ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನಲ್ಲಿ ಧರ್ಮಸ್ಥಳದ ಪಾಕಶಾಲೆ

By Mahesh
|
Google Oneindia Kannada News

ಬೆಳ್ತಂಗಡಿ, ಜೂ.23: ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ದೇಗುಲದ 'ಅನ್ನಪೂರ್ಣ ಪಾಕ ಶಾಲೆ' ಭಾರತದ ಐದು ಅತಿ ದೊಡ್ಡ ಅಡುಗೆ ಮನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪಾಕಶಾಲೆಯ ಐತಿಹ್ಯ ವಿಶೇಷತೆಗಳ ಕುರಿತು ನ್ಯಾಷನಲ್‌ ಜಿಯೋಗ್ರಫಿ ಚಾನೆಲ್‌ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ನ್ಯಾಷನಲ್‌ ಜಿಯೋಗ್ರಫಿ ವಾಹಿನಿಯಲ್ಲಿ ಈಗಾಗಲೇ 'ಇಂಡಿಯಾಸ್‌ ಮೆಗಾ ಕಿಚನ್‌'' ಎಂಬ ಕಾರ್ಯಕ್ರಮ ನಡೆಯುತ್ತಿದೆ. ಸಾವಿರಾರು ಜನರ ಹಸಿವನ್ನು ನೀಗಿಸುವ ಪಾಕ ಶಾಲೆಗಳ ಚಿತ್ರಣವನ್ನು ಜನತೆಯ ಮುಂದಿಡುವುದು ಈ ಕಾರ್ಯಕ್ರಮದ ಉದ್ದೇಶ. ಅಂತೆಯೇ ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಅನ್ನಪೂರ್ಣ ಪಾಕಶಾಲೆಯ ಪರಿಚಯ ಮಾಡಿಸಲಾಗುತ್ತಿದೆ.

Dharmasthala

ಈ ಕಾರ್ಯಕ್ರಮದ ಮೂಲಕ ಈ ಮೆಗಾ ಕಿಚನ್‌ಗಳನ್ನು ಯಾವ ರೀತಿ ನಿರ್ವಹಣೆ ಮಾಡಲಾಗುತ್ತದೆ ಹಾಗೂ ಅಲ್ಲಿ ಯಾವ ರೀತಿ ಕೆಲಸಗಳು ಜರುಗುತ್ತವೆ ಎಂಬುದನ್ನು ತೋರಿಸಲಾಗುತ್ತದೆ. ಈ ಕಾರ್ಯಕ್ರಮ ಪ್ರತಿ ಸೋಮವಾರದಿಂದ ಗುರುವಾರ ರಾತ್ರಿ 10 ಗಂಟೆಗೆ ಚೆಫ್‌ ವಿಕಾಸ್‌ ಖನ್ನಾ ನೇತೃತ್ವದಲ್ಲಿ ಪ್ರಸಾರವಾಗುತ್ತದೆ. [ಧರ್ಮಸ್ಥಳ ಸಾಮಾಜಿಕ ಜಾಲ ತಾಣಗಳ ಅನಾವರಣ]

ಭಾರತದ ಐದು ಮೆಗಾ ಅಡುಗೆ ಶಾಲೆಗಳಾದ ಶಿರಡಿ, ಚೆನ್ನೈ ತಾಜ್‌ ಕಿಚನ್‌, ಧರ್ಮಸ್ಥಳ, ಭಾರತೀಯ ರೈಲ್ವೇ ಕ್ಯಾಟರಿಂಗ್‌ ಮತ್ತು ಟೂರಿಸಂ ಕಾರ್ಪೋರೇಶನ್‌, ನೋಯ್ಡಾ ಮತ್ತು ಅಕ್ಷಯ ಪಾತ್ರ ಫೌಂಡೇಶನ್‌ ಕಿಚನ್‌ ಹುಬ್ಬಳ್ಳಿ ಈ ಕುರಿತಾದ ವಿಡಿಯೋ ಸದ್ಯದಲ್ಲೇ ಪ್ರಸಾರವಾಗಲಿದೆ.

ಧರ್ಮಸ್ಥಳದ ಅನ್ನಪೂರ್ಣ ಪಾಕಶಾಲೆಯ ಕಾರ್ಯಕ್ರಮ ಜೂ.23ರಂದು ರಾತ್ರಿ 10 ಗಂಟೆಗೆ ನ್ಯಾಷನಲ್ ಜಿಯೋಗ್ರಫಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಸರಿ ಸುಮಾರು ಪ್ರತಿ ದಿನ 50,000 ಜನರಿಗೆ ಪ್ರಸಾದ ರೂಪದಲ್ಲಿ ಊಟ ಬಡಿಸಲಾಗುತ್ತದೆ.

ಹಬ್ಬ ವಿಶೇಷ ದಿನಗಳಲ್ಲಿ ಈ ಸಂಖ್ಯೆ 1 ಲಕ್ಷ ಮೀರುತ್ತದೆ. ಈ ಪಾಕಶಾಲೆ ಸಂಪೂರ್ಣ ಪರಿಸರ ಸ್ನೇಹಿ, ಇಂಧನಸ್ನೇಹಿಯಾಗಿದೆ. ದೇಗುಲದ ಗೋಶಾಲೆಯಲ್ಲಿ ಸಿಗುವ ಸಗಣಿಯನ್ನು ಬಳಸಿ ಬಯೋಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ.ಎರೆಹುಳು ಗೊಬ್ಬರ ಬಳಸಿ ದಿನನಿತ್ಯದ ಅಡುಗೆಗೆ ಬೇಕಾದ ತರಕಾರಿ ಬೆಳೆಯಲಾಗುತ್ತದೆ.

English summary
'Annapoorna Kitchen' of Lord Manjunatheshwara temple at Dharmasthala, Dakshina Kannada, Karanataka will be one among five large-sized kitchens which will be featured in a television programme to be aired in National Geographic television channel on June 23, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X