ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ರವಿ ಸಾವು : ಚಾಲಕನ ಹೇಳಿಕೆಗೆ ಹೆಚ್ಚು ಮಹತ್ವ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏ. 17 : ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. ಡಿಕೆ ರವಿ ಕಾರು ಚಾಲಕ ಎಳಂಗೋವನ್‌ನನ್ನು ಮೊದಲು ಸಿಬಿಐ ವಿಚಾರಣೆಗೆ ಒಳಪಡಿಸಲಿದ್ದು, ಚಾಲಕನೇ ಪ್ರಕರಣದ ಪ್ರಮುಖ ಸಾಕ್ಷಿಯಾಗಲಿದ್ದಾನೆ.

ಡಿಕೆ ರವಿ ಅವರ ಸಾವಿಗೆ ಮುನ್ನ ಅವರನ್ನು ನೋಡಿದ್ದು ಚಾಲಕ ಎಳಂಗೋವನ್. ಆದ್ದರಿಂದ, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಚಾಲಕನ ವಿಚಾರಣೆಯಿಂದಲೇ ತನಿಖೆಯನ್ನು ಆರಂಭಿಸಿಲಿದೆ. ಕರ್ನಾಟಕ ಸರ್ಕಾರದದ ಅಧಿಸೂಚನೆ ಅನ್ವಯ ಸಿಬಿಐ ಗುರುವಾರ ಕೇಸ್ ದಾಖಲಿಸಿಕೊಂಡಿದೆ. [ಡಿಕೆ ರವಿ ಕೇಸ್ : ಪ್ರಮುಖರಿಗೆ ಸಿಬಿಐ ಸಮನ್ಸ್ ಭೀತಿ]

DK Ravi

ಮಾ.16ರಂದು ಡಿಕೆ ರವಿ ಅವರ ಶವ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಕರ್ನಾಟಕದ ಪೊಲೀಸರು ಪ್ರಾಥಮಿಕ ತನಿಖೆಯಿಂದ ಇದು ಆತ್ಮಹತ್ಯೆ ಎಂದು ಹೇಳಿದ್ದರು. ವೈಯಕ್ತಿಕ ಕಾರಣಗಳಿಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದರು. ಪ್ರತಿಪಕ್ಷ ಮತ್ತು ರಾಜ್ಯದ ಜನರ ಬೇಡಿಕೆಯಂತೆ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. [ಡಿಕೆ ರವಿ ಸಾವು : timeline]

ಚಾಲಕ ಉತ್ರರ ನೀಡಬೇಕಾದ ಪ್ರಶ್ನೆಗಳು : ಡಿಕೆ ರವಿ ಕಾರು ಚಾಲಕ ಎಳಂಗೋವನ್ ನೀಡುವ ಹೇಳಿಕೆ ಪ್ರಕರಣದ ತನಿಖೆಗೆ ಮಹತ್ವದ್ದಾಗಿದೆ. ರವಿ ಸಾವಿನ ತನಿಖೆ ನಡೆಸಿದ್ದ ಸಿಐಡಿ ಚಾಲಕನ ವಿಚಾರಣೆ ನಡೆಸಿತ್ತು. ಆಗ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆತ ಹೇಳಿಕೆ ನೀಡಿದ್ದ.

ಸಿಬಿಐ ಅಧಿಕಾರಿಗಳು ಎಳಂಗೋವನ್‌ನಿಂದ ಡಿಕೆ ರವಿ ಕೊನೆಯದಾಗಿ ಭೇಟಿ ಮಾಡಿದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ರವಿ ಅವರು ಕೊನೆಯ ಒಂದು ವಾರದಲ್ಲಿ ಎಲ್ಲಿಗೆ ತೆರಳಿದ್ದರು?, ಅವರನ್ನು ಯಾರು ಭೇಟಿ ಮಾಡಿದ್ದರು ಎಂಬ ಮಾಹಿತಿಗಳನ್ನು ಅಧಿಕಾರಿಗಳು ಸಂಗ್ರಹಿಸಲಿದ್ದಾರೆ.

ಕುಟುಂಬ, ಸ್ನೇಹಿತರ ವಿಚಾರಣೆ : ಚಾಲಕ ಎಂಳಗೋವನ್ ವಿಚಾರಣೆ ನಂತರ ಡಿಕೆ ರವಿ ಅವರ ಕುಟುಂಬ ಮತ್ತು ಸ್ನೇಹಿತರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಡಿಕೆ ರವಿ ಪತ್ನಿ, ಮಾವ ಮುಂತಾದವರು ಸಿಬಿಐ ವಿಚಾರಣೆ ಎದುರಿಸಬೇಕಾಗಿದೆ.

ಡಿಕೆ ರವಿ ಅವರ ಬೆದರಿಕೆ ಕರೆ ಬರುತ್ತಿತ್ತೇ?, ಅವರ ಖಾಸಗಿ ಜೀವನ ಹೇಗಿತ್ತು? ಮುಂತಾದ ವಿಚಾರಗಳ ಬಗ್ಗೆ ಅಧಿಕಾರಿಗಳು ವಿವರ ಸಂಗ್ರಹಿಸಲಿದ್ದಾರೆ. ಇದರ ಜೊತೆಗೆ ಡಿಕೆ ರವಿ ಕೊನೆಯ ಬಾರಿ ಕರೆ ಮಾಡಿ ಮಾತನಾಡಿದ ಐಎಎಸ್ ಅಧಿಕಾರಿಯ ವಿಚಾರಣೆ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಕೋಲಾರದಲ್ಲಿ ತನಿಖೆ : ಡಿಕೆ ರವಿ ಅವರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಕೋಲಾರದಲ್ಲಿಯೂ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಅದರಲ್ಲೂ ಮಾರಳು ಮಾಫಿಯಾದಿಂದ ಅವರಿಗೆ ಬೆದರಿಕೆ ಇತ್ತೇ? ಎಂಬ ಬಗ್ಗೆ ತನಿಖೆ ನಡೆಯಲಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ರವಿ ಅವರ ಜೊತೆ ಕೆಲಸ ಮಾಡಿದ ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಿದೆ.

English summary
Central Bureau of Investigation begins its probe into the death of IAS officer DK Ravi, the first person they will call in for questioning is his driver Elangovan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X