ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಫಲಿತಾಂಶ ವಿಳಂಬ, ಕಾಮೆಡ್ ಕೆಗೆ ಲಾಭ

2017ರ ಸಿಇಟಿ ಫಲಿತಾಂಶ ವಿಳಂಬವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ.ಕನ್ಸೋರ್ಟಿಯಂ ಆಫ್ ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಡೆಂಟಲ್ ಕಾಲೇಜ್ಸ್ ಆಫ್ ಕರ್ನಾಟಕ (COMEDK) ಪರೀಕ್ಷೆ ಮುಂಚಿತವಾಗಿ ಬರಲಿದೆ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಮೇ 26: 2017ರ ಸಿಇಟಿ ಫಲಿತಾಂಶ ವಿಳಂಬವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದರಿಂದಾಗಿ ಕನ್ಸೋರ್ಟಿಯಂ ಆಫ್ ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಡೆಂಟಲ್ ಕಾಲೇಜ್ಸ್ ಆಫ್ ಕರ್ನಾಟಕ (COMEDK) ಪರೀಕ್ಷೆ ಮುಂಚಿತವಾಗಿ ನಡೆಸುವ ಸಾಧ್ಯತೆ ಹೆಚ್ಚಿದೆ.

ಮೇ 27ರಂದು ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಳಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) ಹಾಗೂ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷಟ್ (ಐಸಿಎಸ್‍ಇ)ಮಾನ್ಯತೆ ಹೊಂದಿರುವ ಕಾಲೇಜುಗಳಲ್ಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ತಡವಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವೂ ವಿಳಂಬವಾಗಲಿದೆ.

2017ರ ಸಿಇಟಿ ಫಲಿತಾಂಶವು ಮೇ 30 ರಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೇಳಾಪಟ್ಟಿಯಂತೆ ಜೂ.1ರಿಂದ ದಾಖಲೆಗಳ ಪರಿಶೀಲನೆ ಆರಂಭವಾಗಬೇಕಿದೆ.

Delay in Karnataka CET 2017 results: Expensive COMEDK likely to be held first

ಕಾಮೆಡ್ ಕೆ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆ ಜೂನ್ 21ರಂದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿ ಪಡಿಸಿದೆ. ಅದರೆ ಸಿಇಟಿ ಶ್ರೇಯಾಂಕ ಪಟ್ಟಿ ಪ್ರಕಟ ಮಾಡುವುದು ವಿಳಂಬವಾಗುವ ಹಿನ್ನಲೆಯಲ್ಲಿ ವಿಧಿ ಇಲ್ಲದೆ ಮೂರು ಪಟ್ಟು ಅಧಿಕ ದುಡ್ಡು ತೆತ್ತು ಖಾಸಗಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಸೀಟಿಗಾಗಿ ಅಭ್ಯರ್ಥಿಗಳು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಮೆಡ್ ಕೆ ಯುಜಿಇಟಿ ಶ್ರೇಯಾಂಕ ಪಟ್ಟಿಯನ್ನು ಮೇ 29ರಂದು ಪ್ರಕಟಿಸಲಿದ್ದು, ಕೌನ್ಸಲಿಂಗ್ ಕೂಡಾ ಈ ಬಾರಿ ಆನ್ ಲೈನ್ ಮೂಲಕ ನಡೆಸಲಿದೆ. ಕಾಮೆಡ್ ಕೆ ಮೂಲಕ ಸೀಟು ಪಡೆದ ಅಭ್ಯರ್ಥಿಗಳು ಮೊದಲ ಸುತ್ತಿನ ನಂತರ, ಸಿಇಟಿ ಕೌನ್ಸಿಲಿಂಗ್ ನಲ್ಲಿ ಬೇರೊಂದು ಕಡೆ ಸೀಟ್ ಸಿಕ್ಕರೆ ಕಾಮೆಡ್ ಕೆ ಸೀಟನ್ನು ಬಿಟ್ಟುಬಿಡಬಹುದು.

English summary
The Karnataka Examination Authorities' decision to delay declaration of Common Entrance Test (CET) 2017 results may make way for Consortium of Medical, Engineering and Dental Colleges of Karnataka (COMEDK) to be held earlier. The tentative schedule by the KEA has now placed COMEDK seat allotment ahead of CET
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X