ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿಯಿತು ಪೆಟ್ರೋಲ್, ಡೀಸೆಲ್ ಬೆಲೆ

|
Google Oneindia Kannada News

ಬೆಂಗಳೂರು, ಜುಲೈ 16 : ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ದರ 2 ರೂ. ಕಡಿಮೆಯಾಗಿದೆ. ಜುಲೈತಿಂಗಳಿನಲ್ಲಿ ಎರಡನೇ ಬಾರಿಗೆ ದರ ಇಳಿಕೆಯಾಗುತ್ತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಗಳು ಇಳಿಕೆಯಾದ ಹಿನ್ನಲೆಯಲ್ಲಿ ಮತ್ತು ಡಾಲರ್‌ ಎದುರು ರೂಪಾಯಿ ಮೌಲ್ಯ ಚೇತರಿಕೆ ಕಂಡಿದ್ದರಿಂದ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಸಿವೆ. [ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]

petrol

ಬೆಂಗಳೂರು ನಗರದಲ್ಲಿ ಪೆಟ್ರೋಲ್‌ ಬೆಲೆ 2.68 ರೂ. ಕಡಿಮೆಯಾಗಿದ್ದರೆ, ಡೀಸೆಲ್‌ ಬೆಲೆ 2.46 ರೂ. ಇಳಿಕೆಯಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ದರ ಹೆಚ್ಚಿಸಲು ದೆಹಲಿಯ ಎಎಪಿ ಸರ್ಕಾರ ನಿರ್ಧರಿಸಿದ್ದು, ಅಲ್ಲಿ ಬೆಲೆ ಹೆಚ್ಚಾಗಲಿದೆ. [ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ]

ದರ ಇಳಿಕೆ ಸುಳಿವು : ಇರಾನ್‌ನಲ್ಲಿನ ಪರಮಾಣು ಬಿಕ್ಕಟ್ಟು ಅಂತ್ಯಗೊಂಡಿರುವ ಕಾರಣ ಮುಂದಿನ ದಿನಗಳಲ್ಲಿ ತೈಲಬೆಲೆಗಳಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

ದರಗಳ ಏರಿಳಿತ

* 2015ರ ಮೇ 1 ರಂದು ಹಾಗೂ 15 ರಂದು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿತ್ತು
* ಮೇ 1ರಂದು ಪೆಟ್ರೋಲ್ ದರ ಲೀಟರ್ ಗೆ 3.96, ಡೀಸೆಲ್ ಲೀಟರ್ ಗೆ 2.37 ರೂ. ಏರಿಕೆಯಾಗಿತ್ತು
* ಮೇ 15 ರಂದು ಪೆಟ್ರೋಲ್ ದರ 3.13 ರೂ. ಹಾಗೂ ಡೀಸೆಲ್ ದರ 2.71 ರೂ. ಏರಿಕೆಯಾಗಿತ್ತು
* ಜೂ.30ರಂದು ಪೆಟ್ರೋಲ್ ದರ 31 ಪೈಸೆ, ಡೀಸೆಲ್ ದರ 71 ಪೈಸೆ ಕಡಿಮೆಯಾಗಿತ್ತು.

English summary
Petrol and diesel prices were slashed by Rs 2 per liter on Wednesday, July 15. New price come to effect form Wednesday midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X