ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ರವಿ ಸಾವು: ಸಿಬಿಐ ತನಿಖೆಯ ಮೊದಲ ಪುಟ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 20 : ಐಎಎಸ್ ಅಧಿಕಾರಿ ಡಿಕೆ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಸಿಬಿಐ ತೀರ್ಮಾನಿಸಿದೆ. ಉದ್ಯಮ ಮತ್ತು ವೈಯಕ್ತಿಕ ಕಾರಣಕ್ಕಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಲು ರವಿ ಪ್ರಯತ್ನ ಆರಂಭಿಸಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಡಿಕೆ ರವಿ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಪ್ರಾಥಮಿಕ ತನಿಖೆಯಿಂದ ಹಲವು ಮಾಹಿತಿಗಳನ್ನು ಸಂಗ್ರಹಣೆ ಮಾಡಿದ್ದಾರೆ. ರವಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದು, ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

DK Ravi

ರಿಯಲ್ ಎಸ್ಟೇಟ್ ಉದ್ಯಮ : ಡಿಕೆ ರವಿ ಅವರು ಚಿಕ್ಕಬಳ್ಳಾಪುರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಲು ಸಿದ್ಧತೆ ನಡೆಸಿದ್ದರು. 50 ಎಕರೆ ಜಾಗವನ್ನು ಖರೀದಿ ಮಾಡಲು ಮುಂದಾಗಿದ್ದರು. ರವಿ ಮತ್ತು ಅವರ ಸ್ನೇಹಿತ ಹರಿ ಸೇರಿಕೊಂಡು ಈ ಉದ್ಯಮ ಆರಂಭಿಸಲು ಮುಂದಾಗಿದ್ದರು. [ಡಿಕೆ ರವಿ ಕೇಸ್: ಮತ್ತೊಮ್ಮೆ ಅಟಾಪ್ಸಿ ಪರೀಕ್ಷೆ]

ಆರ್ ಅಂಡ್ ಎಚ್ ಪ್ರಾಪರ್ಟೀಸ್ ಹೆಸರಿನಲ್ಲಿ ರವಿ ಮತ್ತು ಹರಿ ಸೇರಿಕೊಂಡು ಉದ್ಯಮ ಆರಂಭಿಸುವ ಸಿದ್ಧತೆಯಲ್ಲಿದ್ದರು. ಇದಕ್ಕಾಗಿ 50 ಎಕರೆ ಜಾಗವನ್ನು ಚಿಕ್ಕಬಳ್ಳಾಪುರದಲ್ಲಿ ಖರೀದಿ ಮಾಡಲು ಮುಂದಾಗಿದ್ದರು.ಇದಕ್ಕಾಗಿ ಹಲವರ ಬಳಿ ಆರ್ಥಿಕ ಸಹಾಯವನ್ನು ಕೇಳಿದ್ದರು. [ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ?]

ಈಗಾಗಲೇ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಡಿಕೆ ರವಿ ಅವರ ಬ್ಯಾಚ್‌ ಮೇಟ್ ವೊಬ್ಬರ ಪತಿ ರವಿ ಅವರ ಈ ಉದ್ಯಮದಲ್ಲಿ 10 ಲಕ್ಷ ಹಣ ತೊಡಗಿಸಿದ್ದರು ಎಂದು ಸಿಬಿಐ ಅಧಿಕಾರಿಗಳ ವಿಚಾರಣೆ ಸಂದರ್ಭದಲ್ಲಿ ಹರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಉದ್ಯಮದಲ್ಲಿ ನಷ್ಟ : ಡಿಕೆ ರವಿ ಅವರಿಗೆ ಉದ್ಯಮದಲ್ಲಿ ನಷ್ಟ ಉಂಟಾಗಿತ್ತು. ನಿರೀಕ್ಷೆಯಂತೆ ಅವರಿಗೆ 50 ಎಕರೆ ಜಾಗವನ್ನು ಖರೀದಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಉದ್ಯಮದಲ್ಲಿ ಹಣ ಹೂಡಿಕೆ ಮಾಡಿರುವವರು ಹಣವನ್ನು ವಾಪಸ್ ನೀಡುವಂತೆ ರವಿ ಅವರನ್ನು ಒತ್ತಾಯಿಸುತ್ತಿದ್ದರು.

ರವಿ ಮತ್ತು ಹರಿ ಸೇರಿ ಆರ್ ಅಂಡ್ ಎಚ್ ಪ್ರಾಪರ್ಟೀಸ್‌ ಬ್ಯಾಂಕ್‌ ಖಾತೆಯಿಂದ 2 ಕೋಟಿ ಹಣವನ್ನು ತೆಗೆದು ಹೂಡಿಕೆ ಮಾಡಿದವರಿಗೆ ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿ 5.42 ಕೋಟಿ ಹಣ ಜಮಾವಾಗಿರುವುದು ಪತ್ತೆಯಾಗಿದೆ.

ಡಿಕೆ ರವಿ ಅವರ ನಿಗೂಢ ಸಾವಿನ ಪ್ರಕರಣ ರಾಜ್ಯಾದ್ಯಂತ ಭಾರೀ ಕುತೂಹಲ ಕೆರಳಿಸಿತ್ತು. ಜನರ ಭಾರೀ ವಿರೋಧಕ್ಕೆ ಮಣಿದ ಸರ್ಕಾರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಪ್ರಾಥಮಿಕ ತನಿಖೆಯಿಂದ ರವಿ ಅವರ ಸಾವಿಗೆ ಕಾರಣ ಏನೆಂದು ಸಿಬಿಐ ಪತ್ತೆ ಹಚ್ಚಿದೆ. ಅಂತಿಮ ವರದಿ ಏನು ಹೇಳುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

English summary
The preliminary inquiry by the CBI has concluded that IAS officer Ravi had committed suicide. The reasons are being ascertained and the CBI feels that the property issue and a personal reason could have led to the officer committing suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X