ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಪಿಜಿ ಸಬ್ಸಿಡಿ ಕೈಬಿಟ್ಟ ಕಾಂಗ್ರೆಸ್ ಸಚಿವ ದಿನೇಶ್

By Kiran B Hegde
|
Google Oneindia Kannada News

ಬೆಂಗಳೂರು, ಜ. 19: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸ್ವಯಂ ಇಚ್ಛೆಯಿಂದ ಗೃಹಬಳಕೆ ಎಲ್‌ಪಿಜಿ ಗ್ಯಾಸ್‌ಗೆ ಸಬ್ಸಿಡಿ ಕೈಬಿಡುವಂತೆ ಕೋರಿದೆ. ತೈಲ ಕಂಪನಿಗಳೂ ತಮ್ಮ ವೆಬ್‌ಸೈಟ್‌ನಲ್ಲಿ ಈ ಪ್ರಕ್ರಿಯೆಗೆ ಪ್ರಾಮುಖ್ಯತೆ ನೀಡಿವೆ.

ಆದರೆ, ರಾಜಕೀಯ ನೇತಾರರು ಪಕ್ಷಭೇದ ಮರೆತು ಈ ಪ್ರಸ್ತಾವನೆಗೆ ಬೆಂಬಲ ನೀಡುತ್ತಿದ್ದಾರೆ. ಈಚೆಗಷ್ಟೇ ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಬೆಂಗಳೂರು ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್‌ಕುಮಾರ್ ಸಬ್ಸಿಡಿ ಕೈಬಿಟ್ಟಿದ್ದಾರೆ. ಎಲ್ಲ ಬಿಜೆಪಿ ಸದಸ್ಯರಿಗೂ ಸಬ್ಸಿಡಿ ಕೈಬಿಡಲು ಪಕ್ಷದ ಹೈ ಕಮಾಂಡ್ ಸೂಚಿಸಿದೆ. [ಭೂ ಕಬಳಿಕೆ ಕುರಿತು ಸ್ಪಷ್ಟನೆ]

dinesh

ಈಗ ಕಾಂಗ್ರೆಸ್‌ ಸಚಿವ ದಿನೇಶ್ ಗುಂಡೂರಾವ್ ಕೂಡ ಇದಕ್ಕೆ ಬೆಂಬಲ ನೀಡಿದ್ದು, ತಮ್ಮ ಕುಟುಂಬದ ಗ್ಯಾಸ್ ಸಂಪರ್ಕಕ್ಕೆ ಸಬ್ಸಿಡಿ ಕಡಿತಗೊಳಿಸಿಕೊಂಡಿದ್ದಾರೆ. ಅಲ್ಲದೆ, ಇತರ ಸಚಿವರು, ಅಧಿಕಾರಿಗಳು, ಶಾಸಕರು ಹಾಗೂ ಹಿರಿಯ ರಾಜಕಾರಣಿಗಳಲ್ಲಿ ಗ್ಯಾಸ್ ಸಬ್ಸಿಡಿ ಕೈಬಿಡುವಂತೆ ಕೋರಿದ್ದಾರೆ. [ಭೂ ಇಕ್ಕಟ್ಟು : ವಾದ, ಪ್ರತಿವಾದ]

ದೇಶದಲ್ಲಿ ಕೋಟ್ಯಧೀಶರ ಸಂಖ್ಯೆ 40 ಸಾವಿರವನ್ನು ಮೀರುತ್ತಿದ್ದರೂ, ಅದರ ಅರ್ಧದಷ್ಟು ಜನ ಮಾತ್ರ ಸಿಲಿಂಡರ್‌ಗೆ ಸಬ್ಸಿಡಿ ಕೈಬಿಡಲು ನಿರ್ಧರಿಸಿದ್ದಾರೆ. [ಎಲ್ ಪಿಜಿ ಸಬ್ಸಿಡಿಗೆ ಬ್ಯಾಂಕ್ ಖಾತೆ ಲಿಂಕ್]

English summary
Food and civil supplies minister for state Dinesh Gundu Rao has volunteered not to use subsidized LPG. He is planning to make a personal appeal to ministers, bureaucrats, legislators, senior politicians and corporate executives to join hands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X