ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಟಿ ಖಾದರ್ ಪುತ್ರಿಯ ನಕಲಿ ಚಿತ್ರ, ದೂರು ದಾಖಲು

|
Google Oneindia Kannada News

ಬೆಂಗಳೂರು, ಜ. 23 : ಕೆಲವು ದಿನಗಳಿಂದ ವಾಟ್ಸ್ ಅಪ್‌ನಲ್ಲಿ ಹರಿದಾಡುತ್ತಿದ್ದ ಸಚಿವ ಯು.ಟಿ.ಖಾದರ್ ಮಗಳ ಫೋಟೋ ನಕಲಿ ಎಂಬುದು ಸಾಬೀತಾಗಿದೆ. ಮೈ ತುಂಬಾ ಚಿನ್ನಾಭರಣ ಧರಿಸಿರುವ ಯುವತಿಯ ಭಾವಚಿತ್ರವನ್ನು ಹಾಕಿ ಇದು ಸಚಿವರ ಮಗಳು ಎಂದು ಸಂದೇಶ ಕಳಿಸಲಾಗುತ್ತಿತ್ತು. ಈ ಬಗ್ಗೆ ಸಚಿವರು ದೂರು ನೀಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರ ಪರವಾಗಿ ಸಚಿವರ ವಿಶೇಷ ಅಧಿಕಾರಿ ಹಿದಾಯತ್‌­ವುಲ್ಲಾ ಅವರು ವಿಧಾನ­ಸೌಧ ಠಾಣೆಗೆ ದೂರು ನೀಡಿದ್ದಾರೆ. ಫೋಟೋಗಳನ್ನು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. [ಖಾದರ್ ನಿಂದಿಸಿದ ಸ್ವಾಮೀಜಿ ಮೇಲೆ ಕೇಸ್]

UT Khader

ಕೆಲವು ದಿನಗಳಿಂದ ವಾಟ್ಸ್ ಅಪ್‌ನಲ್ಲಿ ಮೈ ತುಂಬಾ ಚಿನ್ನಾಭರಣ ಧರಿಸಿರುವ ಯುವತಿಯ ಭಾವಚಿತ್ರ ಹರಿದಾಡುತ್ತಿತ್ತು. ಈ ಚಿತ್ರ ಯುಟಿ ಖಾದರ್ ಮಗಳದ್ದು ಎಂಬ ಸಂದೇಶ ಕಳಿಸಲಾಗುತ್ತಿತ್ತು. ಈ ಬಗ್ಗೆ ಸಚಿವರು ದೂರು ನೀಡಿದ್ದಾರೆ. [ಯುಟಿ ಖಾದರ್ ಮಾನವೀಯತೆಗೆ ಸಲಾಂ]

ತಮ್ಮ ಮಗಳ ಭಾವಚಿತ್ರವೆಂದು ಯುವತಿಯ ಫೋಟೋವನ್ನು ಹಾಕಿ ಅವಮಾನ ಮಾಡಲಾಗುತ್ತಿದೆ. ಸಂದೇಶಗಳನ್ನು ಕಳುಹಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಖಾದರ್ ವಿಧಾನಸೌಧ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ. ಅಂದಹಾಗೆ ಸಚಿವ ಖಾದರ್ ಅವರ ಮಗಳಿಗೆ ಕೇವಲ 12 ವರ್ಷ. ಆಕೆ ಕೇರಳದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಹಾಸ್ಟೆಲ್‌ನಲ್ಲಿದ್ದಾಳೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]

English summary
An case has been registered in Vidhana Soudha police station Bengaluru over a fake message in Whats App targeting Health Minister U.T.Khadar. Whats App messages were being circulated showing Khadar’s daughter as recently married.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X