ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಲ್ಲಿ ಮುಗಿಯದ ರಗಳೆ: ಬಿಎಸ್ವೈ ವಿರುದ್ದ ಹೊಸ ಹೋರಾಟಕ್ಕೆ ನಾಂದಿ

ರಾಯಣ್ಣ ಬ್ರಿಗೇಡ್ ಸಂಘಟನೆಯ 24 ಪ್ರಮುಖರು ಯಡಿಯೂರಪ್ಪನವರಿಗೆ ಬರೆದ ' ಸಹಿಯಿಲ್ಲದ' ಪತ್ರ ಮಾಧ್ಯಮಗಳಿಗೆ ಬಿಡುಗಡೆಯಾಗುವ ಮೂಲಕ ಇಬ್ಬರು ಬಿಜೆಪಿಯ ಹಿರಿಯ ಮುಖಂಡರ ನಡುವಿನ ಕಲಹ ಹೊಸದಾರಿ ಹಿಡಿದಿದೆ.

|
Google Oneindia Kannada News

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನವನ್ನು ಗೆಲ್ಲಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡುತ್ತಿದ್ದರೆ, ಪಕ್ಷದೊಳಗಿನ ಆಂತರಿಕ ಕಿತ್ತಾಟ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಯಡಿಯೂರಪ್ಪ ಮತ್ತು ಈಶ್ವರಪ್ಪನವರ ನಡುವಣ ಶೀತಲ ಸಮರಕ್ಕೆ ದಶಕಗಳ ಇತಿಹಾಸವಿದೆ. ಅದು ಇತ್ತೀಚಿನ ದಿನಗಳಲ್ಲಿ ರಾಯಣ್ಣ ಬ್ರಿಗೇಡ್ ಎನ್ನುವ ಹೆಸರಿನಲ್ಲಿ ಶುರುವಾದ ಸಂಘಟನೆಯ ನಂತರ ಪಕ್ಷಕ್ಕೆ 'ಶೋಭೆ' ತರದ ರೀತಿಯಲ್ಲಿ ಮುಂದುವರಿಯುತ್ತಿದೆ. (ಯಡ್ಡಿ-ಈಶು ಜಗಳ, ಬಿಜೆಪಿ ಸದಸ್ಯರು ವಿಲವಿಲ)

ವರಿಷ್ಠರ ಎಚ್ಚರಿಕೆಗೂ ಸೊಪ್ಪು ಹಾಕದೆ, ಸಂಘಟನೆಯ ಇಬ್ಬರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿದ್ದರೂ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಣ ಕಲಹ ಬೀದಿರಂಪವಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಯಣ್ಣ ಸಂಘಟನೆಯ 24 ಪ್ರಮುಖರು ಯಡಿಯೂರಪ್ಪನವರಿಗೆ ಬರೆದ ' ಸಹಿಯಿಲ್ಲದ' ಪತ್ರ ಮಾಧ್ಯಮಗಳಿಗೆ ಬಿಡುಗಡೆಯಾಗಿದೆ.

ಪಕ್ಷದೊಳಗಿನ ಗೊಂದಲದಂತೆ, ಈ ಪತ್ರ ಕೂಡಾ ಹಲವು ಗೊಂದಲಿನ ಗೂಡಾಗಿದ್ದು ಕೆಲವು ಮುಖಂಡರು ಈ ಪತ್ರದ ಬಗ್ಗೆ ನಮಗೇನೂ ತಿಳಿದಿಲ್ಲ ಎಂದಿದ್ದಾರೆ. ಯಡಿಯೂರಪ್ಪನವರ ವಿರುದ್ದ ಅಸಮಾಧಾನ ಹೊರಹಾಕುವ ಪತ್ರ ಇದಾಗಿದ್ದು, ಪತ್ರದ ಸಾರಾಂಶ ಇಂತಿದೆ, ಮುಂದೆ ಓದಿ..

 ಯಡಿಯೂರಪ್ಪ

ಯಡಿಯೂರಪ್ಪ

ನೀವು ರಾಜ್ಯಾಧ್ಯಕ್ಷರಾದಾಗ ಎಲ್ಲಾ ಕಾರ್ಯಕರ್ತರು ಸಂತೋಷ ಪಟ್ಟರು. ಬಿಜೆಪಿ ಅಧಿಕಾರಕ್ಕೆ ಬಂದು ನೀವು ಸಿಎಂ ಆಗುತ್ತೀರಿ ಎಂದು ಎಲ್ಲರೂ ಹರ್ಷ ಪಟ್ಟೆವು. ಪಕ್ಷ ಸಂಘಟನೆಯನ್ನು ಒಮ್ಮತದಿಂದ ನಡೆಸಿಕೊಂಡು ಹೋಗುತ್ತೀರಿ ಎಂದು ಭಾವಿಸಿದ್ದೆವು. ಆದರೆ ಆಗಿದ್ದೇ ಬೇರೆ.

ಬಿಎಸ್ವೈ - ಈಶ್ವರಪ್ಪ

ಬಿಎಸ್ವೈ - ಈಶ್ವರಪ್ಪ

ರಾಜ್ಯ ವಕ್ತಾರರ ನೇಮಕ, ರಾಜ್ಯ ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷರು ಮುಂತಾದ ಹುದ್ದೆಗಳನ್ನು ಯಾರ ಜೊತೆಯೂ ಚರ್ಚಿಸದೇ ಏಕಪಕ್ಷೀಯವಾಗಿ ಘೋಷಿಸಿದ್ದೀರಿ. ಪಕ್ಷದ ಕೋರ್ ಕಮಿಟಿಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.

 ಕಾರ್ಯಕರ್ತರು

ಕಾರ್ಯಕರ್ತರು

ಪಕ್ಷ ಸಂಘಟನೆಗೇ ತಮ್ಮ ಜೀವನವನ್ನು ತೊಡಗಿಸಿಕೊಂಡ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದಿರಿ. ಹೀಗಾಗಿ ಪ್ರತೀ ಜಿಲ್ಲೆಗಳಲ್ಲಿ ಎರಡೆರಡು ಬಣ ನಿರ್ಮಾಣವಾಗಿ, ಪಕ್ಷದ ಕಾರ್ಯಕರ್ತರಲ್ಲೇ ಕ್ಲೇಷ ಉಂಟಾಗುವಂತಾಯಿತು.

 ಸೊಗಡು ಶಿವಣ್ಣ

ಸೊಗಡು ಶಿವಣ್ಣ

ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ ಮಾಜಿ ಸಚಿವರಾದ ಸೊಗಡು ಶಿವಣ್ಣ, ಎಂ ಬಿ ನಂದೀಶರಿಗೆ ಕೊಟ್ಟ ನೋಟೀಸನ್ನು ವಾಪಸ್ ಪಡೆಯಬೇಕು. ಹನುಮಂತಪ್ಪ ಅಮಾನತನ್ನು ಹಿಂದಕ್ಕೆ ಪಡೆಯಬೇಕು, ಹಾಗೇ ಇತರ ಕಾರ್ಯಕರ್ತರ ಮೇಲೆ ತೆಗೆದುಕೊಂಡ ಕ್ರಮವನ್ನು ಕೈಬಿಡಿ.

 ಸಹಿಯಿಲ್ಲದ ಪತ್ರ

ಸಹಿಯಿಲ್ಲದ ಪತ್ರ

ತಮ್ಮ ವಿಶ್ವಾಸಿಗಳೆಂದು ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್ ಎ ರವೀಂದ್ರನಾಥ್, ರಘುನಾಥ್ ಮಲ್ಕಾಪುರೆ ಸೇರಿದಂತೆ 24 ಮುಖಂಡರ ಹೆಸರನ್ನು ಪತ್ರದಲ್ಲಿ ಬರೆಯಲಾಗಿದೆ.

English summary
Crisis in BJP, letter to BJP State President B S Yeddyurappa by 24 leaders of Rayanna Brigade Organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X