ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಹಗರಣ, ಹೊಸ ದೂರು ದಾಖಲಿಸಿಕೊಳ್ಳಬೇಡಿ

|
Google Oneindia Kannada News

ಬೆಂಗಳೂರು, ಜುಲೈ 04 : ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರು ಸಂಸ್ಥೆಯ ಭ್ರಷ್ಟಾಚಾರದ ಕುರಿತು ಹೊಸ ದೂರು ದಾಖಲಿಸಿಕೊಳ್ಳಬೇಡಿ ಎಂದು ಆದೇಶ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದ ಆರೋಪದ ಕುರಿತು ಹೊಸದಾಗಿ ಯಾವುದೇ ದೂರು ದಾಖಲಿಸಬಾರದು ಹಾಗೂ ತನಿಖೆ ಮುಂದುವರಿಸಬಾರದು ಎಂದು ವೈ.ಭಾಸ್ಕರ್‌ರಾವ್‌ ಅವರು ಎಡಿಜಿಪಿ ಪ್ರೇಮ್‌ ಶಂಕರ್‌ ಮೀನಾ ಅವರಿಗೆ ಸೂಚನೆ ಕೊಟ್ಟಿದ್ದಾರೆ. [ಲೋಕಾಯುಕ್ತರ ಪದಚ್ಯುತಿ ಕಾನೂನು ಪ್ರಕ್ರಿಯೆಗಳೇನು?]

lokayukta

ಕಾನೂನಿನ ಅನ್ವಯ ಲೋಕಾಯುಕ್ತ ಪೊಲೀಸರ ಕಾರ್ಯದಲ್ಲಿ ಲೋಕಾಯುಕ್ತರು ಹಸ್ತಕ್ಷೇಪ ಮಾಡುವಂತಿಲ್ಲ. ಆದ್ದರಿಂದ ಭಾಸ್ಕರರಾವ್ ಅವರು ನೀಡಿರುವ ಈ ಆದೇಶ ವಿವಾದಕ್ಕೆ ಕಾರಣವಾಗಿದೆ. [ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಮೂರ್ತಿ ಅವರ ದೂರನ್ನು ಮಾತ್ರ ಪರಿಗಣಿಸಬೇಕು. ಉಳಿದಂತೆ ಯಾವುದೇ ಹೊಸ ದೂರುಗಳನ್ನು ಸ್ವೀಕರಿಸಬಾರದು ಎಂದು ಲೋಕಾಯುಕ್ತರು ಸೂಚಿಸಿದ್ದಾರೆ. [ಲೋಕಾಯುಕ್ತ ಭಾಸ್ಕರರಾವ್ ರಾಜೀನಾಮೆ ನೀಡಲಿ]

ಅಶ್ವಿನ್ ರಾವ್ ವಿರುದ್ಧ ಆಂಧ್ರದಲ್ಲಿ ಎಫ್‌ಐಆರ್ : ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ವಿರುದ್ಧ ಆಂಧ್ರಪ್ರದೇಶದಲ್ಲಿ ಎಫ್‌ಐಆರ್ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಅವಿಭಜಿತ ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯಲ್ಲಿ ಅವರ ವಿರುದ್ಧ ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಾಗಿದೆ.

16 ಎಕರೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣವಿದಾಗಿದೆ. 2008ರಲ್ಲಿ ಜುಲೈ 13ರಂದು ಅಶ್ವಿನ್‌ರಾವ್‌ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

English summary
Karnataka Loka­yukta Justice Y.Bhaskar Rao has passed order directing ADGP Lokayukta not to proceed any investigation based on any complaints filed or to be filed in the case relating to corruption in Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X