ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಪಿಳ್ಳಮುನಿಶಾಮಪ್ಪ ಯೂಟರ್ನ್, ರಾಜೀನಾಮೆ ವಾಪಸ್

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಮಾತುಕತೆ ಸಂಧಾನ ಫಲದಿಂದ ದೇವನಹಳ್ಳಿ ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.

By Ramesh
|
Google Oneindia Kannada News

ಬೆಂಗಳೂರು, ಫೆಬ್ರವರಿ. 24 : ನಿಸರ್ಗ ನಾರಾಯಣಸ್ವಾಮಿ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡ ಹಿನ್ನಲೆಯಲ್ಲಿ ವರಿಷ್ಠರ ಜತೆ ಮುನಿಸಿಕೊಂಡು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿಡಿದ್ದ ದೇವನಹಳ್ಳಿ ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ ಇದೀಗ ಯೂಟರ್ನ್ ಹೊಡೆದಿದ್ದಾರೆ.

ಗುರುವಾರ ಅಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪಿಳ್ಳಮುನಿಶಾಮಪ್ಪ ಶುಕ್ರವಾರ ಬೆಳಗ್ಗೆ ಸ್ಪೀಕರ್ ಕೆ.ಬಿ ಕೋಳಿವಾಡ ಅವರ ಮನೆಗೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ.[ಜೆಡಿಎಸ್ ನಲ್ಲಿ ಭಿನ್ನಮತ, ಶಾಸಕ ಸ್ಥಾನಕ್ಕೆ ಪಿಳ್ಳಮುನಿಶಾಮಪ್ಪ ರಾಜೀನಾಮೆ]

Devanahalli JDS MLA Pilla Munishamappa withdrawn his resignation of mla post

ಜೆಡಿಎಸ್ ವರಿಷ್ಠ ದೇವೇಗೌಡ ಅವರ ಮಾತುಕತೆ ಸಂಧಾನ ಫಲಪ್ರದಯಿಂದ ರಾಜೀನಾಮೆ ಹಿಂಪಡೆದುಕೊಂಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪಿಳ್ಳ ಮುನಿಶಾಮಪ್ಪ ಅವರ ಮನವೊಲಿಸಲು ಪ್ರಯತ್ನ ವಿಫಲವಾಗಿತ್ತು.

ರಾಜೀನಾಮೆ ಹಿಂಪಡೆದ ಬಳಿಕ ಪ್ರತಿಕ್ರಿಯಿಸಿರುವ ಪಿಳ್ಳಮುನಿಶಾಮಪ್ಪ ಅವರು, ಮೂರನೇ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರಿಂದ ಬೇಸರವಾಗಿತ್ತು. ಹಿಂದಿನಿಂದಲೇ ಪಕ್ಷಕ್ಕೆ ದುಡಿಯುತ್ತೇನೆ ಎಂದರು.

English summary
Devanahli JDS MLA Pilla Munishamappa withdrawn his resignation lettr from k b koliwad on February 24. After the discussion with HD Devegouda. Yesterday He submitted resignation to speaker KB Koliwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X