ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಕೇಸ್, ಅಶ್ವಿನ್ ರಾವ್ ಸಹಚರರಿಗೆ ನ್ಯಾಯಾಂಗ ಬಂಧನ

|
Google Oneindia Kannada News

ಬೆಂಗಳೂರು, ಜುಲೈ 31 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಶುಕ್ರವಾರ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಕೋರ್ಟ್ ಅಶೋಕ್ ಕುಮಾರ್‌ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿದೆ.

ಅಶೋಕ್ ಕುಮಾರ್, ಶ್ರೀನಿವಾಸಗೌಡ ಮತ್ತು ಶಂಕರೇಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಶುಕ್ರವಾರ ಲೋಕಾಯುಕ್ತ ಕೋರ್ಟ್‌ಗೆ ಹಾಜರಿಪಡಿಸಿದ್ದರು. ಈ ಸಂದರ್ಭದಲ್ಲಿ ಎಸ್‌ಪಿಸಿ ಜನಾರ್ದನ್ ಅವರು ಅಶೋಕ್ ಕುಮಾರ್ ಅವರನ್ನು ಎಸ್‌ಐಟಿ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. [ಅಶ್ವಿನ್ ರಾವ್ SIT ವಶಕ್ಕೆ]

corruption

ಎಸ್‌ಪಿಸಿ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿ.ಜಿ.ಬೋಪಯ್ಯ ಅವರು ಅಶೋಕ್ ಕುಮಾರ್‌ನನ್ನು ಎಸ್‌ಐಟಿ ವಶಕ್ಕೆ ನೀಡಿದರು. ಉಳಿದ ಆರೋಪಿಗಳಾದ ಶ್ರೀನಿವಾಸಗೌಡ ಮತ್ತು ಶಂಕರೇಗೌಡ ಅವರನ್ನು ಆ.14ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. [SIT ಯಿಂದ ಅಶೋಕ್ ಕುಮಾರ್ ಬಂಧನ]

ಯಾರು ಅಶೋಕ್ ಕುಮಾರ್? : ಅಶೋಕ್ ಕುಮಾರ್ ಮೂಲತಃ ಆಂಧ್ರಪ್ರದೇಶದ ವಾರಂಗಲ್ ನಿವಾಸಿಯಾಗಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿ ವಾಸಿಸುತ್ತಿದ್ದಾರೆ. ಮೊದಲು ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ನಂತರ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಆಂಧ್ರಪ್ರದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವಾಗ ಅಶ್ವಿನ್‌ ರಾವ್ ಪರಿಚಯವಾಗಿತ್ತು.

ಲೋಕಾಯುಕ್ತದಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ.ಭಾಸ್ಕರಾವ್ ಪುತ್ರ ಅಶ್ವಿನ್ ರಾವ್. ಲೋಕಾಯುಕ್ತ ಪಿಆರ್‌ಒ ಸಯ್ಯದ್ ರಿಯಾಜ್, ಅಶೋಕ್, ಶ್ರೀನಿವಾಸಗೌಡ ಮತ್ತು ಶಂಕರೇಗೌಡ ಅವರನ್ನು ಬಂಧಿಸಲಾಗಿದೆ.

English summary
The Lokayukta Special Court sent M.B.Srinivasa Gowda and Shankaregowda to judicial custody and Ashok Kumar to SIT custody. All three accused arrested by The Special Investigation Team (SIT) in connection with the alleged corruption case in Karnataka Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X