ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ರವಿ ಆತ್ಮಹತ್ಯೆ ಹಿಂದಿರುವ ಕಾರಣವೇನು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 05 : ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಆತ್ಮಹತ್ಯೆಗೆ ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಸಿಬಿಐ ಸಿದ್ಧಪಡಿಸಿದ ಅಂತಿಮ ವರದಿ ಸಿಬಿಐ ಕೇಂದ್ರ ಕಚೇರಿಯಲ್ಲಿ ಅಂತಿಮ ಅನುಮತಿಗಾಗಿ ಕಾಯುತ್ತಿದೆ.

ತನಿಖಾ ತಂಡ ಸಿದ್ಧಪಡಿಸಿದ ಅಂತಿಮ ವರದಿಯನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ಮುಂದುವರೆಸಬೇಕೆ? ಬೇಡವೇ? ಎಂದು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. [ಡಿಕೆ ರವಿಯದು ಆತ್ಮಹತ್ಯೆ]

dk ravi

ವೈಯಕ್ತಿಕ ಮತ್ತು ಹಣಕಾಸು ಕಾರಣಗಳಿಂದಾಗಿ ಡಿಕೆ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದೆ. ಹಣಕಾಸಿನ ವಿಚಾರದಲ್ಲಿ ಡಿಕೆ ರವಿ ಅವರನ್ನು ಅವರ ಸ್ನೇಹಿತರು ವಂಚಿಸಿದ್ದರು ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. [ಡಿಕೆ ರವಿ ಪ್ರಕರಣದ ಟೈಮ್ ಲೈನ್]

ಅನುಮತಿ ಬೇಕು : ನಿಯಮಗಳ ಪ್ರಕಾರ ಸಿಬಿಐ ತನಿಖಾ ತಂಡ ವರದಿ ಸಿದ್ಧಗೊಳಿಸಿದ ನಂತರ ಅದಕ್ಕೆ ಕೇಂದ್ರ ಕಚೇರಿಯ ಅನುಮತಿ ಬೇಕು. ದೆಹಲಿಯ ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳು ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆಯನ್ನು ಮುಂದುವರೆಸಬೇಕೆ? ಎಂದು ತಿರ್ಮಾನವನ್ನು ಕೈಗೊಳ್ಳುತ್ತಾರೆ. [ಡಿಕೆ ರವಿ ಆತ್ಮಹತ್ಯೆ ಹಿಂದೆ ಕ್ರಿಮಿನಲ್ ಸಂಚಿಲ್ಲ: ಸಿಬಿಐ]

ತನಿಖೆ ಮತ್ತು ವೈಜ್ಞಾನಿಕ ವರದಿಗಳ ಆಧಾರದ ಮೇಲೆ ಇದು ಆತ್ಮಹತ್ಯೆ ಪ್ರಕರಣ. ಈ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ಕೈವಾಡವಿಲ್ಲ ಎಂದು ಹೇಳಿರುವ ಸಿಬಿಐ ಯಾವುದೇ ವ್ಯಕ್ತಿಯ ವಿರುದ್ಧ ತನಿಖೆಗೆ ಶಿಫಾರಸು ಮಾಡುವುದಿಲ್ಲ ಎಂದು ವರದಿ ನೀಡಿದೆ.

ಮರಣೋತ್ತರ ಪರೀಕ್ಷೆ ವರದಿ ಉಸಿರುಗಟ್ಟಿ ರವಿ ಅವರು ಸಾವನ್ನಪ್ಪಿದ್ದಾರೆ ಎಂದು ಇತ್ತು. ರವಿಯವರ ದೇಹದ ಕೆಲ ಭಾಗಗಳನ್ನು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಎಲ್ಲಾ ವರದಿಗಳು ಇದು ಆತ್ಮಹತ್ಯೆ ಎಂದೇ ಹೇಳಿವೆ.

English summary
The CBI which probed the death of IAS officer, D.K.Ravi has cited several reasons that could have led up to his suicide. The report which was prepared is now pending before the headquarters in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X