ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆಯ ಬಸವನಗರ, ವಿದ್ಯಾನಗರದಿಂದ ಕ್ರೈಂ ಸುದ್ದಿ

By Mahesh
|
Google Oneindia Kannada News

ದಾವಣಗೆರೆ, ಜು.31: ದಾವಣಗೆರೆಯ ಬಸವನಗರ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಕೊಲೆ ಹಾಗೂ ವಂಚನೆ ಪ್ರಕರಣದ ಸುದ್ದಿ ಇಲ್ಲಿದೆ.

ಕ್ಷುಲ್ಲಕ ಕಾರಣಕ್ಕೆ ಪತಿ ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದ ಘಟನೆ ಇಲ್ಲಿನ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಾಜ ಅರಸು ಬಡಾವಣೆಯ 'ಸಿ' ಬ್ಲಾಕ್ ನಲ್ಲಿ ನಡೆದಿದೆ. ಮುಕುಂದಪ್ಪ ಎಂಬ ಉದ್ಯಮಿ ತನ್ನ ಪತ್ನಿ 29 ವರ್ಷ ವಯಸ್ಸಿನ ಸರೋಜಮ್ಮ ಎಂಬುವವರನ್ನು ಕೊಲೆಗೈದು ಪರಾರಿಯಾಗಿದ್ದಾರೆ. [ದಾವಣಗೆರೆಯ ಸುಲ್ತಾನ್ ಜ್ಯುವೆಲ್ಲರಿಗೆ ಬನ್ನಿ,ಎಆರ್ ರೆಹಮಾನ್ ಆಹ್ವಾನ]

ಸರೋಜಮ್ಮ ಹಾಗೂ ಮುಕುಂದಪ್ಪ ಇಬ್ಬರು ಮದುವೆಯಾಗಿ 6 ವರ್ಷಗಳಾಗಿವೆ. ಮದುವೆಯಾಗಿ ಮೊದಲ ಮೂರು ವರ್ಷ ಸುಖ ದಾಂಪತ್ಯ ಕಂಡ ಇಬ್ಬರಿಗೂ ಮಕ್ಕಳಾಗಿರಲಿಲ್ಲ.

ಕಳೆದ 2-3 ವರ್ಷಗಳಿಂದ ಈ ದಂಪತಿಗಳ ನಡುವೆ ಹೊಂದಾಣಿಕೆ ಇಲ್ಲದೇ ವೈಮನಸ್ಸುಂಟಾಗಿತ್ತು. ಗುರುವಾರ ರಾತ್ರಿ ಇಬ್ಬರ ನಡುವಿನ ಮನಸ್ತಾಪ ಹೆಚ್ಚಾಗಿ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ತಿರುಗಿಗಿದೆ. ಕೋಪಗೊಂಡ ಮುಕುಂದಪ್ಪ ಆಕೆಯ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಕುತ್ತಿಗೆ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. [ಹರಿಹರ-ಬೆಂಗಳೂರು ಇಂಟರ್ ಸಿಟಿ ರೈಲು ರೆಡಿ!]

ಮೃತ ಸರೋಜಮ್ಮನ ಪತಿ ಸೇರಿದಂತೆ ಅತ್ತೆ, ನಾದಿನಿ ವಿರುದ್ಧ ದೂರು ದಾಖಲಾಗಿಸಿಕೊಂಡಿರುವ ಪೊಲೀಸರು, ಮುಕುಂದಪ್ಪನಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಎಂ.ಬಿ. ಬೋರಲಿಂಗಯ್ಯ, ಎಎಸ್ಪಿ ಗಿರಿರಾಜ್ ಎಸ್. ಬಾವಿಮನಿ, ಡಿವೈಎಸ್ಪಿ ಪಾಂಡುರಂಗಯ್ಯ ಸೇರಿದಂತೆ ಸಿಪಿಐ ಜಿ.ಬಿ. ಉಮೇಶ್, ಬಸವನಗರ ಠಾಣೆ ಪಿಎಸ್ಐ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Davangere

ವಿದ್ಯಾನಗರ ಪೊಲೀಸ್ ಠಾಣೆ ಗುನ್ನೆ ನಂ: 87/2015, ಕಲಂ: 419. 420 ಐ.ಪಿ.ಸಿ.

ಪಿರ್ಯಾದಿ ನವೀನ್ ಕುಮಾರ್. ಶಿವಕುಮಾರ ಸ್ವಾಮಿ ಬಡಾವಣೆ 2ನೇ ಹಂತ ದಾವಣಗೆರೆ ನಿವಾಸಿ ನೀಡಿದ ದೂರು ಹೀಗಿದೆ: ನನ್ನ ಮಾವ ಆಂಜನೇಯ ಬಡಾವಣೆ ವಾಸಿ ಎಚ್.ಎಂ.ರೇವಣಸಿದ್ದಪ್ಪ ನಿವೃತ್ತ ತಹಶೀಲ್ದಾರರು ಇವರ ಮೊಬೈಲ್ ನಂಬರಿಗೆ ಯಾರೋ ಪ್ರವೀಣ ಎಂಬ ವ್ಯಕ್ತಿ ಜಡ್ಜ್ ಎಂದು ಹೇಳಿಕೊಂಡು ಮೊಬೈಲ್ ನಂಬರನಿಂದ ಕರೆಮಾಡಿದ್ದಾರೆ.

ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳಿಗೆ ನ್ಯಾಯಾಧೀಶರ ಕೋಟಾದಡಿಯಲ್ಲಿ 2 ಸಿಎಓ ಹುದ್ದೆಗಳು ಮತ್ತು 5 ಶಿರಸ್ತೆದಾರ್ ಖಾಲಿ ಹುದ್ದೆಗಳಿದ್ದು, ಕೊಡಿಸುವುದಾಗಿ ಹೇಳಿ ನಂಬಿಸಿ ವಿವಿಧ ದಿನಾಂಕಗಳಂದು ದಿ.12.05.2015 ರಿಂಧ ದಿ.30.05.2015 ರ ಮಧ್ಯೆ ಒಟ್ಟು 20.50.400 ರೂ ಹಣವನ್ನು ಒಟ್ಟು 8 ಜನರಿಂದ ಪಡೆದು ಮೋಸ ಮಾಡಿರುವ ಜಡ್ಜ್ ಮತ್ತು ಕ್ಲರ್ಕ್ ಎಂದು ನಟಿಸಿ ಪ್ರವೀಣ ಎಂದು ಹೆಸರು ಹೇಳಿಕೊಂಡ ವ್ಯಕ್ತಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

English summary
Davangere Crime beat: A murder another fraud case reported in Basavanaga Police station and Vidyanagar police station limits. Husband killed his wife in Devaraj Urs Layout and a elderly person was cheated by a person in Anjaneya Layout, Davangere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X