ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ಲೀಲ ಸಿಡಿ ಪ್ರಕರಣ : ಸರ್ಕಾರಕ್ಕೆ ಭಕ್ತರ ಕೆಲ ಪ್ರಶ್ನೆಗಳು

By Prasad
|
Google Oneindia Kannada News

ಬೆಳ್ತಂಗಡಿ, ಡಿಸೆಂಬರ್ 04 : ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ನಕಲಿ ಅಶ್ಲೀಲ ಸಿಡಿ ಪ್ರಕರಣ ಹಿಂಪಡೆದಿರುವುದನ್ನು ಖಂಡಿಸಿ, ಅವರ ಅನುಯಾಯಿಗಳು ಬೆಳ್ತಂಗಡಿ ತಾಲೂಕಿನ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಮಾಡಿದ್ದಾರೆ ಮತ್ತು ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮೇಲೆ ನಕಲಿ ಸಿ.ಡಿ. ಮಾಡಿ ರೆಡ್ ಹ್ಯಾ೦ಡ್ ಆಗಿ ಸಿಕ್ಕಿಕೊ೦ಡ ಆರೋಪಿಗಳ ಮೇಲಿನ ಕೇಸು ಕೋರ್ಟ್ ಕಟ್ಟೆಯಲ್ಲಿ ಅ೦ತಿಮ ಹ೦ತದಲ್ಲಿರುವಾಗಲೇ ಏಕಾಏಕಿಯಾಗಿ ಕರ್ನಾಟಕ ಸರಕಾರ ಈ ಕೇಸನ್ನು ಹಿ೦ದಕ್ಕೆ ಪಡೆದಿದ್ದೇಕೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗಡಿ ತಾಲೂಕಿನ ನೂರಾರು ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ಧೋರಣೆಯನ್ನು ಸಾತ್ವಿಕವಾಗಿ ಪ್ರತಿಭಟಿಸಿ ಬೆಳ್ತ೦ಗಡಿಯ ನೂರಾರು ಶ್ರೀ ಮಠದ ಅಭಿಮಾನಿಗಳು ಮಾನ್ಯ ರಾಜ್ಯಪಾಲರಿಗೆ ತಾಲೂಕು ತಹಶಿಲ್ದಾರ ಪ್ರಸನ್ನ ಮೂರ್ತಿಯವರ ಮೂಲಕ ಮನವಿಯನ್ನು ಸಲ್ಲಿಸಿದರು. ಸರಕಾರ ಆದೇಶವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು. [ರಾಘವೇಶ್ವರ ಶ್ರೀಗಳ ಕೇಸ್ ಬಗ್ಗೆ ಕೆಲವು ಅನುಮಾನ, ಜಿಜ್ಞಾಸೆ]

Devotees of Ramachandrapur math question withdrawal of fake cd case

ಮಠದ ಭಕ್ತರು ಕೇಳಿರುವ ಕೆಲ ಪ್ರಶ್ನೆಗಳು ಕೆಳಗಿನಂತಿವೆ

* ಸರಕಾರದ ಈ ನಿರ್ಧಾರದ ಹಿಂದೆ ಯಾವ ಶಕ್ತಿ ಕೆಲಸ ಮಾಡುತ್ತಿದೆ?
* ಇದರ ಅರ್ಥ ಸರಕಾರ ಆರೋಪಿಗಳಿಗೆ ರಕ್ಷಣೆ ನೀಡುತ್ತಿದೆಯಾ?
* ಹೀಗೆ ಮಾಡಿದ್ದರಿಂದ ಸಂತ್ರಸ್ತರಿಗೆ ನ್ಯಾಯ ಸಿಗಲು ಸಾಧ್ಯವೆ?
* ಶ್ರೀಮಠದ ಮೇಲೆ ನಡೆಯುತ್ತಿರುವ ನಿರಂತರ ಷಡ್ಯಂತ್ರದ ಮುಂದುವರಿದ ಭಾಗವೆ ಇದು?
* ಈ ನಿರ್ಧಾರದಿಂದ ದಕ್ಷ ಪೊಲೀಸರ ನೈತಿಕ ಸ್ಥೈರ್ಯವನ್ನು ಉಡುಗಿಸಿದಂತಾಗುವುದಿಲ್ಲವೆ?
* ಆರೋಪಿಗಳು ಕೇಳಿದಂತೆ ಪ್ರಕರಣ ಹಿಂಪಡೆದರೆ ಸಮಾಜದ ಸ್ಥಿತಿ ಏನಾಗಬಹುದು?
* ಪೂರ್ಣ ಪ್ರಮಾಣದ ವಿಚಾರಣೆ ನಡೆದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ನ್ಯಾಯಾಲಯ ಹೇಳಿದ್ದರೂ, ಪ್ರಕರಣ ಹಿಂಪಡೆದಿರುವುದು ನ್ಯಾಯಾಂಗದ ನಿಂದನೆಯಾಗುವುದಿಲ್ಲವೆ? [ಹೆಣ್ಣಿನ ಮೇಲೆ 169 ಬಾರಿ ಅತ್ಯಾಚಾರ ಆಗಲು ಸಾಧ್ಯವೇ?]

ಮಾಣಿ ವಲಯದ ಅಧ್ಯಕ್ಷ ಸೊಂದಿ ಶಂಕರನಾರಾಯಣ ಭಟ್, ಕಾರ್ಯದರ್ಶಿ ಮಹಾಲಕ್ಷ್ಮೀ ಭಟ್ ಮಿತ್ತೂರು, ರಾಜಾರಾಮ ಕಾಡೂರು, ಗೋವಿಂದ ಭಟ್ ಮುದ್ರಜೆ, ಸುಬ್ರಹ್ಮಣ್ಯ ಭಟ್ ಬಡೆಕ್ಕಿಲ, ಶಿವಪ್ರಸಾದ್ ಕೈಂತಜೆ, ರಘುರಾಮ್ ಕಂಪದಕೋಡಿ, ಸೀತಾರಾಮ ಭಟ್, ಉಮಾಕಿರಣ್ ಮೊದಲಾದವರು ಸೇರಿದಂತೆ ಮಠದ ನೂರಾರು ಅಭಿಮಾನಿಗಳು ಹಾಜರಿದ್ದರು.

English summary
Devotees of Sri Raghaveshwara Swamiji of Ramachandrapura math, Hosanagar in Shivamogga district, question withdrawal of fake cd case filed against seer. They have submitted a memorandum to governor Wajubhai Wala through Belthangadi taluk tahasildar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X