ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವೆಂಕಯ್ಯ ಆಯ್ಕೆಯಿಂದ ರಾಜ್ಯಕ್ಕೆ ಲಾಭವೇ ಹೆಚ್ಚು'

|
Google Oneindia Kannada News

ಬೆಂಗಳೂರು, ಮೇ 25 : ' ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿದರೆ ರಾಜ್ಯಕ್ಕೆ ಹೆಚ್ಚಿನ ಲಾಭವಾಗಲಿದೆ. ಈ ವಿಚಾರದಲ್ಲಿ ಭಾವನಾತ್ಮಕವಾಗಿ ಯೋಚಿಸುವ ಬದಲು ರಾಜ್ಯದ ಹಿತದೃಷ್ಟಿಯಿಂದ ಯೋಚಿಸಬೇಕಿದೆ' ಎಂದು ಮಾಜಿ ಸಚಿವ ಸಿ.ಟಿ.ರವಿ ಅವರು ಸಲಹೆ ನೀಡಿದರು.

ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ.ರವಿ ಅವರು, 'ಕೇಂದ್ರ ನಗರಾಭಿವೃದ್ದಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಿದರೆ ರಾಜ್ಯಕ್ಕೆ ಲಾಭವೇ ಹೊರತು ನಷ್ಟವಾಗುವುದಿಲ್ಲ' ಎಂದು ನಾಯ್ಡು ಅವರ ಆಯ್ಕೆಯನ್ನು ಸಮರ್ಥಿಸಿಕೊಂಡರು. [ನಾಯ್ಡು ಆಯ್ಕೆ ವಿರೋಧಿಸಿ ಕರವೇ ಪ್ರತಿಭಟನೆ]

ct ravi

'ವೆಂಕಯ್ಯ ನಾಯ್ಡು ಅವರಿಗೆ ಈಗ ಇರುವ ಪ್ರಭಾವಕ್ಕೆ ಬೇರೆ ರಾಜ್ಯದಲ್ಲೂ ಸ್ಪರ್ಧಿಸಿ ಆಯ್ಕೆಯಾಗಬಹುದು. ಇಲ್ಲಿಂದ ಆಯ್ಕೆಯಾಗಿ ಕೈ ಎತ್ತುವ ಅಭ್ಯರ್ಥಿಗಳಿಗಿಂತ ಕೈ ಹಿಡಿಯುವ ಅಭ್ಯರ್ಥಿಗಳು ಮೇಲು. ಆದ್ದರಿಂದ, ವೆಂಕಯ್ಯ ನಾಯ್ಡು ಅವರ ಆಯ್ಕೆ ಸರಿಯಾಗಿದೆ' ಎಂದರು. [ಕರ್ನಾಟಕದಿಂದ ರಾಜ್ಯಸಭೆಗೆ ಮತ್ತೆ ಎಂ ವೆಂಕಯ್ಯ ನಾಯ್ಡು]

'ಈ ವಿಚಾರದಲ್ಲಿ ಭಾವನಾತ್ಮಕವಾಗಿ ಆಲೋಚಿಸುವ ಬದಲು ರಾಜ್ಯದ ಹಿತದೃಷ್ಟಿಯಿಂದ ಯೋಚಿಸಬೇಕು. ಕೇಂದ್ರದಲ್ಲಿ ಪ್ರಭಾವ ಹೊಂದಿರುವ ಪ್ರಧಾನಿ ಜೊತೆ ನೇರವಾಗಿ ಮಾತನಾಡುವ ಶಕ್ತಿ ಹೊಂದಿರುವ ವೆಂಕಯ್ಯ ನಾಯ್ಡು ಅವರ ಆಯ್ಕೆ ಉತ್ತಮವಾಗಿದೆ' ಎಂದು ಸಿ.ಟಿ.ರವಿ ಹೇಳಿದರು. [#VenkayyaSakayya ಎಂದ ರೊಚ್ಚಿಗೆದ್ದ ಕನ್ನಡಿಗರು]

ವೆಂಕಯ್ಯ ವಿರುದ್ಧ ಸರಣಿ ಪ್ರತಿಭಟನೆ : ವೆಂಕಯ್ಯ ನಾಯ್ಡು ಅವರನ್ನು ರಾಜ್ಯಸಭೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರ್ನಾಟಕ ಬಿಜೆಪಿ ಕಚೇರಿ ಮುಂದೆ ಮಂಗಳವಾರ ಪತ್ರಿಭಟನೆ ನಡೆಸಿದ್ದರು.

ವೆಂಕಯ್ಯ ನಾಯ್ಡು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಬಾರದು ಎಂದು ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಆಂದೋಲನ ನಡೆದಿದೆ. ಟ್ವಿಟ್ಟರಿನಲ್ಲಿ #GoBackVenkaiah ಮತ್ತು #venkayyasakayya ಎಂಬ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನ ನಡೆಸಲಾಗಿದೆ.

English summary
Karnataka BJP leader C.T.Ravi defends Urban Development minister M. Venkaiah Naidu candidature for Rajya Sabha from Karnataka assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X