ಬಿಬಿಸಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23: ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಮ್ಮ ಸಾಲುಮರದ ತಿಮ್ಮಕ್ಕ ಅವರ ಹೆಸರು ಸೇರ್ಪಡೆಯಾಗಿದೆ. ತಿಮ್ಮಕ್ಕ ಅವರನ್ನು 'ವೃಕ್ಷಗಳ ಮಾತೆ' ಎಂದು ಬಣ್ಣಿಸಲಾಗಿದೆ.

105ವರ್ಷ ವಯಸ್ಸಿನ ತಿಮ್ಮಕ್ಕ ಅವರು ಕಳೆದ 80 ವರ್ಷಗಳಲ್ಲಿ 8 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ತನಗೆ ಮಕ್ಕಳಾಗಲಿಲ್ಲ ಎಂಬ ಕೊರಗನ್ನು ಮರಗಳನ್ನು ಬೆಳೆಸುವ ಮೂಲಕ ನೀಗಿಸಿಕೊಂಡಿದ್ದಾರೆ. ಅವರ ಪರಿಸರ ಕಾಳಜಿ ಅನನ್ಯ, ಅನುಕರಣೀಯ ಎಂದು ಬಣ್ಣಿಸಲಾಗಿದೆ. [ನಮ್ಮ ವೃಕ್ಷ ಮಹಿಳೆ, ನಮ್ಮ ಹೆಮ್ಮೆ]

Saalumarada Thimmakka in BBC's 100 Women list

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಹುಳಿಕಲ್ಲು ಗ್ರಾಮದವರಾದ ತಿಮ್ಮಕ್ಕ ಅವರು ತಮ್ಮ ಪತಿ ಚಿಕ್ಕಯ್ಯ ಅವರ ಜತೆಗೂಡಿ ಗ್ರಾಮದ ಹೆದ್ದಾರಿಯಲ್ಲಿ 4 ಕಿಲೋಮೀಟರ್ ಅಂತರದಲ್ಲಿ ಒಟ್ಟು 284 ಆಲದ (ಸಾಲು ಮರಗಳು)ಮರಗಳನ್ನು ಬೆಳೆಸಿದವರು. ಈಗ ಇದರ ನಿರ್ವಹಣೆ ಸರ್ಕಾರವೇ ವಹಿಸಿಕೊಂಡಿದೆ. [

ಭಾರತದಿಂದ ನಟಿ ಸನ್ನಿ ಲಿಯೋನ್, ಮಹಾರಾಷ್ಟ್ರದ ಗೌರಿ ಚಿಂದಾರ್ಕರ್, ನೇಹಾ ಸಿಂಗ್, ತಮಿಳುನಾಡಿನ 'ಟ್ರ್ಯಾಕ್ಟರ್ ಕ್ವೀನ್ ಆಫ್ ಇಂಡಿಯಾ' ಮಲ್ಲಿಕಾ ಶ್ರೀನಿವಾಸ್ ಮುಂತಾದವರು ಬಿಬಿಸಿಯ 2016ರ ಪ್ರಭಾವಿ ಮಹಿಳೆಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

English summary
Environmentalist Saalumarada Thimmakka, who has planted and tended to 400-odd banyan trees along a 4km stretch between Hulikar and Kudur, has made it to the BBC's 100 Women 2016 list.
Please Wait while comments are loading...