ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಐಡಿ ಅಧಿಕಾರಿಗಳು ಜಾರ್ಜ್‌ಗೆ ಕೇಳಿದ ಪ್ರಶ್ನೆಗಳೇನು?

By Madhusoodhan
|
Google Oneindia Kannada News

ಬೆಂಗಳೂರು, ಆಗಸ್ಟ್, 27: ಡಿವೈಎಸ್ ಪಿ ಎಂಕೆ ಗಣಪತಿ ಆತ್ಮಹತ್ಯೆ ಸಂಬಂಧ ಸಿಐಡಿ ಅಧಿಕಾರಿಗಳು ಮಾಜಿ ಸಚಿವ ಕೆ ಜೆ ಜಾರ್ಜ್ ಅವರನ್ನು ವಿಚಾರಣೆ ಮಾಡಿದೆ. ಎಡಿಜಿಪಿ ಪ್ರತಾಪ್ ರೆಡ್ಡಿ, ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಶ್ರೀಧರ್ ನೇತೃತ್ವದ ತಂಡ ಶುಕ್ರವಾರ ಜಾರ್ಜ್ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದೆ.

ಕೆ.ಜೆ.ಜಾಜ್‍೯ ಅವರನ್ನು ಶುಕ್ರವಾರ ಸತತ 3 ಗ೦ಟೆ ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೋಟ್‍೯ ಆದೇಶದ೦ತೆ ಕೆ.ಜೆ.ಜಾಜ್‍೯, ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎ೦.ಪ್ರಸಾದ್, ಪ್ರಣವ್ ಮೊಹ೦ತಿ ವಿರುದ್ಧ ಎಫ್ಐಆರ್ ದಾಖಲಿಸಿ ಹೊಸದಾಗಿ ತನಿಖೆ ಕೈಗೊ೦ಡಿರುವ ಸಿಐಡಿ ಪೊಲೀಸರು, ವಿಚಾರಣೆಗೆ ಹಾಜರಾಗುವ೦ತೆ ಜಾರ್ಜ್ ಗೆ ನೋಟಿಸ್ ನೀಡಿದ್ದರು.[ಗಣಪತಿ ಆತ್ಮಹತ್ಯೆ : ನ್ಯಾಯಾಂಗ ತನಿಖೆಗೆ ವ್ಯವಸ್ಥೆಗಳೇ ಇಲ್ಲ!]

ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈ ಎಸ್ ಪಿ ಗಣಪತಿ ತಮ್ಮಸಾವಿಗೂ ಮುನ್ನ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಜಾರ್ಜ್ ಅವರ ಹೆಸರು ಉಲ್ಲೇಖ ಮಾಡಿದ್ದರು. ಇದಾದ ಮೇಲೆ ರಾಜ್ಯದಲ್ಲಿ ಪ್ರತಿಭಟನೆಗಳು ನಡೆದಿದ್ದವು. [ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]

ಅಂತಿಮವಾಗಿ ನ್ಯಾಯಾಲಯದ ಆದೇಶದ ಕಾರಣಕ್ಕೆ ಜಾರ್ಜ್ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಬಂದಿದ್ದರು.

ಚರ್ಚ್ ಗಲಾಟೆ ಮರು ವಿಚಾರಣೆಗೆ ಏಕೆ?

ಚರ್ಚ್ ಗಲಾಟೆ ಮರು ವಿಚಾರಣೆಗೆ ಏಕೆ?

5 ವಷ೯ಗಳ ಹಿ೦ದೆ ಮಂಗಳೂರಿನಲ್ಲಿ ವಿವಾದ ಎಬ್ಬಿಸಿದ್ದ ಚರ್ಚ್ ಗಲಾಟೆಯನ್ನು 2013ರಲ್ಲಿ ಗೃಹ ಸಚಿವರಾಗಿದ್ದ ವೇಳೆ ಯಾಕೆ ಮರು ತನಿಖೆಗೆ ಆದೇಶ ನೀಡಿದಿರು?

ಮಂಗಳೂರಿಗೆ ಎಷ್ಟು ಸಾರಿ ಭೇಟು ನೀಡಿದ್ರಿ?

ಮಂಗಳೂರಿಗೆ ಎಷ್ಟು ಸಾರಿ ಭೇಟು ನೀಡಿದ್ರಿ?

ಚರ್ಚ್ ಗಲಾಟೆ ಸ೦ಬ೦ಧ ಮ೦ಗಳೂರಿಗೆ ಎಷ್ಟು ಬಾರಿ ಭೇಟಿ ಕೊಟ್ಟಿದ್ದೀರಾ? ಕ್ಯಾಥೋಲಿಕ್ ಕ್ರೈಸ್ತರ ಸಭೆಗೆಯಲ್ಲಿಪಾಲ್ಗೊಂಡಿದ್ದರೆ ಅದಕ್ಕೆ ಕಾರಣ ಏನು?

150 ಪ್ರಶ್ನೆ

150 ಪ್ರಶ್ನೆ

2008 ರಿ೦ದ 2016ವರೆಗೆ ಪೊಲೀಸ್ ಇಲಾಖೆಯಲ್ಲಿ ಬದಲಾವಣೆಗೆ ಸಂಬಂಧಿಸಿ ಸಿಐಡಿ ಅದಿಕಾರಿಗಳು 150 ಕ್ಕೂ ಅಧಿಕ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ.

3 ಗಂಟೆ ವಿಚಾರಣೆ

3 ಗಂಟೆ ವಿಚಾರಣೆ

ಶುಕ್ರವಾರ ಮಧ್ಯಾಹ್ನ ಜಾರ್ಜ್ ಅವರನ್ನು ಮೂರು ಗಂಟೆ ಕಾಲ ವಿಚಾರಣೆ ನಡೆಸಲಾಗಿದೆ. ವಿಚಾರಣೆಗೆ ಅಗತ್ಯ ಎಂದಾದರೆ ಮತ್ತೆ ಕರೆಸಿಕೊಳ್ಳುವುದಾಗಿ ಸಿಐಡಿ ಅದಿಕಾರಿಗಳು ತಿಳಿಸಿದ್ದಾರೆ.

English summary
CID investigators reportedly questioned Congress leader and former minister KJ George on Friday over Mangaluru DySP Ganapathy's suicide case. CID DySP Shridhar questioned George at the CID headquarters in Bengaluru in connection with Ganapathy's suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X