ಜರ್ಮನಿಯ ವಿದ್ಯುತ್ ಸ್ಥಾವರಕ್ಕೆ ಡಿಕೆ ಶಿವಕುಮಾರ್ ಭೇಟಿ

ಜರ್ಮನಿ, ಆಸ್ಟ್ರಿಯಾ ಹಾಗೂ ಸ್ವಿಟ್ಜರ್ಲೆಂಡ್ ಪ್ರವಾಸ ನಿರತ ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಎಲ್ ತಂಡ ಅನೇಕ ವಿದ್ಯುತ್ ಸ್ಥಾವರಗಳಿಗೆ ಭೇಟಿ ನೀಡಿದ್ದಾರೆ.

By:
Subscribe to Oneindia Kannada

ಬರ್ಲಿನ್, ನವೆಂಬರ್ 03: ಜರ್ಮನಿ, ಆಸ್ಟ್ರಿಯಾ ಹಾಗೂ ಸ್ವಿಟ್ಜರ್ಲೆಂಡ್ ಪ್ರವಾಸ ನಿರತ ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಎಲ್ ತಂಡ ಅನೇಕ ವಿದ್ಯುತ್ ಸ್ಥಾವರಗಳಿಗೆ ಭೇಟಿ ನೀಡಿದ್ದಾರೆ.

ಆಸ್ಟ್ರಿಯಾದ ಸಾಲ್ಜ್ ಬರ್ಗ್ ನಲ್ಲಿರುವ 'ಪಂಪ್ಡ್ ಸ್ಟೋರೇಜ್' ಆಧಾರಿತ ವಿದ್ಯುತ್ ಘಟಕಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಪವರ್ ಕಾರ್ಪೊರೇಷನ್(ಕೆಪಿಸಿಎಲ್) ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ.

ಈ ವಿದ್ಯುತ್ ಸ್ಥಾವರದಲ್ಲಿ 106 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು ಈ ಪೈಕಿ 70 ಮೆ.ವ್ಯಾ. ರಷ್ಟು ವಿದ್ಯುತ್ತನ್ನು 'ಪಂಪ್ಡ್ ಸ್ಟೋರೇಜ್ ತಂತ್ರಜ್ಞಾನ ಬಳಕೆಯಿಂದ ಉತ್ಪಾದಿಸಲಾಗುತ್ತಿದೆ. ಮಿಕ್ಕ 36 ಮೆವ್ಯಾ ವಿದ್ಯುತ್ ವಿದ್ಯುತ್ ಉತ್ಪಾದನೆಗೆ ಸಾಮಾನ್ಯ ಮಾದರಿಯನ್ನು ಬಳಸಲಾಗುತ್ತಿದೆ. ಚಿತ್ರಕೃಪೆ: ಡಿಕೆ ಶಿವಕುಮಾರ್ ಟ್ವಿಟ್ಟರ್ ಐಡಿ

ಭೂಗತ ವಿದ್ಯುತ್ ಸ್ಥಾವರ

ಹಿಂಟರ್ ಮೂಹ್ (Hinter Muhr) ನಲ್ಲಿರುವ ಭೂಗತ ವಿದ್ಯುತ್ ಸ್ಥಾವರ, ಸೆಂಟ್ರಲ್ ಆಲ್ಫ್ಸ್ ಪರ್ವತ ಶ್ರೇಣಿಯಲ್ಲಿರುವ ಈ ವಿದ್ಯುತ್ ಆಗರಕ್ಕೆ ಭೇಟಿ ನೀಡಿ ಅಲ್ಲಿನ ತಂತ್ರಜ್ಞಾನ ಬಳಕೆ ಮಾಹಿತಿ ಪಡೆದುಕೊಂಡಿದ್ದಾರೆ.

ಲೋಡ್ ಡಿಸ್ ಪ್ಯಾಚ್ ಸೆಂಟರ್‌

ಈ ಘಟಕಕ್ಕೆ ಹೊಂದಿಕೊಂಡಿರುವ ದನುಬೆ ನದಿಯ ಆಸುಪಾಸಿನಲ್ಲಿ ಸ್ಥಾಪಿಸಲಾಗಿರುವ ನೂರಕ್ಕೂ ಹೆಚ್ಚು ಸ್ಥಾವರಗಳಿಂದ ಬರುವ ವಿದ್ಯುತ್ ಪ್ರವಾಹ ನಿಯಂತ್ರಿಸುವ ಲೋಡ್ ಡಿಸ್ ಪ್ಯಾಚ್ ಸೆಂಟರ್‌Load Dispatch Centre(LDC) ಗಳಿಗೆ ಡಿಕೆಶಿ ತಂಡ ಭೇಟಿ ನೀಡಿತು.

ಹಾರುಬೂದಿ ನಿರ್ವಹಣಾ ಕೇಂದ್ರಕ್ಕೆ ಭೇಟಿ

ಲೋಕಾ ಸೈಟ್(Lochasite) ಹಾರುಬೂದಿ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸಂಗ್ರಹಿಸಲಾಗಿರುವ ಹಾರುಬೂದಿ ಹಾಗೂ ಅದರ ನಿರ್ವಹಣೆ ಬಗ್ಗೆ ವಿಚಾರ ವಿನಿಮಯ ನಡೆಸಲಿದೆ.

ಮೂರು ರಾಷ್ಟ್ರಗಳಲ್ಲಿ ಅಧ್ಯಯನ ಪ್ರವಾಸ

ಪಂಪ್ಡ್ ಸ್ಟೋರೇಜ್ ತಂತ್ರಜ್ಞಾನ ಬಳಕೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗಿದೆ. ಆಸ್ಟ್ರಿಯಾದ ವಿದ್ಯುತ್ ಸ್ಥಾವರದಲ್ಲಿ 106 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು ಈ ಪೈಕಿ 70 ಮೆ.ವ್ಯಾ. ರಷ್ಟು ವಿದ್ಯುತ್ತನ್ನು 'ಪಂಪ್ಡ್ ಸ್ಟೋರೇಜ್ ತಂತ್ರಜ್ಞಾನ ಬಳಕೆಯಿಂದ ಉತ್ಪಾದಿಸಲಾಗುತ್ತಿದೆ. ಮಿಕ್ಕ 36 ಮೆವ್ಯಾ ವಿದ್ಯುತ್ ವಿದ್ಯುತ್ ಉತ್ಪಾದನೆಗೆ ಸಾಮಾನ್ಯ ಮಾದರಿಯನ್ನು ಬಳಸಲಾಗುತ್ತಿದೆ.

English summary
DK Shivakumar and a team of Karnataka Power Corporation Limited officials and engineers visited various power plants in Germany, Austria and Switzerland as part of a study tour.
Please Wait while comments are loading...