ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ರವಿ ಕೊನೆಯ ಕರೆ ಸ್ವೀಕರಿಸಿದ್ದು 11.22ಕ್ಕೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾ. 18 : ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದೆ. ತನಿಖೆ ಕೈಗೊಂಡಿರುವ ಪೊಲೀಸರು ಸೋಮವಾರ ಬೆಳಗ್ಗೆ 11.22ಕ್ಕೆ ರವಿ ಅವರು ಕೊನೆಯ ಫೋನ್‌ ಕರೆ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಒನ್ ಇಂಡಿಯಾದ ಜೊತೆ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರವಿ ಅವರು ಸೋಮವಾರ ಬೆಳಗ್ಗೆ 11.22ಕ್ಕೆ ಕೊನೆಯ ಫೋನ್‌ ಕರೆಗೆ ಉತ್ತರ ನೀಡಿದ್ದಾರೆ. ಆ ಫೋನ್‌ ಕರೆ ಸ್ನೇಹಿತರಿಂದ ಬಂದಿದ್ದು, ಅವರು ಸಹ ಐಎಎಸ್ ಅಧಿಕಾರಿಯಾಗಿದ್ದಾರೆ. [ಮಣ್ಣಲ್ಲಿ ಮಣ್ಣಾದ ಡಿಕೆ ರವಿ]

dk ravi ias

ಐಎಎಸ್ ಅಧಿಕಾರಿ ವಿಚಾರಣೆ : ಡಿಕೆ ರವಿ ಅವರಿಗೆ ಕೊನೆಯದಾಗಿ ಕರೆ ಮಾಡಿದ ಐಎಎಸ್ ಅಧಿಕಾರಿಯನ್ನು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಕೌಟುಂಬಿಕ ಕಾರಣಗಳಿಂದಾಗಿ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಇಲ್ಲಿಯವರೆಗಿನ ತನಿಖೆಯಿಂದ ನಿರ್ಧರಿಸಿದ್ದಾರೆ. [ಡಿಕೆ ರವಿ ಸಾವು : ಪೊಲೀಸರ ತನಿಖೆ ಹೇಗೆ?]

ರವಿ ಅವರ ಕಾರು ಚಾಲಕನನ್ನು ವಿಚಾರಣೆ ನಡೆಸಿರುವ ಪೊಲೀಸರು, ರವಿ ಅವರ ಪತ್ನಿ ಕುಸುಮಾ ಮತ್ತು ಕೆಲವು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಆದರೆ, ದುಖಃದಲ್ಲಿರುವ ಕುಟುಂಬದವರ ವಿಚಾರಣೆ ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. [ಈ ಸಾವು ನ್ಯಾಯವೇ ಮತ ಹಾಕಿ]

ವಾಗ್ವಾದ ನಡೆದಿತ್ತೇ? : ಡಿಕೆ ರವಿ ಅವರು ಶನಿವಾರ ಮತ್ತು ಭಾನುವಾರ ನಾಗರಭಾವಿಯಲ್ಲಿರುವ ಅವರ ಮಾವನ ಮನೆಯಲ್ಲಿದ್ದರು. ಸೋಮವಾರ ಅಲ್ಲಿಂದಲೇ ಕಚೇರಿಗೆ ಹೋಗಿದ್ದರು. ಅಲ್ಲಿ ಕೌಟುಂಬಿಕ ವಿಷಯಕ್ಕೆ ವಾಗ್ವಾದ ನಡೆದಿತ್ತು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಕುಟುಂಬ ಸದಸ್ಯರ ವಿಚಾರಣೆ ನಂತರ ಮಾತ್ರ ಖಚಿತ ಮಾಹಿತಿ ಲಭ್ಯವಾಗಲಿದೆ.

English summary
The Bengaluru police have found that the last call that was made to D.K.Ravi, the IAS officer who allegedly committed suicide was at 11.22 AM on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X