{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/karnataka/dr-siddalingaiah-president-81st-akhila-bharata-kannada-sahitya-sammelana-090152.html" }, "headline": "ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನಕ್ಕೆ ಕವಿ ಸಿದ್ದಲಿಂಗಯ್ಯ ಅಧ್ಯಕ್ಷ", "url":"http://kannada.oneindia.com/news/karnataka/dr-siddalingaiah-president-81st-akhila-bharata-kannada-sahitya-sammelana-090152.html", "image": { "@type": "ImageObject", "url": "http://kannada.oneindia.com/img/1200x60x675/2014/12/19-1418979407-siddalingaiah-kss600.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/12/19-1418979407-siddalingaiah-kss600.jpg", "datePublished": "2014-12-19T14:28:57+05:30", "dateModified": "2014-12-19T14:39:52+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Karnataka", "description": "Dr Siddalingaiah chosen as the 81st Akhila Bharata Kannada Sahitya Sammelana to be held at Shravanabelagola, Hassan said Kannada Sahitya Parishat president Pundalika Halambi.", "keywords": "Dr Siddalingaiah president 81st Akhila Bharata Kannada Sahitya Sammelana, ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನಕ್ಕೆ ಕವಿ ಸಿದ್ದಲಿಂಗಯ್ಯ ಅಧ್ಯಕ್ಷ", "articleBody":"ಬೆಂಗಳೂರು, ಡಿ.19: ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರನ್ನು 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಶುಕ್ರವಾರ ಪ್ರಕಟಿಸಿದ್ದಾರೆ.ಸಾಹಿತಿ ದೇವನೂರು ಮಹಾದೇವ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಲು ನಿರಾಕರಿಸಿದ ಬೆನ್ನಲ್ಲೇ ಡಾ. ಸಿದ್ದಲಿಂಗಯ್ಯ ಅವರನ್ನು ಕಸಾಪ ಆಯ್ಕೆ ಮಾಡಿತ್ತು. ಶುಕ್ರವಾರ ನಡೆದ ಗೌಪ್ಯ ಮತದಾನದಲ್ಲಿ ಸಿದ್ದಲಿಂಗಯ್ಯ ಅವರ ಆಯ್ಕೆಗೆ ಎಲ್ಲಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು. ಅಧ್ಯಕ್ಷ ಸ್ಥಾನಕ್ಕೆ ಬರಗೂರು ರಾಮಚಂದ್ರಪ್ಪ, ಹಂಪ ನಾಗರಾಜಯ್ಯ, ಪಿ.ವಿ.ವೆಂಕಟಾಚಲ ಶಾಸ್ತ್ರೀ ಅವರ ಹೆಸರುಗಳು ಕೇಳಿಬಂದಿತ್ತು.ಚಂದ್ರಗಿರಿ ಬೆಟ್ಟದ ಹಿಂಭಾಗದಲ್ಲಿನ 24 ಎಕರೆ ವಿಶಾಲ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮಗಳು ಫೆ.1,2,3ರಂದು ನಡೆಯಲಿವೆ. ಜೈನ ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಸೇರಿದಂತೆ ಪ್ರಮುಖರು ಸಮ್ಮೇಳನದ ಸಿದ್ದತೆಯ ಪರಿಶೀಲನೆ ನಡೆಸಿದ್ದಾರೆ.ಮೈಸೂರು, ಕಲಬುರಗಿ, ಬೀದರ್& zwnj , ಶಿವಮೊಗ್ಗ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ತಮ್ಮ ಜಿಲ್ಲೆಯಲ್ಲಿ ಸಮ್ಮೇಳನ ಆಯೋಜಿಸು& shy ವಂತೆ ಸಭೆಯಲ್ಲಿ ಮನವಿ ಮಾಡಿದರು. ಈ ಕುರಿತು ಹಲವು ಸುತ್ತಿನ ಚರ್ಚೆ ನಡೆದ ಬಳಿಕ ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.ಶ್ರವಣಬೆಳಗೊಳದಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲಿತ ಕವಿ ಸಿದ್ದಲಿಂಗಯ್ಯ ಪರಿಚಯ: ದೇವಯ್ಯ ಹಾಗೂ ವೆಂಕಮ್ಮ ದಂಪತಿಯ ಪುತ್ರರಾಗಿ ಸಿದ್ದಲಿಂಗಯ್ಯ ಅವರು 1954ರಂದು ಬೆಂಗಳೂರು ಗ್ರಾಮಾಂತರಕ್ಕೆ ಸೇರಿರುವ ಮಾಗಡಿಯಲ್ಲಿ ಜನಿಸಿದರು.* 1976 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವಿ ಪಡೆದುಕೊಂಡಿದ್ದಾರೆ. 1981ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಗ್ರಾಮದೇವತೆಗಳು ಎಂಬ ವಿಷಯದ ಮೇಲೆ ಪಿಎಚ್ ಡಿ ಪದವಿ ಪಡೆದುಕೊಂಡರು. 1992ರಲ್ಲಿ ಪ್ರಾಧ್ಯಾಪಕರಾದರು.* 2001-2003ರ ಅವಧಿಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾಗಿದ್ದರು.ಕವನ ಸಂಕಲನ: ಹೊಳೆಮಾದಿಗರ ಹಾಡು(1975), ಸಾವಿರಾರು ನಾಡಿಗಳು(1979), ಕಪ್ಪು ಕಾಡಿನ ಹಾಡು(1982), ಆಯ್ದ ಕವಿತೆಗಳು(1997), ಮೆರವಣಿಗೆ(2000), ನನ್ನ ಜನಗಳು ಮತ್ತು ಇತರ ಕವಿತೆಗಳು(2005)ನಾಟಕಗಳು: ಪಂಚಮ ಮತ್ತು ನೆಲಸಮ್ಮ(1980),ಏಕಲವ್ಯ(1986)ವಿಮರ್ಶಾ ಗ್ರಂಥಗಳು: ಹಕ್ಕಿ ನೋಟ(1991), ಜನಸಂಸ್ಕೃತಿ(2007)ಜೀವನ ಚರಿತ್ರೆ: ಊರುಕೇರಿ(1997), ಊರುಕೇರಿ ಭಾಗ 2(2006)ಪ್ರಬಂಧ: ಅವತಾರಗಳು(1981) (ಮಾಹಿತಿ ಕೃಪೆ: ಕನ್ನಡಕವಿ, ಕಾಂ)" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನಕ್ಕೆ ಕವಿ ಸಿದ್ದಲಿಂಗಯ್ಯ ಅಧ್ಯಕ್ಷ

By Mahesh
|
Google Oneindia Kannada News

ಬೆಂಗಳೂರು, ಡಿ.19: ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರನ್ನು 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಶುಕ್ರವಾರ ಪ್ರಕಟಿಸಿದ್ದಾರೆ.

ಸಾಹಿತಿ ದೇವನೂರು ಮಹಾದೇವ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಲು ನಿರಾಕರಿಸಿದ ಬೆನ್ನಲ್ಲೇ ಡಾ. ಸಿದ್ದಲಿಂಗಯ್ಯ ಅವರನ್ನು ಕಸಾಪ ಆಯ್ಕೆ ಮಾಡಿತ್ತು. ಶುಕ್ರವಾರ ನಡೆದ ಗೌಪ್ಯ ಮತದಾನದಲ್ಲಿ ಸಿದ್ದಲಿಂಗಯ್ಯ ಅವರ ಆಯ್ಕೆಗೆ ಎಲ್ಲಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು. ಅಧ್ಯಕ್ಷ ಸ್ಥಾನಕ್ಕೆ ಬರಗೂರು ರಾಮಚಂದ್ರಪ್ಪ, ಹಂಪ ನಾಗರಾಜಯ್ಯ, ಪಿ.ವಿ.ವೆಂಕಟಾಚಲ ಶಾಸ್ತ್ರೀ ಅವರ ಹೆಸರುಗಳು ಕೇಳಿಬಂದಿತ್ತು.

ಚಂದ್ರಗಿರಿ ಬೆಟ್ಟದ ಹಿಂಭಾಗದಲ್ಲಿನ 24 ಎಕರೆ ವಿಶಾಲ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮಗಳು ಫೆ.1,2,3ರಂದು ನಡೆಯಲಿವೆ. ಜೈನ ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಸೇರಿದಂತೆ ಪ್ರಮುಖರು ಸಮ್ಮೇಳನದ ಸಿದ್ದತೆಯ ಪರಿಶೀಲನೆ ನಡೆಸಿದ್ದಾರೆ.

ಮೈಸೂರು, ಕಲಬುರಗಿ, ಬೀದರ್‌, ಶಿವಮೊಗ್ಗ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ತಮ್ಮ ಜಿಲ್ಲೆಯಲ್ಲಿ ಸಮ್ಮೇಳನ ಆಯೋಜಿಸು­ವಂತೆ ಸಭೆಯಲ್ಲಿ ಮನವಿ ಮಾಡಿದರು. ಈ ಕುರಿತು ಹಲವು ಸುತ್ತಿನ ಚರ್ಚೆ ನಡೆದ ಬಳಿಕ ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.[ಶ್ರವಣಬೆಳಗೊಳದಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನ]

Dr Siddalingaiah president 81st Akhila Bharata Kannada Sahitya Sammelana

ದಲಿತ ಕವಿ ಸಿದ್ದಲಿಂಗಯ್ಯ ಪರಿಚಯ: ದೇವಯ್ಯ ಹಾಗೂ ವೆಂಕಮ್ಮ ದಂಪತಿಯ ಪುತ್ರರಾಗಿ ಸಿದ್ದಲಿಂಗಯ್ಯ ಅವರು 1954ರಂದು ಬೆಂಗಳೂರು ಗ್ರಾಮಾಂತರಕ್ಕೆ ಸೇರಿರುವ ಮಾಗಡಿಯಲ್ಲಿ ಜನಿಸಿದರು.

* 1976 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವಿ ಪಡೆದುಕೊಂಡಿದ್ದಾರೆ. 1981ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ 'ಗ್ರಾಮದೇವತೆಗಳು' ಎಂಬ ವಿಷಯದ ಮೇಲೆ ಪಿಎಚ್ ಡಿ ಪದವಿ ಪಡೆದುಕೊಂಡರು. 1992ರಲ್ಲಿ ಪ್ರಾಧ್ಯಾಪಕರಾದರು.

* 2001-2003ರ ಅವಧಿಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾಗಿದ್ದರು.

ಕವನ ಸಂಕಲನ: ಹೊಳೆಮಾದಿಗರ ಹಾಡು(1975), ಸಾವಿರಾರು ನಾಡಿಗಳು(1979), ಕಪ್ಪು ಕಾಡಿನ ಹಾಡು(1982), ಆಯ್ದ ಕವಿತೆಗಳು(1997), ಮೆರವಣಿಗೆ(2000), ನನ್ನ ಜನಗಳು ಮತ್ತು ಇತರ ಕವಿತೆಗಳು(2005)
ನಾಟಕಗಳು: ಪಂಚಮ ಮತ್ತು ನೆಲಸಮ್ಮ(1980),ಏಕಲವ್ಯ(1986)
ವಿಮರ್ಶಾ ಗ್ರಂಥಗಳು: ಹಕ್ಕಿ ನೋಟ(1991), ಜನಸಂಸ್ಕೃತಿ(2007)
ಜೀವನ ಚರಿತ್ರೆ: ಊರುಕೇರಿ(1997), ಊರುಕೇರಿ ಭಾಗ 2(2006)
ಪ್ರಬಂಧ: ಅವತಾರಗಳು(1981) (ಮಾಹಿತಿ ಕೃಪೆ: ಕನ್ನಡಕವಿ, ಕಾಂ)

English summary
Dr Siddalingaiah chosen as the 81st Akhila Bharata Kannada Sahitya Sammelana to be held at Shravanabelagola, Hassan said Kannada Sahitya Parishat president Pundalika Halambi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X