ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ಮತ್ತೊಬ್ಬ ರೈತನ ಆತ್ಮಹತ್ಯೆ

|
Google Oneindia Kannada News

ಮಂಡ್ಯ, ಜೂ. 29 : ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಆದರೆ, ರಾಜ್ಯದಲ್ಲಿ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಭಾನುವಾರ ಮಂಡ್ಯದಲ್ಲಿ ಸಾಲ ತೀರಿಸಲಾಗದೆ ರೈತನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತಪಟ್ಟ ರೈತನನ್ನು ಶಿವಲಿಂಗೇಗೌಡ (37) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಜಮೀನಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದ ರೈತ ತಮ್ಮ ಜಮೀನಿನಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. [ಆತ್ಮಹತ್ಯೆ ಮಾಡಿಕೊಳ್ಳಬೇಡಿ : ಸಿದ್ದರಾಮಯ್ಯ ಕರೆ]

farmer

ಮಂಡ್ಯದ ಹೊನ್ನನಾಯಕನಹಳ್ಳಿಯಲ್ಲಿ ಶಿವಲಿಂಗೇಗೌಡರಿಗೆ ಸುಮಾರು 2 ಎಕರೆ ಜಮೀನು ಇತ್ತು. ಕಳೆದ ವರ್ಷ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ರೇಷ್ಮೆ ಸಾಕಣೆ ಮಾಡುತ್ತಿದ್ದರು. ಬ್ಯಾಂಕ್‌ನಿಂದ 2 ಲಕ್ಷ ಮತ್ತು ಸಹಕಾರ ಸಂಘದಿಂದ 1 ಲಕ್ಷ ಸಾಲ ಮಾಡಿದ್ದರು. [ಬೆಳಗಾವಿ ಅಧಿವೇಶನದ ಮುಖ್ಯಾಂಶಗಳು]

ಶನಿವಾರ ಬ್ಯಾಂಕ್‌ನಿಂದ ಸಾಲ ತೀರಿಸಿ ಎಂಬ ನೋಟಿಸ್ ಬಂದಿತ್ತು. ಇದರಿಂದ ಮನನೊಂದ ಶಿವಲಿಂಗೇಗೌಡರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರಬೇಕು ಎಂದು ಗ್ರಾಮಸ್ಥರು ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು. [ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ಸಾವಿಗೆ ಶರಣಾದ ರೈತ]

ಅಧಿವೇಶನಕ್ಕೆ ತಟ್ಟಲಿದೆ ಆತ್ಮಹತ್ಯೆ ಬಿಸಿ : ಜೂನ್ 29ರ ಸೋಮವಾರದಿಂದ ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಪ್ರತಿಪಕ್ಷಗಳು ರೈತಆತ್ಮಹತ್ಯೆಯ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿವೆ. ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಧಾರವಾಡದಿಂದ ಬೆಳಗಾವಿ ತನಕ ಪಾದಯಾತ್ರೆ ನಡೆಸಿದ್ದಾರೆ. [ಚಿತ್ರಗಳು : ಕುಮಾರಸ್ವಾಮಿ ಪಾದಯಾತ್ರೆ]

ಆತ್ಮಹತ್ಯೆ ಪ್ರಕರಣಗಳು
* ಜೂನ್ 8, ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಗುರುನಾಥ ಮಲ್ಲಪ್ಪ ಚಾಪಗಾವಿ (50).
* ಜೂನ್ 25, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಗಾಣದಹೊಸೂರಿನ ನಿಂಗೇಗೌಡ (50)
* ಜೂನ್ 26, ನಂಜನಗೂಡು ತಾಲೂಕು ಸಿಬ್ಬೇಗೌಡನಹುಂಡಿಯ ಶಿವಲಿಂಗೇಗೌಡ (40)
* ಜೂನ್ 27, ಹಾವೇರಿ ಜಿಲ್ಲೆಯ ಕುರುಗುಂದ ಗ್ರಾಮದ ಜಗದೀಶ್‌ ಕಿಡೆಗಣಿ (45)
* ಜೂನ್ 28, ಮಂಡ್ಯದ ಹೊನ್ನನಾಯಕನಹಳ್ಳಿಯಲ್ಲಿ ಶಿವಲಿಂಗೇಗೌಡ

English summary
37-year-old farmer Shivalingegowda committed suicide in Mandya, Karnataka on Sunday, June 28, 2015. 4 farmers committed suicide Karnataka last four days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X