ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮಂಡ್ಯಕ್ಕೆ ರಾಹುಲ್ ಗಾಂಧಿ ಭೇಟಿ?

|
Google Oneindia Kannada News

ಮಂಡ್ಯ, ಆ.27 : ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ 47ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಹುಲ್ ಗಾಂಧಿ ಮಂಡ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಂಡ್ಯ ಜಿಲ್ಲಾ ಕಾಂಗ್ರೆಸ್‌ ನಾಯಕರೊಂದಿಗೆ ಈ ಕುರಿತು ಈಗಾಗಲೇ ಮಾತುಕತೆ ನಡೆಸಿದೆ. ರಾಹುಲ್ ಗಾಂಧಿ ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. [ರೈತ ಆತ್ಮಹತ್ಯೆ, ಲೋಕಸಭೆಯಲ್ಲಿ ಯಡಿಯೂರಪ್ಪ ಘರ್ಜನೆ]

rahul gandhi

ಆತ್ಮಹತ್ಯೆ ಮಾಡಿಕೊಂಡ ಕೆಲವು ರೈತರ ಮನೆಗಳಿಗೆ ಭೇಟಿ ನೀಡಲಿರುವ ರಾಹುಲ್ ನಂತರ ರೋಡ್ ಶೋ ನಡೆಸಲಿದ್ದಾರೆ. ಇದಕ್ಕಾಗಿ 4 ಮಾರ್ಗಗಳನ್ನು ಗುರುತಿಸಲಾಗಿದೆ. ರಾಹುಲ್ ಭದ್ರತೆ ಉಸ್ತುವಾರಿ ವಹಿಸಿರುವ ಅಧಿಕಾರಿಗಳು ಮಾರ್ಗದ ಪರಿಶೀಲನೆ ನಡೆಸಿದ್ದಾರೆ. [ಕಬ್ಬು ಬೆಳೆಗಾರರ ಆತ್ಮಹತ್ಯೆ ಸರಣಿಗೆ ಕೊನೆಯಿಲ್ಲ]

ಜುಲೈ ತಿಂಗಳಿನಲ್ಲಿಯೇ ರಾಹುಲ್ ಗಾಂಧಿ ಮಂಡ್ಯಕ್ಕೆ ಭೇಟಿ ನೀಡಬೇಕಾಗಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಮತ್ತು ಮಾಜಿ ಕೇಂದ್ರ ಸಚಿವ ಚಲ್ಲಂರಾಜು ಅವರು ಮಂಡ್ಯಕ್ಕೆ ಭೇಟಿ ನೀಡಿ ರೈತರ ಬಗ್ಗೆ ಮಾಹಿತಿ ಸಂಗ್ರಣೆ ಮಾಡಿದ್ದರು. ಆದರೆ, ಬಿಬಿಎಂಪಿ ಚುನಾವಣೆ ಎದುರಾಗಿದ್ದರಿಂದ ರಾಹುಲ್ ಭೇಟಿ ಮುಂದಕ್ಕೆ ಹೋಯಿತು. [ಮಂಡ್ಯಕ್ಕೆ ಭೇಟಿ ನೀಡಿದ ರಮ್ಯಾ ಹೇಳಿದ್ದೇನು?]

'ರಾಹುಲ್ ಗಾಂಧಿ ಭೇಟಿ ಬಗ್ಗೆ ಕೆಪಿಸಿಸಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಬಳಿಯೂ ಅಗತ್ಯ ನೆರವು ಕೇಳಲಾಗಿದೆ. ಕೆಪಿಸಿಸಿ ಕೇಳಿದ ಮಾಹಿತಿಯನ್ನು ನೀಡಲಾಗಿದೆ' ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡ ಸತ್ಯಾನಂದ ಅವರು ಹೇಳಿದ್ದಾರೆ.

ಪಾದಯಾತ್ರೆ ಮಾರ್ಗಗಳು : ರಾಹುಲ್ ಗಾಂಧಿ ಅವರ ಪಾದಯಾತ್ರೆಗಾಗಿ ನಾಲ್ಕು ಮಾರ್ಗಗಳನ್ನು ಗುರುತಿಸಲಾಗಿದೆ. ಮಂಡ್ಯ-ಪಣಕನಹಳ್ಳಿ-ವಿ.ಸಿ.ಫಾರ್ಮ್, ಗೆಜ್ಜಲಗೆರೆ-ಕುದುರಗುಂಡು-ಸಾದೊಳಲು, ಚಿನ್ನೇನಹಳ್ಳಿ-ಸಬ್ಬನಕುಪ್ಪೆ-ಗಾಣದಹೊಸೂರು, ಉಪ್ಪರಕನಹಳ್ಳಿ-ದ್ಯಾಪಸಂದ್ರ-ಚಲ್ಲನಾಯಕನಹಳ್ಳಿ ಮಾರ್ಗಗಳನ್ನು ಪಾದಯಾತ್ರೆಗಾಗಿ ಜಿಲ್ಲಾ ಕಾಂಗ್ರೆಸ್ ಗುರುತಿಸಿದೆ. [ಪಿಟಿಐ ಚಿತ್ರ]

English summary
Congress vice-president Rahul Gandhi will visit Mandya district of Karnataka in September 2015. In Mandya more than 47 farmers committed suicide in last two months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X