ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸಬೆಳಕು ಯೋಜನೆಯಡಿ 100 ರು ಗೆ ಎಲ್ ಇಡಿ ಬಲ್ಬ್!

By Mahesh
|
Google Oneindia Kannada News

ಬೆಂಗಳೂರು, ಫೆ.19: ಎನರ್ಜಿ ಎಫೀಶಿಯನ್ಸಿ ಸರ್ವೀಸಸ್ ಲಿಮಿಟೆಡ್(EESL) ಸಂಸ್ಥೆಯು ಕೇಂದ್ರ ಸರ್ಕಾರದ ಆಡಳಿತ ಹೊಂದಿರುವ ಸಾರ್ವಜನಿಕ ಇಂಧನ ಸೇವಾ ಸಂಸ್ಥೆಯಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಡಿಸೆಂಬರ್ 2015ರಿಂದ ಯಶಸ್ವಿಯಾಗಿ ಹೊಸಬೆಳಕು ಯೋಜನೆಯನ್ನು ಮುನ್ನಡೆಸುತ್ತಿದೆ. ಎಲ್ ಇಡಿ ಬೆಲೆ ವ್ಯತ್ಯಾಸದ ಬಗ್ಗೆ ಸ್ಪಷ್ಟನೆ ನೀಡಿದೆ.

ಸಂಸ್ಥೆಯ ಮುಂದಾಳತ್ವದೊಂದಿಗೆ ಈ ವರೆಗೆ ಸುಮಾರು 23ಲಕ್ಷ ಎಲ್‍ಇಡಿ ಬಲ್ಬ್ ಗಳು ಮಾರಾಟವಾಗಿದ್ದು, ರಾಜ್ಯದ ಜನರು ತಮ್ಮ ಮನೆ ಶಕ್ತಿಯ ಉಳಿತಾಯ ಮಾಡಲು ಅಗತ್ಯ ಸಹಕಾರ ನೀಡುತ್ತಿದ್ದಾರೆ.[ಎಲ್ ಇಡಿ ಬಲ್ಬ್ ಬಳಕೆಯಿಂದ ಒದಗುವ 9 ಅನುಕೂಲಗಳು]

ಕೆಲವು ಮಾಧ್ಯಮಗಳಲ್ಲಿ ಹೊಸಬೆಳಕು ಯೋಜನೆಯ ಎಲ್‍ಇಡಿ ಬಲ್ಬ್ ಗಳ ದರಗಳ ಬಗ್ಗೆ ವರದಿ ಪ್ರಕಟವಾಗಿದೆ. ವರದಿಗಳ ಪ್ರಕಾರ ಸಂಸ್ಥೆ ಬಿಪಿಎಲ್ ವಿಭಾಗದವರಿಗೆ ಹೆಚ್ಚಿನ ಬೆಲೆಗೆ ಬಲ್ಬ್ ಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಜನರ ಆದಾಯದ ವಿಭಾಗಗಳಿಗೆ ಅನುಗುಣವಾಗಿ ಬಲ್ಬ್ ಗಳ ದರದಲ್ಲಿ ವ್ಯತ್ಯಾಸವಾಗುವುದಿಲ್ಲ. ಎಲ್ಲಾ ವಿಭಾಗದ ಜನರಿಗೆ ಒಂದೇ ದರ ಅನ್ವಯವಾಗುತ್ತದೆ. 9ವ್ಯಾಟ್ ಗಳ ಎಲ್‍ಇಡಿ ಬಲ್ಬ್ 100ರೂ.ಗಳಿಗೆ ಗ್ರಾಹಕರಿಗೆ ನೀಡಲಾಗುತ್ತದೆ.[ಬೆಂಗಳೂರಲ್ಲಿ ಎಲ್ ಇಡಿ ಬಲ್ಬ್ ಎಲ್ಲೆಲ್ಲಿ ಸಿಗುತ್ತೆ?]

ಇದಲ್ಲದೆ ಸಾಮಾಜಿಕ ತಾಣಗಳಲ್ಲಿ ಹೊಸಬೆಳಕು ಯೋಜನೆಯಲ್ಲಿ ನೀಡುತ್ತಿರುವ ಬಲ್ಬ್ ಗಳ ಮೇಲೆ ಮಾರಾಟಕ್ಕಾಗಿ ಅಲ್ಲ ಎಂದು ನಮೂದಿಸಲಾಗಿರುತ್ತದೆ. ಹೀಗಾಗಿ ಇಇಎಸ್ ನಿಂದ ಬಲ್ಬ್ ಗಳನ್ನು ಪಡೆಯುವುದು ಸೂಕ್ತವಲ್ಲ ಎಂದು ಹೇಳಲಾಗುತ್ತಿದೆ.

ಅಕ್ರಮವಾಗಿ ಬಲ್ಬ್ ಮಾರಾಟ ಕಂಡು ಬಂದಲ್ಲಿ ಶಿಸ್ತು ಕ್ರಮ

ಅಕ್ರಮವಾಗಿ ಬಲ್ಬ್ ಮಾರಾಟ ಕಂಡು ಬಂದಲ್ಲಿ ಶಿಸ್ತು ಕ್ರಮ

ಇಲ್ಲಿ ಮಾರಾಟಕ್ಕಾಗಿ ಅಲ್ಲ ಎಂಬುದು ಎಲ್‍ಇಡಿ ಬಲ್ಬ್ ಗಳನ್ನು ಲಾಭದಾಯಕವಾಗಿ ಮಾರಾಟ ಮಾಡುವ ಹಕ್ಕನ್ನು ಬಿಟ್ಟುಬಿಡಲಾಗಿದೆ ಎಂಬ ಸಂದೇಶವಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಲು ಇಚ್ಚಿಸುತ್ತದೆ. ಈ ಬಲ್ಬ್ ಗಳು ಯೋಜನೆಗಾಗಿಯೇ ಇರುವ ಕೌಂಟಟ್ ಗಳಲ್ಲಿ ಮಾತ್ರ ಲಭ್ಯವಿದ್ದು, ಇನ್ನಿತರ ಸ್ಥಳಗಳಲ್ಲಿ ಲಭಿಸುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಬಲ್ಬ್ ಮಾರಾಟ ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಸುಮಾರು 30 ಲಕ್ಷ ರೂ.ಗಳಷ್ಟು ಉಳಿತಾಯ

ಸುಮಾರು 30 ಲಕ್ಷ ರೂ.ಗಳಷ್ಟು ಉಳಿತಾಯ

ವಿದ್ಯುತ್ ಕಡಿಮೆ ಬಳಕೆ: ಹೊಸಬೆಳಕು ಯೋಜನೆಯು ಡಿಸೆಂಬರ್ 14ರಂದು ಕರ್ನಾಟಕದಲ್ಲಿ ಆರಂಭವಾಗಿದ್ದು, 2 ತಿಂಗಳಲ್ಲಿ 23 ಲಕ್ಷ ಬಲ್ಬ್ ಗಳು ಗ್ರಾಹಕರ ಕೈಸೇರಿದ್ದು, ಪ್ರತಿ ದಿನದಕ್ಕೆ ಸುಮಾರು 30 ಲಕ್ಷ ರೂ.ಗಳಷ್ಟು ಉಳಿತಾಯವಾಗುತ್ತಿದ್ದು, ಸುಮಾರು 67.5ಮೆಗಾವ್ಯಾಟ್ ನಷ್ಟು ವಿದ್ಯುತ್ ಕಡಿಮೆ ಬಳಕೆಯಾಗುತ್ತಿದೆ. ಪರಿಸರಕ್ಕೆ ಈ ಯೋಜನೆಯಿಂದ ಸುಮಾರು 633ಟನ್ ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ಸೇರುವುದು ಕಡಿಮೆಯಾಗಿದ್ದು, ಪ್ರತಿದಿನಕ್ಕೆ 7ಲಕ್ಷ ಮೆಗಾವ್ಯಾಟ್ ನಷ್ಟು ವಿದ್ಯುತ್ ಉಳಿತಾಯವಾಗುತ್ತಿದೆ.

ಅಗತ್ಯ ಪರೀಕ್ಷೆಗಳನ್ನು ಮಾಡಲಾಗುತ್ತದೆ

ಅಗತ್ಯ ಪರೀಕ್ಷೆಗಳನ್ನು ಮಾಡಲಾಗುತ್ತದೆ

ಬಲ್ಬ್ ಗಳನ್ನು ಗ್ರಾಹಕರಿಗೆ ನೀಡುವ ಮುನ್ನ ಅಗತ್ಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಬಿಐಸ್ ವಿಶೇಷತೆಗಳನ್ನು ಒಳಗೊಂಡಂತೆ ಐಎಸ್ 16102 (ವಿಭಾಗ-1) ಹಾಗೂ ವಿಭಾಗ 2: ಇತ್ಯಾದಿ ಅನೇಕ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದಲ್ಲದೆ ಸುರಕ್ಷತೆಯ ದೃಷ್ಟಿಯಿಂದಲೂ ಆಧುನಿಕ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿ, ಒಪ್ಪಿಗೆ ಪಡೆದ ಬಳಿಕ ಗ್ರಾಹಕರಿಗೆ ನೀಡಲಾಗುತ್ತದೆ. ಫೋಟೋಬಯೋಲಾಜಿಕಲ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಪರಿಸರ ಹಾಗೂ ಮನುಷ್ಯರಿಗೆ ಬಲ್ಬ್ ಗಳಿಂದ ಯಾವುದೇ ಹಾನಿ ಇಲ್ಲ

ಯೋಜನೆಯನ್ನು ಅನುಷ್ಠಾನ ಸಹಯೋಗ

ಯೋಜನೆಯನ್ನು ಅನುಷ್ಠಾನ ಸಹಯೋಗ

ಇಇಎಸ್‍ಎಲ್, ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ನಿಯಮಿತ, ವಿದ್ಯುತ್ ಹಣಕಾಸು ನಿಗಮ, ಗ್ರಾಮೀಣ ವಿದ್ಯುದೀಕರಣ ನಿಗಮ ಹಾಗೂ ಪವರ್ ಗ್ರಿಡ್ ಸಂಸ್ಥೆಗಳೊಂದಿಗೆ ಸಹಯೋಗ ಪಡೆದಿದ್ದು, ಇಂಧನ ಸಚಿವಾಲಯದ ಅಡಿಯಲ್ಲಿ ಇಂಧನ ಉಳಿತಾಯ ಯೋಜನೆಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದೆ.

ಇಇಎಸ್‍ಎಲ್ ವಿಶ್ವಾದ್ಯಂತ ಎಲ್‍ಇಡ್ ಲೈಟ್ ಗಳ ಮೂಲಕ ಇಂಧನ ಉಳಿತಾಯದ ಕೆಲಸಗಳನ್ನು ಅನುಷ್ಠಾನ ಮಾಡುತ್ತಿದೆ. ಸರ್ಕಾರ 77 ಕೋಟಿ ವಿದ್ಯುತ್ ಕಡಿಮೆ ಬಳಕೆಳನ್ನು ಮಾರ್ಚ್ 2019ರೊಳಗಾಗಿ ವಿತರಿಸುವ ಗುರಿ ಹೊಂದಿದೆ.

English summary
Energy Efficiency Services Limited (EESL), a Public Energy Services Company under the administration of Ministry of power clarifies that there is no differential pricing for different sets of consumers under Hosa Belaku, in Karnataka. Each 9W LED bulb is being distributed at Rs. 100 to all the consumers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X