೀಪ ಸಂಭವಿಸಿದೆ. ರೆಹಾನ್ ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಉಅಳಿದ ಪ್ರಯಾಣಿಕರು ಯಾವುದೇ ತೊಂದರೆ ಆಗದಂತೆ ಪಾರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೈದರಾಬಾದ್ ನಿಂದ ಶಿರಡಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್ ನ ಬಸ್ ನಲ್ಲಿ ಮೂವತ್ತೈದು ಪ್ರಯಾಣಿಕರಿದ್ದರು. ಶಾರ್ಟ್ ಸರ್ಕೀಟ್ ನಿಂದ ಅನಾಹುತ ಸಂಭವಿಸಿದೆ.[ಬಸ್ ನಲ್ಲಿ ಬೆಂಕಿ: ಡ್ರೈವರ್ ಹುಷಾರು, ಪ್ರಯಾಣಿಕರು ಪಾರು]

ಗಾಯಾಳುಗಳನ್ನು ಖಾಸಗಿ ಬಸ್ ನಲ್ಲಿ ಹೈದರಾಬಾದ್ ನ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಾವೇರಿ ವಿವಾದದ ಕಾರಣಕ್ಕೆ ಬಸ್ ಗೆ ಬೆಂಕಿ ಹಚ್ಚಲಾಗಿದೆ ಎಂದು ಕೆಲವಡೆ ಸುದ್ದಿ ಹಬ್ಬಿದೆ. ಅದು ಸತ್ಯಕ್ಕೆ ದೂರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
Fire on sleeper coah bus, near Humnabad, Bidar district. 4 year girl rehan died in accident, 4 injured. All are shifted to hospital. Complaint registered.
Please Wait while comments are loading...