ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಸ್ಕರರಾವ್ ವಿರುದ್ಧದ ತನಿಖೆಗೆ ರಾಜ್ಯಪಾಲರ ಒಪ್ಪಿಗೆ ಬೇಕು

|
Google Oneindia Kannada News

ಬೆಂಗಳೂರು, ಮಾರ್ಚ್ 10 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾ.ಭಾಸ್ಕರರಾವ್ ಅವರ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರ ಒಪ್ಪಿಗೆ ಕೇಳಲಾಗಿದೆ. ಭಾಸ್ಕರರಾವ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಸರ್ಕಾರ ಒಪ್ಪಿಗೆ ನೀಡಿದೆ.

ಮಾಜಿ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಎಸ್‌ಐಟಿ ಸರ್ಕಾರದ ಅನುಮತಿ ಕೇಳಿತ್ತು. ಮೊಕದ್ದಮೆ ದಾಖಲು ಮಾಡುವ ಕುರಿತು ಸರ್ಕಾರಕ್ಕೆ 500 ಪುಟಗಳ ವಿವರಣೆ ನೀಡಲಾಗಿತ್ತು. [ಭಾಸ್ಕರರಾವ್ ವಿಚಾರಣೆ ಏಕೆ?]

vajubhai vala

ಕರ್ನಾಟಕ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ. ಕಾನೂನಿನ ಅನ್ವಯ ಮೊಕದ್ದಮೆ ದಾಖಲು ಮಾಡಲು ರಾಜ್ಯಪಾಲರು ಒಪ್ಪಿಗೆ ನೀಡಬೇಕಾಗಿದೆ. ಆದ್ದರಿಂದ ಕಡತಗಳನ್ನು ರಾಜಭವನಕ್ಕೆ ರವಾನಿಸಲಾಗಿದೆ. ರಾಜ್ಯಪಾಲ ವಜುಭಾಯಿ ವಾಲಾ ಒಪ್ಪಿಗೆ ನೀಡಿದರೆ ಭಾಸ್ಕರರಾವ್ ಅವರಿಗೆ ಸಂಕಷ್ಟ ಎದುರಾಗಲಿದೆ. [ಭಾಸ್ಕರರಾವ್ ರಾಜೀನಾಮೆ]

ಯಾವ ಆರೋಪಗಳಿವೆ? : ಭ್ರಷ್ಟಾಚಾರ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಐಪಿಸಿ ಸೆಕ್ಷನ್ 202 (ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದಿರುವುದು), 217 (ಅಪರಾಧವನ್ನು ಉದ್ದೇಶಪೂರ್ವಕ ಮರೆಮಾಚುವುದು) ರ ಅನ್ವಯ ಭಾಸ್ಕರರಾವ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಿದೆ. [ಲೋಕಾಯುಕ್ತದಲ್ಲಿ ಏನಿದು ಹಗರಣ?]

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನ್ಯಾ.ಭಾಸ್ಕರರಾವ್ ಅವರನ್ನು ವಿಚಾರಣೆ ನಡೆಸಲಿದೆ. ಅಶ್ವಿನ್ ರಾವ್ ಮತ್ತು ಇತರ ಆರೋಪಿಗಳು ಲೋಕಾಯುಕ್ತ ಕಚೇರಿಯ ಮುಖ್ಯ ಹಾಲ್ ಮತ್ತು ಲೋಕಾಯುಕ್ತರ ನಿವಾಸವನ್ನು ಬೆದರಿಕೆ ಹಾಕಲು ಬಳಸಿಕೊಂಡಿದ್ದರು ಎಂಬ ಆರೋಪಗಳಿವೆ, ಈ ಬಗ್ಗೆಯೂ ತನಿಖೆ ನಡೆಯಲಿದೆ.

ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದೆ.

English summary
Karnataka Governor Vajubhai Vala is yet to gave approval to prosecute former Lokayukta, Justice Bhaskar Rao. Special Investigating Team had sought sanction to prosecute Rao on the charge that he had not informed the law enforcement agencies about his son who was alleged to be involved in an extortion racket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X