ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ದಿನಗಳ ವಿಜೃಂಭಣೆಯ ಲಕ್ಷದೀಪ ಉತ್ಸವಕ್ಕೆ ತೆರೆ

By ಅಮರೇಶ್ ಚವಾಣ್, ಆಂಜನೇಯ
|
Google Oneindia Kannada News

ಧರ್ಮಸ್ಥಳ, ನ.24: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರದ ಜತೆಗೆ ಸರ್ವಧರ್ಮ ಸಮ್ಮೇಳನ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಲಕ್ಷದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನವಾಗಿದೆ. ಅಂತಿಮ ದಿನದ ವರದಿ ಇಲ್ಲಿದೆ..ಫೋಟೋ: ಶ್ರೇಯಸ್

ಐದು ದಿನಗಳ ವಿಜೃಂಭಣೆಯ ಲಕ್ಷದೀಪೋತ್ಸವಕ್ಕೆ ಅದ್ದೂರಿಯಾಗಿ ತೆರೆ ಎಳೆಯಲಾಗಿದೆ. ಐದನೇ ದಿನ ಶ್ರೀಸ್ವಾಮಿಗೆ ಗೌರಿಮಾರುಕಟ್ಟೆ ಉತ್ಸವ ನಡೆಯತು. ಹೂ ಹಣ್ಣುಗಳಿಂದ ಸಿಂಗರಿಸಿದ ಬೆಳ್ಳಿ ರಥ ದೇವಸ್ಥಾನದ ಮುಂಭಾಗದಿಂದ ಹೊರಟು, ನೆರದಿದ್ದ ಲಕ್ಷ, ಲಕ್ಷ ಭಕ್ತರ ನಡುವೆ, ರಥಿಬೀದಿಯಾಗಿ ಗೌರಿಮಾರುಕಟ್ಟೆಗೆ ಸಾಗಿತು. [ಗ್ಯಾಲರಿ: ಧರ್ಮಸ್ಥಳದ ದೀಪಾಲಂಕಾರ ವೈಭವ]

ಉತ್ಸವದುದ್ದಕ್ಕೂ ನಾದ ಸ್ವರಗಳು, ವಾಲಗ, ಡೊಳ್ಳು ಕುಣಿತ, ಶಂಖದಾಸರು ಮತ್ತು ಕಹಳೆ, ವೀರಗಾಸೆಯರು, ಬ್ಯಾಂಡ ಸೆಟ್ಟುಗಳು ಸಾಥ್ ನೀಡಿದವು. ಆ ಮೂಲಕ ಇಡೀ ಧರ್ಮಸ್ಥಳವೇ ಭಕ್ತಿ ಬಾವದಲ್ಲಿ ಲೀನಾವಾಗುವಂತೆ ಮಾಡಿದರು. ಮುಖ್ಯಧ್ವಾರದ ಎಡಬದಿಯ ಗೌರಿಮಾರುಕಟ್ಟೆಗೆ ತಲುಪಿದ ಶ್ರೀಸ್ವಾಮಿಯ ಉತ್ಸವ ಮೂರ್ತಿಗೆ ವಿಧ ವಿಧದ ದೀಪಗಳಿಂದ ಮಂಗಳಾರತಿ ನೇರವೇರಿಸಿ ಪೂಜಾ, ವಿಧ ವಿಧಾನಗಳನ್ನು ಪೂರೈಸಲಾಯಿತು. [ಲಲಿತೋದ್ಯಾನ ಉತ್ಸವದ ಚಿತ್ರಗಳು]

ನಂತರ ಉತ್ಸವ ದೇವಸ್ಥಾನಕ್ಕೆ ಆಗಮಿಸಿ ಮಂಜುನಾಥನ ಸನ್ನಿಧಿಯಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಾಲಾಯಿತು.ಮಂಜುನಾಥನ ಈ ಲಕ್ಷದೀಪ ವೈಭವವನ್ನು ನೋಡಲು ನಾಡಿನಾದ್ಯಂತದಿಂದ ಲಕ್ಷ, ಲಕ್ಷ ಭಕ್ತರು ಆಗಮಿಸಿದ್ದರು.

ದೇಗುಲದ ಬಳಿ ಅಪಾರ ಜನಸ್ತೋಮ

ದೇಗುಲದ ಬಳಿ ಅಪಾರ ಜನಸ್ತೋಮ

ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ವೈಭವದಿಂದ ನಡೆಯಿತು. ಅಪಾರ ಜನಸ್ತೋಮ ದೇವರ ಕೃಪೆಗಾಗಿ ಬಂದಿದ್ದರು.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಉಪಸ್ಥಿತಿ

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಉಪಸ್ಥಿತಿ

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು. ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಮಂದಿ ಭಕ್ತಾದಿಗಳು ಉತ್ಸವವನ್ನು ವೀಕ್ಷಿಸಿ, ದೇವರ ದರ್ಶನ ಮಾಡಿ ಪುಣ್ಯಭಾಗಿಗಳಾದರು.

ಸಮವಸರಣ ಪೂಜೆ

ಸಮವಸರಣ ಪೂಜೆ

ಭಾನುವಾರ ಮಹೋತ್ಸವ ಸಭಾ ಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಂಡವು.

ಅಂತಿಮ ದಿನದ ವಿಧಿ ವಿಧಾನಗಳು

ಅಂತಿಮ ದಿನದ ವಿಧಿ ವಿಧಾನಗಳು

ಅಂತಿಮ ದಿನದಂದು ಚಂದ್ರನಾಥ ಸ್ವಾಮಿ ದೇಗುಲದಲ್ಲಿ ಅಷ್ಟವಿಧಾರ್ಚನೆ ಪೂಜೆ, ಸಂಗೀತ ಪೂಜೆ ಮೊದಲಾದ ಕಾರ್ಯಕ್ರಮಗಳು ನಡೆದವು.

ತೀರ್ಥಂಕರರಿಂದ ಧರ್ಮೋಪದೇಶ ಸಭೆ

ತೀರ್ಥಂಕರರಿಂದ ಧರ್ಮೋಪದೇಶ ಸಭೆ

ಮಾಹಿತಿ ಇಲ್ಲಿ ಓದಿಮಾಹಿತಿ ಇಲ್ಲಿ ಓದಿ

English summary
The Laksha Deepotsava is a spectacular annual event at Sri Kshetra, Dharmasthala which also hosts All Religion Conference. Dharmasthala witnessed various kinds of lighting arrangements followed by cultural events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X