ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವದುರ್ಗ ಶಾಸಕ ವೆಂಕಟೇಶ್ ನಾಯಕ್ ಕಿರುಪರಿಚಯ

|
Google Oneindia Kannada News

ರಾಯಚೂರು, ಆಗಸ್ಟ್ 24 : ಮಾಜಿ ಸಂಸದ ಮತ್ತು ದೇವದುರ್ಗ ಕ್ಷೇತ್ರದ ಹಾಲಿ ಶಾಸಕ ಎ.ವೆಂಕಟೇಶ್ ನಾಯಕ್ ರೈಲು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಶಾಸಕರು ಸೇರಿದಂತೆ 5 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್‌ ಬಳಿ ಸೋಮವಾರ ಮುಂಜಾನೆ 2.30ರ ಸುಮಾರಿಗೆ ಗ್ರಾನೈಟ್ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರು-ನಾಂದೇಡ್ ರೈಲಿನ ಎಸಿ ಕೋಚ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಕೋಚ್‌ನಲ್ಲಿದ್ದ ರೈಲ್ವೆ ಸಿಬ್ಬಂದಿ, ಶಾಸಕ ಸೇರಿ ಐವರು ಮೃತಪಟ್ಟಿದ್ದಾರೆ.
[ಅಪಘಾತದಲ್ಲಿ ಶಾಸಕ ವೆಂಕಟೇಶ್ ನಾಯಕ್ ದುರ್ಮರಣ]

ಎಸಿ ಕೋಚ್‌ನಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ. 4 ಶವದ ಗುರುತು ಪತ್ತೆಯಾಗಿದ್ದು, ಶವಗಳನ್ನು ಪೆನುಕೊಂಡ ಆಸ್ಪತ್ರೆಗೆ ಸಾಗಿಸಲಾಗಿದೆ. ವೆಂಕಟೇಶ್ ನಾಯಕ್ ಅವರ ಮೃತದೇಹದ ಗುರುತನ್ನು ಕುಟುಂದವರು ಪತ್ತೆ ಹಚ್ಚಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ.

1936ರ ಜೂನ್ 6ರಂದು ಜನಿಸಿದ ವೆಂಕಟೇಶ್ ನಾಯಕ್ ಅವರು, ನಾಲ್ಕು ಬಾರಿ ರಾಯಚೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಜಯಗಳಿಸಿ, ವಿಧಾನಸಭೆಗೆ ಆರಿಸಿ ಬಂದಿದ್ದರು. ಸರಳ, ಸಜ್ಜನಿಕೆಯ ರಾಜಕಾರಣಿ ವೆಂಕಟೇಶ್ ನಾಯಕ್ ಅವರ ಕಿರುಪರಿಚಯ ಇಲ್ಲಿದೆ.....

ರೈಲು ಅಪಘಾತದಲ್ಲಿ ಶಾಸಕರ ದುರ್ಮರಣ

ರೈಲು ಅಪಘಾತದಲ್ಲಿ ಶಾಸಕರ ದುರ್ಮರಣ

ಆಂಧ್ರಪ್ರದೇಶ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್‌ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ರಾಯಚೂರಿನ ಮಾಜಿ ಸಂಸದ ಮತ್ತು ದೇವದುರ್ಗ ಕ್ಷೇತ್ರದ ಹಾಲಿ ಶಾಸಕ ಎ.ವೆಂಕಟೇಶ್ ನಾಯಕ್ ಸೇರಿದಂತೆ 5 ಪ್ರಯಾಣಿಕರು ಮೃತಪಟ್ಟಿದ್ದಾರೆ.

1968ರಲ್ಲಿ ರಾಜಕೀಯ ಪ್ರವೇಶ

1968ರಲ್ಲಿ ರಾಜಕೀಯ ಪ್ರವೇಶ

1936ರ ಜೂನ್ 6ರಂದು ಜನಿಸಿದ ವೆಂಕಟೇಶ್ ನಾಯಕ್ ಅವರು 1968ರಲ್ಲಿ ರಾಜಕೀಯ ಪ್ರವೇಶ ಮಾಡಿದರು. ಒಟ್ಟು ನಾಲ್ಕು ಬಾರಿ ರಾಯಚೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.

ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದರು

ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದರು

2013ರ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರದಲ್ಲಿ 62,070 ಮತಗಳನ್ನು ಪಡೆದು ಬಿಜೆಪಿಯ ಶಿವನಗೌಡ ನಾಯಕ್ ಅವರ ವಿರುದ್ಧ ವೆಂಕಟೇಶ್ ನಾಯಕ್ ಜಯಗಳಿಸಿದ್ದರು.

ಅಜ್ಜ-ಮೊಮ್ಮಗನ ನಡುವೆ ಸ್ಪರ್ಧೆ

ಅಜ್ಜ-ಮೊಮ್ಮಗನ ನಡುವೆ ಸ್ಪರ್ಧೆ

ವಿಧಾನಸಭೆ ಚುನಾವಣೆಯಲ್ಲಿ ವರಸೆಯಲ್ಲಿ ಅಜ್ಜ-ಮೊಮ್ಮಗನ ನಡುವೆ ಸ್ಪರ್ಧೆ ಉಂಟಾಗಿತ್ತು. ವೆಂಕಟೇಶ್ ನಾಯಕ್ ಮತ್ತು ಬಿಜೆಪಿಯ ಶಿವನಗೌಡ ನಾಯಕ್ ಎದುರಾಳಿಗಳಾಗಿದ್ದರು. 2008ರ ಚುನಾವಣೆಯಲ್ಲಿ ಶಿವನಗೌಡ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಅಜ್ಜ ವೆಂಕಟೇಶ್ ನಾಯಕ್ ಗೆಲುವು ಸಾಧಿಸಿದ್ದರು.

2013ರ ಚುನಾವಣಾ ಫಲಿತಾಂಶ

2013ರ ಚುನಾವಣಾ ಫಲಿತಾಂಶ

ದೇವದುರ್ಗ ಕ್ಷೇತ್ರದ 2013ನೇ ಸಾಲಿನ ಚುನಾವಣಾ ಫಲಿತಾಂಶ

* ಎ.ವೆಂಕಟೇಶ್ ನಾಯಕ್ (ಕಾಂಗ್ರೆಸ್) - 62,070
* ಕೆ.ಶಿವನಗೌಡ ಬಾಯಕ್ (ಬಿಜೆಪಿ) - 58,370
* ಶಾಂತ ಗೌಡ (ಕೆಜೆಪಿ) - 2,747 [ಮಾಹಿತಿ : Indiavotes]

English summary
Former MP and Devadurga MLA A.Venkatesh Naik killed when a truck collided with Bengaluru-Nanded express in Andhra Pradesh on Monday. Here is profile of MLA Venkatesh Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X