ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದೀರ್ಘ ರಜೆ ಮೇಲೆ ತೆರಳಿದ ಲೋಕಾಯುಕ್ತ ಭಾಸ್ಕರರಾವ್

|
Google Oneindia Kannada News

ಬೆಂಗಳೂರು, ಜುಲೈ 07 : ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಹಲವಾರು ಕಡತಗಳನ್ನು ತೆಗೆದುಕೊಂಡು ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರು ಸುದೀರ್ಘ ರಜೆ ಮೇಲೆ ತೆರಳಿದ್ದಾರೆ.

ಸೋಮವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ ಬಳಿಕ ನ್ಯಾ.ಭಾಸ್ಕರರಾವ್ ಸುದೀರ್ಘ ರಜೆ ಮೇಲೆ ತೆರಳಿದರು. ಲೋಕಾಯುಕ್ತ ಕಚೇರಿಯಿಂದ ಹೊರಡುವ ಮೊದಲು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿದ ಅವರು ಕೈ ಮುಗಿದು ಮುಂದೆ ಸಾಗಿದರು. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

y bhaskar rao

ರಜೆ ಮೇಲೆ ತೆರಳಿರುವ ಲೋಕಾಯುಕ್ತರು ಎರಡು ಮೂಟೆಗಳಲ್ಲಿ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನ್ಯಾ.ಭಾಸ್ಕರ್‍ರಾವ್ ತೆರಳಿದ ಕಾರಿನ ಹಿಂಬದಿಯಲ್ಲಿ ಕಡತಗಳನ್ನು ಹೊತ್ತ ಕಾರು ಸಾಗಿತು. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ವರದಿ ಕೇಳಿದ ರಾಜ್ಯಪಾಲರು]

ದೂರು ಸ್ವೀಕರಿಸುವಂತಿಲ್ಲ : ಲೋಕಾಯುಕ್ತದಲ್ಲಿ ನಡೆದ ಹಣದ ಬೇಡಿಕೆ ಪ್ರಕರಣದ ಬಗ್ಗೆ ಅಶ್ವಿನ್ ರಾವ್ ವಿರುದ್ಧದ ಯಾವುದೇ ದೂರಗಳನ್ನು ಸ್ವೀಕರಿಸಬೇಡಿ ಎಂದು ನ್ಯಾ.ಭಾಸ್ಕರರಾವ್ ಅವರು ಮತ್ತೊಮ್ಮೆ ಲೋಕಾಯುಕ್ತದ ಅಧಿಕಾರಿಗಳಿಗೆ ಸೂಚನೆ ಕೊಟ್ಟು ರಜೆ ಮೇಲೆ ತೆರಳಿದ್ದಾರೆ. [ಲೋಕಾಯುಕ್ತ ಹಗರಣ, ಹೊಸ ದೂರು ದಾಖಲಿಸಿಕೊಳ್ಳಬೇಡಿ]

ಸರ್ಕಾರ ರಚನೆ ಮಾಡಿರುವ ವಿಶೇಷ ತನಿಖಾ ದಳ ಹಗರಣದ ವಿಚಾರಣೆಯನ್ನು ನಡೆಸುತ್ತಿದೆ. ಆದ್ದರಿಂದ, ಹೊಸ ದೂರು ಸ್ವೀಕಾರ ಮಾಡಿದರೆ ಹೈಕೋರ್ಟ್ ನೀಡಿರುವ ಆದೇಶದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ದೂರು ಸ್ವೀಕರಿಸಬೇಡಿ ಎಂದು ಸೂಚನೆ ಕೊಟ್ಟಿದ್ದಾರೆ.

English summary
Corruption in Karnataka Lokayukta : On Monday, July 6, 2015 Lokayukta Justice Y.Bhaskar Rao taken long leave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X