ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪೋತ್ಸವ ಯಶಸ್ಸಿಗೆ ಕಾರಣರಾದ ಪೊಲೀಸರಿಗೆ ಸಲಾಂ

By ಪ್ರಸಾದ್ ಶೆಟ್ಟಿ & ಪ್ರಿಯಾ ಪ್ರಸಾದ್
|
Google Oneindia Kannada News

ಕಾರ್ತಿಕ ಮಾಸದಲ್ಲಿ ಶಿವನನ್ನು ವಿಶೇಷ ರೀತಿಯಲ್ಲಿ ಪೂಜಿಸಲಾಗುತ್ತದೆ. ರಾಹುಕಾಲದಲ್ಲಿ ಶಿವನನ್ನು ಪೂಜಿಸಿದರೆ, ವಿಶೇಷವಾದ ಪುಣ್ಯ ಬರುವುದು ಎಂಬ ನಂಬಿಕೆಯಿದೆ. ಜತೆಗೆ ಎಲ್ಲೆಡೆ ಲಕ್ಷದೀಪೋತ್ಸವ, ತೆಪ್ಪೋತ್ಸವಗಳು ಸಂಭ್ರಮದಿಂದ ನಡೆಯುತ್ತದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರದ ಜತೆಗೆ ಸರ್ವಧರ್ಮ ಸಮ್ಮೇಳನ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಲಕ್ಷದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನವಾಗಿದೆ. ಇವೆಲ್ಲ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸಿದ ಪೊಲೀಸ್ ಪಡೆ ಕುರಿತ ಲೇಖನ ಇಲ್ಲಿದೆ...ಚಿತ್ರಗಳು: ವಿಲ್ಸನ್ ಪಿಂಟೋ

ಶ್ಲಾಘನೀಯ ಪೊಲೀಸರ ಕಾರ್ಯ: ಧರ್ಮಸ್ಥಳ ಲಕ್ಷದೀಪ ಎಂದರೆ ಜನಜಂಗುಳಿಯಿಂದ ಕೂಡಿದ ಸಂಭ್ರಮದ ಕಾರ್ಯಕ್ರಮ. ಲಕ್ಷದೀಪಕ್ಕೆ ಲಕ್ಷಾಂತರ ಜನ ಪ್ರತಿ ವರ್ಷ ಸಾಕ್ಷಿಯಾಗುತ್ತಾರೆ. ಇಲ್ಲಿ ಬಂದ ಲಕ್ಷಾಂತರ ಜನರಿಗೆ ಸಮರ್ಪಕ ವ್ಯವಸ್ಥೆ ಒದಗಿಸುವುದು ಬೃಹತ್ ಕಾರ್ಯ. ರಕ್ಷಣೆ ವಿಷಯಕ್ಕೆ ಸಂಬಂಧಿಸಿ ಮಾತನಾಡುವುದಾದರೆ ರಕ್ಷಣೆ ನೀಡಿ ಜನರನ್ನು ಸಂಭಾಳಿಸುವ ಪೊಲೀಸರಿಗೊಂದು ಸಲಾಂ ಹೇಳಲೇ ಬೇಕು. [ಗ್ಯಾಲರಿ: ಧರ್ಮಸ್ಥಳದ ಲಕ್ಷದೀಪೋತ್ಸವ ಸಂಭ್ರಮ]

ಪೊಲೀಸ್ ಮೂಲಗಳು ಹೇಳುವಂತೆ ಧರ್ಮಸ್ಥಳ ಒಂದು ಧಾರ್ಮಿಕ ಕ್ಷೇತ್ರವಾದುದರಿಂದ ಇಲ್ಲಿ ಎಲ್ಲಾ ಧರ್ಮಗಳ ಜನ ಸಮಾನ ಮನಸ್ಕರಾಗಿ ಪಾಲ್ಗೊಳ್ಳುವುದರಿಂದ ಇಲ್ಲಿ ಅಂತಹ ಯಾವುದೇ ಅವಘಡಗಳಿಗೆ ಅವಕಾಶವಿರುವುದಿಲ್ಲ. ಸರಗಳ್ಳತನ, ಜೇಬುಗಳ್ಳರ ಮೇಲೆ ನಿಗಾ ವಹಿಸುವುದು ಮಾತ್ರ ಕಠಿಣ ಕಾರ್ಯ ಎಂಬಂತೆ ತೋರುತ್ತದೆ.

ಸುಮಾರು ಇನ್ನೂರು ಪೊಲೀಸರು ರಕ್ಷಣಾ ಕಾರ್ಯದಲ್ಲಿ ಮಫ್ತಿ ಕಾರ್ಯದಲ್ಲೂ ಹಲವು ಮಂದಿ ಪೊಲೀಸರೇ ಕಾರ್ಯ ನಿರ್ವಹಿಸುತ್ತಾರೆ. ಮಹಿಳೆಯರ ಮೇಲ್ವಿಚಾರಣೆಗೆಂದು ಪ್ರತ್ಯೇಕ ಮಹಿಳಾ ಪೊಲೀಸ್ ಪಡೆ ಕಾರ್ಯ ನಿರ್ವಹಿಸುತ್ತದೆ. ಚಿಕ್ಕಮಗಳೂರು, ಗದಗ, ಬಾಗಲಕೋಟೆ, ಮಡಿಕೇರಿ, ಕಾರವಾರ, ಬೆಳಗಾವಿ, ಉಡುಪಿ ವಲಯದಿಂದ ಪೊಲೀಸರು ಬರುತ್ತಾರೆ. ಎಲ್ಲಾ ಜಿಲ್ಲೆಯಿಂದ ಇಬ್ಬರು ಪೊಲೀಸರು ಬರುವುದು ಕಡ್ಡಾಯ.

Dharmasthala Laksha Deepotsava 2014

ಬೆಳ್ತಂಗಡಿ ಪೊಲೀಸ್ ಠಣೆಯ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸರು ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ. ರಜಾ ದಿನಗಳಲ್ಲಿ ಲಕ್ಷ ದೀಪೋತ್ಸವಕ್ಕೆ ಆಗಮಿಸುವ ಜನರ ಸಂಖ್ಯೆ ಹೆಚ್ಚಾಗಿರುವುದರಿಂದ ಆ ದಿನಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಾಗಿರಬೇಕಾಗಿರುತ್ತದೆ. ಪೊಲೀಸ್ ಪಡೆಯ ಎಲ್ಲಾ ರೀತಿಯ ವಸತಿ ವ್ಯವಸ್ಥೆಗಳನ್ನು ದೇವಸ್ಥಾನದ ಆಡಳಿತ ಮಂಡಳಿಯೇ ಒದಗಿಸಿಕೊಡುತ್ತದೆ. ಇಲ್ಲಿ ಓರ್ವ ಎ.ಎಸ್.ಪಿ, ಮೂವರು ಸರ್ಕಲ್ ಇನ್ಸ್‍ಪೆಕ್ಟರ್, ಒಂಭತ್ತು ಜನ ಇನ್ಸ್‍ಪೆಕ್ಟರ್‍ಗಳು ಕಾರ್ಯ ನಿರ್ವಹಿಸುತ್ತಿದ್ದು, ಸಂಚಾರ ವ್ಯವಸ್ಥೆಯನ್ನು ನೋಡಿಕೊಳ್ಳುವುದೇ ಒಂದು ಬೃಹತ್ ಕಾರ್ಯ.

English summary
Dharmasthala Laksha Deepotsava 2014: Public praised Police for maintaining the peace and harmony during the event. Police from Chikkamagalur, Shivamogga, Udpi, Belagavi, Karwar, Gadag and from many parts of Karnataka did their duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X