ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಭೇಟಿ ನೆನಪಿನಾರ್ಥ ಮೈದೂರು ಶಾಲೆಗೆ 50ಲಕ್ಷ ಬಂಪರ್

By Vanitha
|
Google Oneindia Kannada News

ರಾಣೆಬೆನ್ನೂರು, ಅಕ್ಟೋಬರ್, 10 : ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮೈದೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ ನೆನಪಿಗಾಗಿ ರಾಜ್ಯ ಸರ್ಕಾರ 50ಲಕ್ಷ ರೂ ವಿಶೇಷ ಅನುದಾನ ಘೋಷಿಸಿದೆ. ಈ ಹಣದಿಂದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಲಾಗುವುದು ಅಕ್ಟೋಬರ್ 10ರ ಶನಿವಾರದಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾಹಿತಿ ನೀಡಿದರು.

ಮೈದೂರಿನ ಸುಮಾರು 90 ವಿದ್ಯಾರ್ಥಿಗಳೊಂದಿಗೆ ರಾಹುಲ್ ಸಂವಾದ ನಡೆಸಿದ್ದು, ಇವರೊಂದಿಗೆ ಮಾತನಾಡಲು ಸುಮಾರು ದಿನಗಳಿಂದ ಮಕ್ಕಳು ಇಂಗ್ಲೀಷ್ ತಯಾರಿ ನಡೆಸಿದ್ದರು. ಈ ಸಂದರ್ಭದಲ್ಲಿ ದೇಶದಲ್ಲಿ ನಾನು ಮಾತ್ರ ಅಲ್ಲ ನೀವು ಕೂಡ ಪ್ರಧಾನಿ ಆಗಬಹುದು, ಇದು ಪ್ರಜಾಪ್ರಭುತ್ವ ಎಂದು ರಾಹುಲ್ ಗಾಂಧಿ ಶಾಲಾ ಮಕ್ಕಳ ಪ್ರಶ್ನೆಗೆ ಉತ್ತರಿಸಿದರು.[ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕೊಡಲು ರಾಹುಲ್ ಗೆ ಮನವಿ]

Education minister Kimmane Rathnakar announced 50 lakh for myduru school development

ರಾಹುಲ್ ಗಾಂಧಿ ಅವರು ಬಿಸಿಯೂಟದ ಬಗ್ಗೆ ಪ್ರಶ್ನಿಸಿದ್ದು, ಕೆಲವು ನಿಮಿಷಗಳ ಕಾಲ ಮಕ್ಕಳ ಸಂತಸದಲ್ಲಿ ಭಾಗಿಯಾದರು. ಬಳಿಕ ಮಕ್ಕಳನ್ನೊಳಗೊಂಡಂತೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಲ್ಲಿ ಶಾಲೆ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು.

ರಾಹುಲ್ ಸಚಿವರಿಗೆ ಸುಮ್ಮನಿರಿ ಎಂದರು :

ಕಳಸಾ-ಬಂಡೂರಿ ಹೋರಾಟಗಾರರು ರಾಹುಲ್ ಅವರಿಗೆ ಮನವಿ ಸಲ್ಲಿಸಿ ಯೋಜನೆ ಬಗ್ಗೆ ವಿವರಿಸುತ್ತಿದ್ದರು. ಆ ಸಮಯದಲ್ಲಿ ಮಧ್ಯಪ್ರವೇಶಿಸಲು ಮುಂದಾದ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರಿಗೆ ಕೈ ಸನ್ನೆ ಮಾಡಿ ದೂರದಲ್ಲಿಯೇ ನಿಲ್ಲಲು ತಿಳಿಸಿದರು.

English summary
Education minister Kimmane Rathnakar announced 50lakh for Maiduru school development on Saturday 10th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X